ಅಧಿಕಾರದಲ್ಲಿ ಇರುವ ಆಡಳಿತ ಪಕ್ಷದ ನಾಯಕನ ಕಾಮಕಾಂಡವೊಂದು ಈಗ ಸರಕಾರವೇ ತಲೆ ತಗ್ಗಿಸುವಂತೆ ಮಾಡಿದೆ. ತಮಿಳುನಾಡಿನ ಈ ಪ್ರಕರಣ ಅನೇಕ ಪ್ರಶ್ನೆಗಳನ್ನು ಎತ್ತಿದೆ.

ಮಧುರೈ[ಡಿ.23] ಜಿಲ್ಲಾ ನಾಯಕನ ಕಾಮಕಾಂಡವು ತಮಿಳುನಾಡು ಆಡಳಿತರೂಢ AIADMK ಪಕ್ಷಕ್ಕೆ ಭಾರಿ ಮುಜುಗರ ತಂದಿಟ್ಟಿದೆ. ಮಧುರೈ ಜಿಲ್ಲೆಯ ಪಕ್ಷದ ನಾಯಕನೊಬ್ಬ ಸರ್ಕಾರಿ ಬಂಗಲೆಯನ್ನು ದುರ್ಬಳಕೆ ಮಾಡಿ ತನ್ನ ಕಾಮದಾಟಕ್ಕೆ ಬಳಸಿಕೊಂಡಿರುವುದು ಈಗ ತಮಿಳಿನಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರಿ ಸ್ವಾಮ್ಯದ ಅವಿನ್ ಗೆಸ್ಟ್ ಹೌಸ್ ನಲ್ಲಿ ಹೊರಗಡೆಯಿಂದ ಹುಡುಗಿಯರನ್ನು ಕರೆತಂದು AIADMK ಪಕ್ಷದ ನಾಯಕ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಆತನ ಕರ್ಮಕಾಂಡದ ಬಗ್ಗೆ ಸುಳಿವು ಸಿಕ್ಕ ಬೆನ್ನಲ್ಲೇ, ಪ್ರತಿಪಕ್ಷದವರು ವಿಡಿಯೋ ರೆಕಾರ್ಡ್ ಮಾಡಿ ಬಿಡುಗಡೆಮಾಡಿದ್ದಾರೆ. ಆದರೆ ಸರ್ಕಾರ ಈ ಆರೋಪಗಳನ್ನು ಅಲ್ಲಗಳೆದಿದ್ದು, ಇದು ಸುಳ್ಳೆಂದು ಹೇಳಿದೆ.

 ಬಳ್ಳಾರಿ ಬಿಜೆಪಿ ಮುಖಂಡನ ರಾಸಲೀಲೆ ಬಹಿರಂಗ?

ಈ ರೀತಿಯ ರಾಸಲೀಲೆ ವಿಡಿಯೋ ಬಹಿರಂಗವಾಗಿರುವ ವಿಚಾರ ಸಹಜವಾಗಿಯೇ ವಿರೋಧ ಪಕ್ಷದವರಿಗೆ ಅಸ್ತ್ರ ಒದಗಿಸಿದೆ. ಇಬ್ಬರು ಹೆಣ್ಣು ಮಕ್ಕಳನ್ನು ಸರಕಾರಿ ಬಂಗಲೆಗೆ ಕರೆದೊಯ್ದು ಆಸಾಮಿ ರಾಸಲೀಲೆಯಲ್ಲಿ ತೊಡಗಿದ್ದ ಎಂಬ ಆರೋಪ ಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ತುಳಸಿ ಪ್ರಸಾದನ ಹಸ್ತಮೈಥುನದ ವಿಕೃತಿ