ಬ್ಯಾನರ್ to ಹೆಡ್‌ಫೋನ್: INDvAUS ಬೆಂಗಳೂರು ಪಂದ್ಯಕ್ಕೆ ಈ ವಸ್ತುಗಳು ಬ್ಯಾನ್!

ಜನವರಿ 19ರ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳು ಇಲ್ಲಿ ಗಮನಿಸಿ. ಕಾರಣ ಹಲವು ವಸ್ತುಗಳನ್ನು ಕ್ರೀಡಾಂಗಣದೊಳಕ್ಕೆ ಕೊಂಡೊಯ್ಯವುದು ನಿಷೇಧಿಸಲಾಗಿದೆ. ನಿಷೇಧಿಸಲಾದ ವಸ್ತುಗಳ ವಿವರ ಇಲ್ಲಿದೆ.

India vs Australia odi Bengaluru list of banned inside chinnaswamy stadium

ಬೆಂಗಳೂರು(ಜ.18): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಅಂತಿಮ ಘಟ್ಟ ತಲುಪಿದೆ. ರಾಜ್‌ಕೋಟ್‌ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ 36 ರನ್ ಗೆಲುವು ಸಾಧಿಸಿತು. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇದೀಗ ಜನವರಿ 19 ರಂದು ಬೆಂಗಳೂರಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದ ಫಲಿತಾಂಶ ಸರಣಿ ನಿರ್ಧರಿಸಲಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಮಣಿಸಿ ತಿರುಗೇಟು ನೀಡಿದ ಭಾರತ; ಸರಣಿ ಸಮಬಲ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವದ ಪಂದ್ಯಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಗರಿಷ್ಠ ಪೊಲೀಸ್ ಭದ್ರತೆ ನಯೋಜಿಸಲಾಗಿದೆ. ಇದರ ಜೊತೆಗೆ ಹಲವು ವಸ್ತುಗಳನ್ನು ನಿಷೇಧಿಸಲಾಗಿದೆ. ಪಂದ್ಯಕ್ಕೆ, ಶಾಂತಿಗೆ ಅಡ್ಡಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೆಎಸ್‌ಸಿಎ ಹೇಳಿದೆ.

ಭಾರತ ಹಾಗೂ ಆಸ್ಟೇಲಿಯಾ 3ನೇ ಏಕದಿನ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆ ಮನವಿ ಮಾಡಿದೆ. ಈ ಬಾರಿ ಅಭಿಮಾನಿಗಳು ಬ್ಯಾನರ್, ಪ್ಲೇ ಕಾರ್ಡ್, ಪೇಪರ್, ಬಟ್ಟೆ, ಮಾರ್ಕ್ ಪೆನ್, ರಾಜಕೀಯ ಪ್ರೇರಿತ ಘೋಷ ವಾಕ್ಯ ಎಲ್ಲವನ್ನೂ ನಿಷೇಧಿಸಲಾಗಿದೆ. ಈ ವಸ್ತುಗಳ ಜೊತೆ ಕ್ರೀಡಾಂಗಣ ಪ್ರವೇಶಿಸಲು ನಿರಾಕರಿಸಲಾಗಿದೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಶ್ ಮೆನನ್ ಹೇಳಿದ್ದಾರೆ.

ಇದನ್ನೂ ಓದಿ: ಆಸೀಸ್ ವಿರುದ್ಧ ಅಬ್ಬರ; ಏಕದಿನದಲ್ಲಿ ದಾಖಲೆ ಬರೆದ ರಾಹುಲ್!

ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದ್ದು, ಕ್ರೀಡಾಂಗಣದ ಸುತ್ತ ಯಾವುದೇ ಪ್ರತಿಭಟನೆ, ಘೋಷಣೆ ಕೂಗಿದರೂ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 

ಕ್ರೀಡಾಂಗಣದೊಳಗೆ ಈ ವಸ್ತುಗಳು ಕೂಡ ನಿಷೇಧ
ಸ್ಫೋಟಕ ವಸ್ತುಗಳು, ಲೈಟರ್, ಬೆಂಕಿ ಕಡ್ಡಿ, ಸಿಗರೇಟ್, ಬೀಡಿ, ವಾಟರ್ ಕ್ಯಾನ್, ವಾಟರ್ ಬಾಟಲ್,  ಟೊಯ್ ಗನ್, ಚಾಕು, ಚೂರಿ, ಕತ್ತರಿ, ಉಗುರು ಕತ್ತರಿ,  ಯಾವುದೇ ಹರಿತ ವಸ್ತುಗಳು, ಪಟಾಕಿ, ಸ್ಮೋಕ್ ಬಾಂಬ್, ಪೆಟ್ರೋಲ್, ಡೀಸೆಲ್, ಬ್ಯಾಗ್, ಸೇರಿದಂತೆ ಕೆಲ ವಸ್ತುಗಳನ್ನು ನಿಷೇಧಿಸಲಾಗಿದೆ. 

ವಿಡಿಯೋ ಹಾಗೂ ಸ್ಟಿಲ್ ಕ್ಯಾಮರ, ಬೈನಾಕ್ಯುಲರ್, ಹ್ಯಾಂಡಿಕ್ಯಾಮ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಐಪಾಡ್, ಪೆನ್ ಡ್ರೈವ್, ಪವರ್ ಬ್ಯಾಂಕ್, ಎಲೆಕ್ಟ್ರಾನಿಕ್ ಗ್ಯಾಜೆಟ್ಸ್, ಹೆಡ್‌ಫೋನ್, ಇಯರ್ ಫೋನ್ ನಿಷೇಧಿಸಲಾಗಿದೆ.

ಲಿಕ್ಕರ್, ಪರ್ಫ್ಯುಮ್ಸ್, ಜೆಲ್ ಹಾಗೂ ಕಾಸ್ಮೆಟಿಕ್ಸ್ ಕೂಡ ನಿಷೇಧಿಸಲಾಗಿದೆ.

ಬಾವುಟದ ಕೋಲು, ಕೊಡೆ, ಬ್ಯಾಕ್‌ಪ್ಯಾಕ್, ಥರ್ಮೋ ಫ್ಲಾಸ್ಕ್, ಬ್ರೀಫ್ ಕೇಸ್, ಹೆಲ್ಮೆಟ್, ಗುಟ್ಕಾ, ಸುಪಾರಿ ಹಾಗೂ ಸಾಕು ಪ್ರಾಣಿಗಳ ಜೊತೆಗೆ ಕ್ರೀಡಾಂಗಣ ಪ್ರವೇಶಿಸಲು ನಿಷೇಧಿಸಲಾಗಿದೆ.
ಜನವರಿ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios