Asianet Suvarna News Asianet Suvarna News

ಮೊದಲ ಪ್ರಯತ್ನದಲ್ಲೇ ಅಂಬಿಗೆ ಕಾದಿತ್ತು ಸೋಲು

1996 ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾದಾಗ ರಾಮನಗರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದರು ಅಂಬರೀಷ್. ಆದರೆ ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ಅವರ ವಿರುದ್ಧ ಸೋಲುಂಡರು.

Ambareesh lost at his first attempt in politics
Author
Bengaluru, First Published Nov 26, 2018, 10:42 AM IST

ಬೆಂಗಳೂರು :  ಚಲನಚಿತ್ರ ರಂಗದ ಜನಪ್ರಿಯತೆ ಹಾಗೂ ಸಮುದಾಯದ ಬೆಂಬಲದೊಂದಿಗೆ ಅಂಬರೀಷ್ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 1996 ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾದಾಗ ರಾಮನಗರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದರು.

ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ಅವರ ವಿರುದ್ಧ ಸೋಲುಂಡರು. ಬಳಿಕ 1998 ರಲ್ಲಿ ಮಂಡ್ಯ ಲೋಕಸಭೆ ಚುನಾವಣೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 4,31 ,439  ಮತ ಗಳಿಸಿ ಜೆಡಿಎಸ್‌ನ ಜಿ. ಮಾದೇಗೌಡರ ವಿರುದ್ಧ 1.80 ಲಕ್ಷ ಮತಗಳ ಭಾರೀ ಅಂತರದಿಂದ ಗೆದ್ದಿದ್ದರು. ಬಳಿಕ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣ ಒಂದೇ ವರ್ಷದಲ್ಲಿ ಅಂಬರೀಷ್ ಅವರನ್ನು ಕಾಂಗ್ರೆಸ್‌ಗೆ ಕರೆ ತಂದರು. 1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಅವರು 4, 18,110 ಮತ ಗಳಿಸುವ ಮೂಲಕ 1.52 ಲಕ್ಷ ಮತಗಳ  ಅಂತರದಿಂದ ಜೆಡಿಎಸ್‌ನ ಕೃಷ್ಣ ಅವರನ್ನು ಮಣಿಸಿದರು. 

ಈ  ಮೂಲಕ ಕ್ಷೇತ್ರದಲ್ಲಿ ಪಕ್ಷಕ್ಕಿಂತ ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಗೆದ್ದಿರುವುದಾಗಿ ಸಾಬೀತುಪಡಿಸಿಕೊಂಡಿದ್ದರು. 2004 ರಲ್ಲಿ ಜೆಡಿಎಸ್‌ನ ಡಾ.ಎಸ್. ರಾಮೇಗೌಡ (2.86 ಲಕ್ಷ) ವಿರುದ್ಧ 4,11,116 ಮತಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಭರ್ಜರಿ ಜಯ ದಾಖಲಿಸಿ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಬಾರಿಸಿದರು. 

ಅಂಬರೀಷ್ ಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್‌ನಲ್ಲಿ ವರ್ಚಸ್ವಿ ನಾಯಕನಾಗಿ ಬೆಳೆದ ಅವರಿಗೆ 2006 ರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಸ್ಥಾನವೂ ದಕ್ಕಿತು. ಬಳಿಕ 2008 ರ ವಿಧಾನಸಭೆ ಹಾಗೂ 2009 ರ ಲೋಕಸಭೆ ಚುನಾವಣೆಯ ಸತತ ಸೋಲಿನಿಂದ ಬಳಲಿದರು. 2013 ರಲ್ಲಿ ಮಂಡ್ಯ ವಿಧಾನಸಭೆಯಿಂದ ಗೆದ್ದು ರಾಜ್ಯ ವಸತಿ ಸಚಿವರಾದರು.

Follow Us:
Download App:
  • android
  • ios