ಅಗಸ್ಟಾವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ನನ್ನು ಗಡೀಪಾರಾದ ಮಾರನೇ ದಿವಸವೇ ದಿಲ್ಲಿ ನ್ಯಾಯಾಲಯವು 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ಹೀಗಿರುವಾಗ ಈ ಮಧ್ಯವರ್ತಿ ಖರೀದಿಯಲ್ಲಿ ಪಾಲುದಾರರಾದ ದೊಡ್ಡವರ ಹೆಸರನ್ನು ಬಾಯಿ ಬಿಡುತ್ತಾರಾ ಎಂಬ ಕುತೂಹಲ ಮನೆ ಮಾಡಿದೆ.

ನವದೆಹಲಿ[ಡಿ.06]: ಸುಮಾರು 3,600 ಕೋಟಿ ರು. ಮೌಲ್ಯದ ಅಗಸ್ಟಾವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ನನ್ನು ಗಡೀಪಾರಾದ ಮಾರನೇ ದಿವಸವೇ ದಿಲ್ಲಿ ನ್ಯಾಯಾಲಯವು 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ವಿಚಾರಣೆ ವೇಳೆ ‘ದೊಡ್ಡವರ’ ಹೆಸರುಗಳನ್ನೇನಾದರೂ ಮಿಶೆಲ್‌ ಬಾಯಿಬಿಡಲಿದ್ದಾನಾ ಎಂಬುದು ಕುತೂಹಲಕಾರಿಯಾಗಿದೆ.

Add Asianetnews Kannada as a Preferred SourcegooglePreferred

ಬ್ರಿಟನ್‌ ನಾಗರಿಕನಾದ ಮಿಶೆಲ್‌ನನ್ನು ದುಬೈನಿಂದ ಮಂಗಳವಾರ ರಾತ್ರಿ ಗಡೀಪಾರು ಮಾಡಿ ದಿಲ್ಲಿಗೆ ಕರೆತರಲಾಗಿತ್ತು. ಬುಧವಾರ ಸಂಜೆ ಆತನನ್ನು ಸಿಬಿಐ, ವಿಶೇಷ ಸಿಬಿಐ ನ್ಯಾಯಾಧೀಶ ಅರವಿಂದ ಕುಮಾರ್‌ ಅವರ ಮುಂದೆ ಹಾಜರು ಮಾಡಿತು. ಈ ವೇಳೆ 14 ದಿನ ತನ್ನ ವಶಕ್ಕೆ ನೀಡುವಂತೆ ಸಿಬಿಐ ಕೇಳಿತಾದರೂ 5 ದಿನಗಳ ಅನುಮತಿ ಮಾತ್ರ ದೊರಕಿತು.

ಇದನ್ನೂ ಓದಿ:ಭಾರತಕ್ಕೆ ಬೇಕಾಗಿದ್ದ ವಂಚಕನ ಗಡಿಪಾರಿಗೆ ದುಬೈ ನಿರ್ಧಾರ!

ವಶಕ್ಕೆ ಪಡೆಯಲು ಇ.ಡಿ. ಯತ್ನ:

ಈ ನಡುವೆ, ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಮಿಶೆಲ್‌ನನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಲಿದೆ. ನಕಲಿ ಕಂಪನಿಗಳನ್ನು ಸೃಷ್ಟಿಸಿ ಲಂಚದ ಹಣದ ಹರಿವನ್ನು ಈತ ಮಾಡಿದ್ದನೇ ಎಂದು ತಿಳಿದು ಹೆಚ್ಚುವರಿ ಆರೋಪಪಟ್ಟಿದಾಖಲಿಸಲು ಇ.ಡಿ. ತೀರ್ಮಾನಿಸಿದೆ.

ಇದನ್ನೂ ಓದಿ: ಮೋದಿ ಬೇಟೆ ಯಶಸ್ವಿ: ಭಾರತಕ್ಕೆ ಮೈಕೆಲ್ ಬರೋದು ಗ್ಯಾರಂಟೀ!

ಮಿಶೆಲ್‌ ಪರ ವಕೀಲ ಕಾಂಗ್ರೆಸ್ಸಿಗ!

ನವದೆಹಲಿ: ಅಗಸ್ಟಾಹಗರಣದ ಮಧ್ಯವರ್ತಿ ಕ್ರಿಸ್ಟಿಯನ್‌ ಮಿಶೆಲ್‌ ಪರ ಯುವ ಕಾಂಗ್ರೆಸ್‌ ಕಾನೂನು ಘಟಕದ ಉಸ್ತುವಾರಿ ಆಲ್ಜೋ ಕೆ. ಜೋಸೆಫ್‌ ವಕಾಲತ್ತು ವಹಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ಹೆಸರು ಕೇಳಿಬಂದಿರುವ ನಡುವೆಯೇ, ಆರೋಪಿಯ ಪರ ಕಾಂಗ್ರೆಸ್‌ ಮುಖಂಡ ಜೋಸೆಫ್‌ ವಕಾಲತ್ತು ವಹಿಸಿರುವುದು ನಾನಾ ಪ್ರಶ್ನೆ ಹುಟ್ಟುಹಾಕಿದೆ.

ಇದನ್ನೂ ಓದಿ: ಕಾಂಗ್ರೆಸ್ ಭೋಪಾಲ್ ಕ್ರಿಮಿನಲ್ ಹಿಡಿಲಿಲ್ಲ: ಮೋದಿ ಅಗಸ್ಟಾ ದಲಾಲ್‌ನನ್ನು ಬಿಡಲಿಲ್ಲ!

ಚೂಡಿದಾರ್‌ ಧರಿಸಿ ಪರಾರಿ ಯತ್ನ

3 ತಿಂಗಳ ಹಿಂದಷ್ಟೇ ಸ್ಕಲ್‌ಕ್ಯಾಪ್‌ ಹಾಗೂ ಚೂಡಿದಾರ್‌ ಧರಿಸಿ ದುಬೈನಿಂದ ಪರಾರಿಯಾಗಲು ಮಿಶೆಲ್‌ ಯತ್ನಿಸಿದ್ದ. ಆದರೆ ಮಿಶೆಲ್‌ ಮೇಲೆ ಭಾರತದ ಭದ್ರತಾ ಸಲಹೆಗಾರ ಅಜಿತ್‌ ಕೆ. ದೋವಲ್‌ ರಚಿಸಿದ್ದ ತಂಡ ಒಂದು ಕಣ್ಣಿಟ್ಟಿತ್ತು. ದುಬೈ ಸರ್ಕಾರಕ್ಕೆ ಈ ಬಗ್ಗೆ ಸುಳಿವು ನೀಡಿ ಆತನ ಪರಾರಿಯನ್ನು ತಪ್ಪಿಸಿತ್ತು ಎಂದು ಮೂಲಗಳು ಹೇಳಿವೆ.