ನವದೆಹಲಿ[ಜ.18]: ಇಡೀ ದೇಶವೇ ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಯಾವಾಗ ಆಗುತ್ತದೆ ಎಂದು ಕುತೂಹಲದಿಂದ ಕಾಯುತ್ತಿದೆ. ಆದರೆ ಅತ್ತ ಅಪರಾಧಿಗಳು ಮಾತ್ರ ಕಾನೂನನ್ನು ಮುಂದಿಟ್ಟುಕೊಂಡು ಶಿಕ್ಷೆಯಿಂದ ಪಾರಾಗುವ ಎಲ್ಲಾ ಯತ್ನಗಳನ್ನು ನಡೆಸುತ್ತಿದ್ದಾರೆ. ಕ್ಯುರೇಟಿವ್ ಅರ್ಜಿ, ಕ್ಷಮಾದಾನ ಎಂದು ರ್ಜಿಗಳನ್ನು ಸಲ್ಲಿಸುತ್ತಲೇ ಇದ್ದಾರೆ. ನಿರ್ಭಯಾ ತಾಯಿ ತನ್ನ ಮಗಳಿಗೆ ನ್ಯಾಯ ನೀಡಿ, ಅಪರಾಧಿಗಳನ್ನು ಗಲ್ಲಿಗೇರಿಸಿ ಎಂದು ಕಳೆದ 8 ವರ್ಷಗಳಿಂದ ಹೋರಾಡುತ್ತಲೇ ಬಂದಿದ್ದರೆ. ಹೀಗಿರುವಾಗ ಹಿರಿಯ ವಕೀಲೆ ಇಂಧಿರಾ ಜೈಸಿಂಗ್‌ರವರ ಟ್ವೀಟ್, ನಿರ್ಭಯಾ ತಾಯಿ ಆಶಾ ದೇವಿ ಆಕ್ರೋಶಕ್ಕೆ ಕಾರಣವಾಗಿದೆ. ಮಗಳನ್ನು ಅತ್ಯಾಚಾರಗೈದ ಅಪರಾಧಿಗಳನ್ನು ಕ್ಷಮಿಸಿ ಎನ್ನಲು ಅವರಿಗೆಷ್ಟು ಧೈರ್ಯ ಎಂದು ಸಿಡಿದಿದ್ದಾರೆ.

ಸೋನಿಯಾರಂತೆ ದೋಷಿಗಳನ್ನು ಕ್ಷಮಿಸಿ: ನಿರ್ಭಯಾ ತಾಯಿಗೆ ವಕೀಲೆಯ ಸಲಹೆ

ಹೌದು 'ರಾಜೀವ್ ಹಂತಕಿ ನಳಿಯನ್ನು ಕ್ಷಮಿಸಿ, ಗಲ್ಲು ನೀಡಬೇಡಿ ಎಂದಿದ್ದ ಸೋನಿಯಾ ಗಾಂಧಿಯಂತೆ ನೀವು ಕೂಡಾ ನಿರ್ಭಯಾ ಅಪರಾಧಿಗಳನ್ನು ಕ್ಷಮಿಸಿ. ನಿಮ್ಮ ನೋವು ಅರ್ಥವಾಗುತ್ತದೆ, ನಾನು ನಿಮ್ಮೊಂದಿಗಿದ್ದೇನೆ, ಆದರೆ ಗಲ್ಲು ಶಿಕ್ಷೆ ವಿರೋಧಿಸುತ್ತೇನೆ' ಹಿರಿಯ ವಕೀಲೆ ಇಂಧಿರಾ ಜೈಸಿಂಗ್ ಸಂತ್ರಸ್ತೆ ತಾಯಿ ಬಳಿ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದರು.

ಆದರೀಗ ವೀಕೆಯ ಈ ಟ್ವೀಟ್‌ಗೆ ನಿರ್ಭಯಾ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಧಿರಾ ವಿರುದ್ಧ ಸಿಡಿದೆದ್ದ ನಿರ್ಭಯಾ ತಾಯಿ 'ನನಗೆ ಇಂತಹ ಸಲಹೆ ನೀಡಲು ಅವರು ಯಾರು? ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಇಡೀ ದೇಶವೇ ಬಯಸುತ್ತಿದೆ. ಆದರೆ ಇಂತಹವರಿಂದಾಗಿ[ಇಂಧಿರಾ ಜೈಸಿಂಗ್] ರೇಪ್ ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ' ಎಂದು ಕಿಡಿಕಾರಿದ್ದಾರೆ.

'ನಾನು ಬಾಲಾಪರಾಧಿ': ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ರೇಪಿಸ್ಟ್ ಪವನ್‌ ಹೊಸ ದಾಳ!

ಅಲ್ಲದೇ 'ಇಂತಹ ಹೇಳಿಕೆ ನೀಡಲು ಇಂಧಿರಾ ಜೈಸಿಂಗ್‌ಗೆ ಹೇಗೆ ಧೈರ್ಯ ಬಂತು ಎಂಬುವುದೇ ನನಗೆ ರ್ಥವಾಗುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನಾನು ಅವರನ್ನು ಭೇಟಿಯಾಘಿದ್ದೇನೆ. ಅವರು ಒಂದು ಬಾರಿಯೂ ನನ್ನ ಪರಿಸ್ಥಿತಿ ಹೇಗಿದೆ ಎಂದು ಕೇಳಿಲ್ಲ. ಆದರೀಗ ದೋಷಿಗಳನ್ನು ಕ್ಷಮಿಸಿ ಎಂದು ಅವರ ಪರ ಮಾತನಾಡುತ್ತಿದ್ದಾರೆ. ಇಂತಹ ಜನರು ರೇಪಿಸ್ಟ್‌ಗಳನ್ನು ಸಪೋರ್ಟ್ ಮಾಡಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿಯೇ ಅತ್ಯಾಚಾರ ಪ್ರಕರಣಗಳು ನಿಲ್ಲುತ್ತಿಲ್ಲ' ಎಂದಿದ್ದಾರೆ.

ಯೋಗ್ಯರಲ್ಲ ನೀವು ಬದುಕಲು: ಫೆ.1ರಂದು ಹತ್ಯಾಚಾರಿಗಳಿಗೆ ಗಲ್ಲು!

ಇನ್ನು ಪಟಿಯಾಲಾ ಹೌಸ್ ಕೋರ್ಟ್ ನಿರ್ಭಯಾ ಅತ್ಯಾಚಾರಿಗಳಿಗೆ ಹೊಸ ಡೆತ್ ವಾರಂಟ್ ಹೊರಡಿಸಿದೆ. ಇದರ ಅನ್ವಯ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರೂ ಅಪರಾಧಿಗಳಿಗೆ ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆಯಾಗಲಿದೆ. ಹೀಗಿದ್ದರೂ ಇದು ಅಂತಿಮ ದಿನಾಂಕ ಎಂದು ಹೇಳಲು ಸಾಧ್ಯವಿಲ್ಲ. ಅಪರಾಧಿಗಳಲ್ಲಿ ಮೂವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವಿದೆ. ಹೀಗಾಘಿ ಗಲ್ಲು ಶಿಕ್ಷೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಜನವರಿ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ