ಶ್ರೀನಗರ[ಆ.10]: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಹಿನ್ನೆಲೆ ಶ್ರೀನಗರ ಹಾಗೂ ಜಮ್ಮುವಿನಲ್ಲಿ ಸೆಕ್ಷನ್ 144 ಹೇರಲಾಗಿದೆ. ಶಾಂತಿಯುತ ವಾತಾವರಣ ಕಾಯ್ದುಕೊಳ್ಳಲು ಕರ್ಫ್ಯೂ ಹೇರಲಾಗಿದೆ. ಇವೆಲ್ಲಾ ಬೆಳವಣಿಗೆಗಳ ನಡುವೆ ನಡುವೆ ಕಾಶ್ನೀರದ ಪುಟ್ಟ ಮಗುವಿನ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ.  ಕಣಿವೆ ರಾಜ್ಯದಲ್ಲಿ ಶಾಂತಿ ಹಾಗೂ ನೆಮ್ಮದಿಯ ಪ್ರತೀಕವಾಗಿ ಈ ಚಿತ್ರ ಶೇರ್ ಆಗುತ್ತಿದೆ.

5 ದಿನದ ಬಳಿಕ ಮನೆಯಿಂದ ಹೊರಬಂದ ಕಾಶ್ಮೀರಿಗಳು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಘುತ್ತಿರುವ ಫೋಟೋದಲ್ಲಿ ಕಾಶ್ಮೀರಿ ಮಗುವೊಂದು ಕಣಿವೆ ರಾಜ್ಯದಲ್ಲಿ ನಿಯೋಜಿಸಲಾದ CRPF ಮಹಿಳಾ ಸಿಬ್ಬಂದಿಯ ಕೈ ಕುಲುಕುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಪುಟ್ಟ ಮಗುವಿನ ಈ ಫೋಟೋವನ್ನು ದೂರದರ್ಶನ ಹಾಗೂ ಪ್ರಸಾರ ಭಾರತಿ ತನ್ನ ಟ್ವಿಟರ್ ಖಾತೆಯಲ್ಲೂ ಶೇರ್ ಮಾಡಿಕೊಳ್ಳುತ್ತಾ 'ವಿಶ್ವಾಸ ಹಾಗೂ ಮಂದಹಾಸದ ಒಡೆಯಲಾಗದ ಸಂಗಮವಿದು' ಎಂದು ಬರೆದುಕೊಂಡಿದೆ. 

ಇನ್ನು ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿ ಮಸೀದಿಯಲ್ಲಿ ನಮಾಜ್ ಓದಲಿದ್ದಾರೆ. ಅಲ್ಲದೇ ಹಜ್ ಯಾತ್ರಿಕರೂ ಮರಳಲಿದ್ದಾರೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಹೀಗಿರುವಾಗ ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.