ಜೇಟ್ಲಿ ನಿಧನ: ಕಣ್ಮರೆಯಾದ ಅತ್ಯುತ್ತಮ ಗೆಳೆಯನಿಗೆ ಗಣ್ಯರ ಸಂತಾಪ
ಅರುಣ್ ಜೇಟ್ಲಿ ನಿಧನ| ಮಾಜಿ ಹಣಕಾಸು ಸಚಿವರ ಅಗಲುವಿಕೆಗೆ ಗಣ್ಯರ ಸಂತಾಪ| ಸಹೋದ್ಯೋಗಿ, ಗೆಳೆಯನನ್ನು ಕಳೆದುಕೊಂಡ ದುಃಖದಲ್ಲಿ ರಾಜಕೀಯ ನಾಯಕರು
ನವದೆಹಲಿ[ಆ.24]: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಹಣಕಾಸು ಸಚಿವ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ. ವಕೀಲರಾಗಿ ಸೇವೆ ಸಲ್ಲಿಸಿ, ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಬಿಜೆಪಿ ಕಟ್ಟಾಳು ಜೇಟ್ಲಿ ಅಗಲುವಿಕೆ ಕಮಲ ಪಾಳಯಕ್ಕೆ ಬಹುದೊಡ್ಡ ಆಘಾತವಾಗಿದೆ. ಬಿಜೆಪಿ ಪಕ್ಷದಲ್ಲಿದ್ದರೂ ಎಲ್ಲಾ ನಾಯಕರೊಡೆನೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಜೇಟ್ಲಿ ಅಗಲುವಿಕೆಗೆ ಅನೇಕ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮೂಲಕ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಓರ್ವ ಬುದ್ಧಿವಂತ ವಕೀಲ, ಸಂಸದೀಯ ಪಟು ಹಾಗೂ ಸಚಿವರಾಗಿದ್ದ ಅರುಣ್ ಜೇಟ್ಲಿ ದೇಶದ ಅಭಿವೃದ್ಧಿಗೆ ನೀಡಿದ್ದ ಕೊಡುಗೆ ಅಪಾರ. ಇವರ ಅಗಲುವಿಕೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.
ಜೇಟ್ಲಿ ಕೊಡುಗೆಯನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುತ್ತಾ ದೇಶ ಕಟ್ಟುವಲ್ಲಿ ಅಪೂರ್ವ ಕೊಡುಗೆ ನೀಡಿದ ಅರುಣ್ ಜೇಟ್ಲಿ ನಿಧನದಿಂದ ತೀವ್ರ ನೋವಾಗಿದೆ. ಸಮಾಜದ ಎಲ್ಲಾ ವರ್ಗದಿಂದ ಗೌರವಿಸಲ್ಪಡುತ್ತಿದ್ದ ಜೇಟ್ಲಿಗೆ ಚಿರಶಾಂತಿ ಎಂದಿದ್ದಾರೆ.
ವಿತ್ತ ವಿದ್ಯಾ ಪಾರಂಗತ: ಬಿಜೆಪಿಯ 'ಅರುಣ' ಅಸ್ತಂಗತ!
ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ್ದು, 'ಪಕ್ಷ ಸಂಘಟನೆ ಹಾಗೂ ಇನ್ನಿತರ ವಿಚರಗಳಿಗೆ ಸಂಬಂಧಿಸಿದಂತೆ ಹಲವಾರು ವರ್ಷ ಮಾರ್ಗದರ್ಶನ ನೀಡಿದ್ದ ಓರ್ವ ಹಿರಿಯ ನಾಯಕ ಹಾಗೂ ಕುಟುಮಬ ಸದಸ್ಯರಂತಿದ್ದ ನಾಯಕರನ್ನು ಕಳೆದುಕೊಂಡಿರುವ ಧುಃಖ ಕಾಡುತ್ತಿದೆ' ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಅಗಲಿದ ತನ್ನ ಗೆಳೆಯ ಹಾಗೂ ಸಹೋದ್ಯೋಗಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ಮಾತ್ರವಲ್ಲದೇ ಇತರ ಪಕ್ಷದ ನಾಯಕರೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಅರುಣ್ ಜೇಟ್ಲಿ ನಿಧನಕ್ಕೆ, ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದದ್ದಾರೆ.
ಕಾಂಗ್ರೆಸ್ ಪಕ್ಷ ಸಂತಾಪ:
"
ಮಲ್ಲಿಕಾರ್ಜುನ ಖರ್ಗೆ ಸಂತಾಪ:
"
ನಳೀನ್ ಕುಮಾರ್ ಕಟೀಲ್ ಸಂತಾಪ:
"
ಶ್ರೀರಾಮುಲು ಸಂತಾಪ:
"
ಎಚ್.ಡಿ. ದೇವೇಗೌಡ ಸಂತಾಪ:
"