ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ನಿಧನ ಹಿನ್ನೆಲೆ| ಪ್ರಧಾನಿ ಮೋದಿ ವಿದೇಶ ಪ್ರವಾಸ ಮೊಟಕು ಸಾಧ್ಯತೆ| ವಿದೇಶ ಪ್ರವಾಸ ಮೊಟಕುಗೊಳಿಸದಂತೆ ಮೋದಿಗೆ ಜೇಟ್ಲಿ ಕುಟುಂಬ ಮನವಿ| ಮಹತ್ವದ ಜಿ7 ಶೃಂಗಸಭೆ ಪ್ರವಾಸ ಮುಂದುವರೆಯಲಿ ಎಂದ ಜೇಟ್ಲಿ ಕುಟುಂಬ| ದು:ಖದ ಘಳಿಗೆಯಲ್ಲೂ ಜವಾಬ್ದಾರಿ ಮರೆಯದ ಜೇಟ್ಲಿ ಕುಟುಂಬ| ಯುಎಇಯಿಂದ ಬಹ್ರೇನ್'ಗೆ ಹೊರಡಲಿರುವ ಪ್ರಧಾನಿ ಮೋದಿ|

ನವದೆಹಲಿ(ಆ.24): ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅಕಾಲಿಕ ನಿಧನದಿಂದ ಅವರ ಕುಟುಂಬ ವಲಯ ತೀವ್ರ ದು:ಖದಲ್ಲಿದೆ. ಆದರೆ ಈ ದು:ಖಧ ಘಳಿಗೆಯಲ್ಲೂ ಜವಾಬ್ದಾರಿ ಮರೆಯದ ಜೇಟ್ಲಿ ಕುಟುಂಬ, ಅಂತ್ಯಸಂಸ್ಕಾರಕ್ಕಾಗಿ ಪ್ರಧಾನಿ ಮೋದಿ ತಮ್ಮ ವಿದೇಶ ಪ್ರವಾಸ ಮೊಟಕುಗೊಳಿಸುವುದು ಬೇಡ ಎಂದು ಮನವಿ ಮಾಡಿದೆ.

ಹೌದು, ಜಿ7 ಶೃಂಗಸಭೆ ನಿಮಿತ್ತ ಪ್ರಧಾನಿ ಮೋದಿ ಮೂರು ರಾಷ್ಟ್ರಗಳ ಪ್ರವಾಸಕ್ಕೆ ತೆರಳಿದ್ದು, ಪ್ರಸ್ತುತ ಯುಎಇಯಲ್ಲಿದ್ದಾರೆ. ಮೋದಿ ಇಲ್ಲಿಂದ ಬಹ್ರೇನ್'ಗೆ ಪ್ರಯಾಣ ಬೆಳೆಸಬೇಕಿದ್ದು, ಜೇಟ್ಲಿ ನಿಧನದ ಹಿನ್ನೆಲೆಯಲ್ಲಿ ಅವರು ಪ್ರವಾಸ ಮೊಟಕುಗೊಳಿಸುವ ಸಾಧ್ಯತೆ ಹೆಚ್ಚಿದೆ.

Scroll to load tweet…

ಇದನ್ನರಿತ ಜೇಟ್ಲಿ ಕುಟುಂಬ, ಮಹತ್ವದ ವಿದೇಶ ಪ್ರವಾಸದಲ್ಲಿರುವ ಮೋದಿ, ತಮ್ಮ ಪ್ರವಾಸ ಮೊಟಕುಗೊಳಿಸುವುದು ಬೇಡ ಎಂದು ಮನವಿ ಮಾಡಿದೆ.

ಇದು ಜೇಟ್ಲಿ ನಡೆದು ಬಂದ ದಾರಿ