ಕೆರೆ ನಿರ್ಮಾಣದ ಜೊತೆಗೆ ಪಕ್ಕ​ದಲ್ಲಿಯೇ ಜಲ ಕುಟೀರ ನಿರ್ಮಾಣ ಮಾಡಿ, ಇಲ್ಲಿ ತರಬೇತಿ ನೀಡಲಾಗುತ್ತದೆ. ಸುತ್ತಮುತ್ತಲ ಜನ​ರಲ್ಲಿ ಮಳೆ ನೀರಿನ ಮಹತ್ವ, ಅದರ ಸಂರಕ್ಷಣೆ, ಕೆರೆಯ ಅಗತ್ಯತೆ ಸೇರಿದಂತೆ ಮೊದಲಾದ ಅಂಶಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ನಟ ಯಶ್‌ ಅವರ ಯಶೋಮಾರ್ಗ ಸಂಸ್ಥೆಯ ಮೂಲಕ ಕೆರೆಗಳ ಅಭಿವೃದ್ಧಿ ಕಾರ್ಯ. ಪದೇ ಪದೇ ಬರಕ್ಕೀಡಾಗುವ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಕೆರೆಗೆ ಕಾಯಕಲ್ಪ. 4 ಕೋಟಿ ವೆಚ್ಚದಲ್ಲಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಹೂಳೆತ್ತುವಿಕೆ. ಈ ಕೆರೆ ತುಂಬಿದರೆ ಯಲಬುರ್ಗಾ ಪಟ್ಟಣ, ತಲ್ಲೂರು ಸೇರಿ 40 ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪುತ್ತದೆ. ಜಾನುವಾರುಗಳಿಗೆ ಅತ್ಯಂತ ಅನುಕೂಲವಾಗುತ್ತದೆ. ಕೆರೆಯಲ್ಲಿ ತುಂಬಿಕೊಂಡಿರುವ ಸುಮಾರು 1.5 ಮೀಟರ್‌ ಹೂಳನ್ನು ತೆಗೆಯುವುದು, 4000 ಕೋಟಿ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯವನ್ನು ರೂಪಿಸುವುದು ಯೋಜನೆಯ ಉದ್ದೇಶ. 

ಇದರಿಂದ ಕಲಾವಿದರು, ಚಿತ್ರನಟರು ರೈತ ಹಿತ ಕಾಯುವುದಿಲ್ಲ, ಅವರಲ್ಲಿ ಸಾಮಾಜಿಕ ಜವಾಬ್ದಾರಿ ಎಂಬ ಆರೋಪಕ್ಕೆ ಅಪವಾದವೆಂಬಂತಿದೆ ಈ ಬೆಳವಣಿಗೆ. ನಟ ಯಶ್‌ ತಮ್ಮ ಯಶೋ ಮಾರ್ಗ ಸಂಘಟನೆ ಮೂಲಕ ಅನೇಕ ರೈತಪರ ಕಾಯ​ರ್‍​ಕ್ರಮಗಳನ್ನು ರೂಪಿ​ಸು​ತ್ತಿದ್ದು ರಾಜ್ಯಾದ್ಯಂತ ಕೆರೆಗಳ ಕಾಯಕಲ್ಪಕ್ಕೆ ಸಂಕಲ್ಪ ಮಾಡಿದ್ದಾರೆ.
ಸತತ ​ವಾಗಿ ಕಾಡು​ತ್ತಿರು​ವ ಬರವನ್ನು ನೀಗಿಸಲು ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿಯೇ ಪರಿಹಾರ ಎಂದು ಕಂಡು​ಕೊಂಡಿ​ರುವ ಅವರು ಮೊದಲ ಹೆಜ್ಜೆಯಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ ಕೆರೆ ಅಭಿವೃದ್ಧಿಯನ್ನು ಕೈಗೆತ್ತಿ​ಕೊಂಡಿ​ದ್ದು, ಫೆ.28ರ ಮಂಗಳವಾರದಂದು ಅವರೇ ಚಾಲನೆ ನೀಡಲಿದ್ದಾರೆ.
ತಲ್ಲೂರು ಕೆರೆಯಿಂದ ಪ್ರಾರಂಭವಾಗುವ ನಟ ಯಶ್‌ ಅವರ ಕೆರೆ ಕಾಯಕಲ್ಪ, ಹಂತ ಹಂತವಾಗಿ ರಾಜ್ಯಾದ್ಯಂತ ವಿವಾದ ರಹಿತ ಕೆರೆಗಳನ್ನು ಮೊದಲು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡುವ ಗುರಿ ಹೊಂದಿ​ದ್ದಾರೆ. ಮೊದಲು ತಮ್ಮ ಯಶೋ​ಮಾರ್ಗ​ದಿಂದ ಎಷ್ಟುಸಾಧ್ಯ​ವೋ ಅಷ್ಟುಕೆರೆಗಳ ಅಭಿವೃದ್ಧಿ ಮಾಡಿ, ನಂತರ ದಿನ​ಗಳಲ್ಲಿ ಆಸಕ್ತ ಸಂಸ್ಥೆಗಳನ್ನು ಒಳಗೊಂಡು, ಇಡೀ ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದಾರೆ.
ಜಲ  ಕುಟೀರ

ಕೆರೆ ನಿರ್ಮಾಣದ ಜೊತೆಗೆ ಪಕ್ಕ​ದಲ್ಲಿಯೇ ಜಲ ಕುಟೀರ ನಿರ್ಮಾಣ ಮಾಡಿ, ಇಲ್ಲಿ ತರಬೇತಿ ನೀಡಲಾಗುತ್ತದೆ. ಸುತ್ತಮುತ್ತಲ ಜನ​ರಲ್ಲಿ ಮಳೆ ನೀರಿನ ಮಹತ್ವ, ಅದರ ಸಂರಕ್ಷಣೆ, ಕೆರೆಯ ಅಗತ್ಯತೆ ಸೇರಿದಂತೆ ಮೊದಲಾದ ಅಂಶಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಈ ಜಲ ಕುಟೀರ ಕೆರೆ ಪುನರುತ್ಥಾನ ಕಾರ್ಯ ಮುಗಿಯು​ವವ​ರೆಗೂ ಇರು​ತ್ತದೆ. ಅದಾದ ನಂತರ ಮುಂದಿನ ಕೆರೆ ಅಭಿ​ವೃದ್ಧಿ ಪ್ರದೇಶಕ್ಕೆ ಇದನ್ನು ಸ್ಥಳಾಂತರ ಮಾಡಲಾಗುತ್ತದೆ.ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂಬ ಅಂದಾಜಿದೆ.

400 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ
ಸಂಕೇಶ್ವರ : ಉತ್ತರ ಕರ್ನಾಟಕದ ಜನ ನನ್ನನ್ನು ಕೈ ಹಿಡಿದು ಮೇಲಕ್ಕೆತ್ತಿದ್ದಾರೆ. ಅವರ ಅಭಿಮಾನಕ್ಕೆ ನಾನು ಸದಾ ಋುಣಿ. ಯಶೋಮಾರ್ಗ ಸಂಸ್ಥೆ ಮೂಲಕ ಉತ್ತರ ಕರ್ನಾಟಕದ 400 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದೇನೆ ಎಂದು ಚಿತ್ರನಟ ಯಶ್‌ ಹೇಳಿದ್ದಾರೆ. ಸಂಕೇಶ್ವರ ಬಳಿಯ ನಿಡಸೋಸಿ ಮಠದಲ್ಲಿ ನಡೆದಿರುವ ಶಿವರಾತ್ರಿ ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವೃಕ್ಷ ಆಂದೋಲನ ಮೂಲಕ ಪ್ರತಿ ಹಳ್ಳಿಯಲ್ಲಿಯೂ ಸಸಿ ನೆಡುವ ಕೆಲಸ ಮಾಡುವ ಉದ್ದೇಶವಿದೆ. ಈ ಬಗ್ಗೆ ಈಗಲೇ ಹೆಚ್ಚು ಮಾತನಾಡುವುದಿಲ್ಲ. ಕೆಲಸ ಮಾಡಿ ಮುಗಿದ ಮೇಲೆ ಮಾತನಾಡುತ್ತೇನೆ ಎಂದರು.

28ಕ್ಕೆ ಹೂಳೆತ್ತುವ ಕಾರ್ಯ ಶುರು

ಕೆರೆಯಂಗಳ​ದಿಂದ ಜಲ ಸಂರಕ್ಷಣೆಯ ಜನಜಾಗೃತಿ, ನೂರು ಎಕರೆ ವಿಶಾಲವಾದ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆಯ ಹೂಳೆತ್ತುವ ವಿಶೇಷ ಕಾರ್ಯ​ಕ್ರಮಕ್ಕೆ ಫೆ.28ರಂದು ಬೆಳಿಗ್ಗೆ 10 ಗಂಟೆಗೆ ನಟ ಯಶ್‌ ಚಾಲನೆ ನೀಡುವರು. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಜಲ ಜಾಗೃತಿಗೆ ದುಡಿಯುತ್ತಿರುವ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳುವರು. ಬರಹಗಾರ ಶಿವಾನಂದ ಕಳವೆಯವರ ಬರ ಪ್ರವಾಸ ಕಥನ, ಕ್ಷಾಮ ಡಂಗುರ ಪುಸ್ತಕ ಬಿಡುಗಡೆಯಾಗಲಿದೆ.ಕಾರ್ಯಕ್ರಮವನ್ನು ಬೆಂಗಳೂರಿನ ಯಶೋ ಮಾರ್ಗ ಸಂಘಟನೆ ಹಾಗೂ ಹೈದ್ರಾಬಾದ್‌ ಕರ್ನಾಟಕದ ಯಶ್‌ ಅಭಿಮಾನಿ ಬಳಗ, ಸ್ಥಳೀಯ ಗ್ರಾಮಸ್ಥರು ಸಂಘಟಿಸಿದ್ದಾರೆ. 

'ನಟ ಯಶ್‌ ಅವರು ತಲ್ಲೂರು ಕೆರೆಯನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದು, ಇದರಿಂದ ಯಲುಬುರ್ಗಾ ಪಟ್ಟಣ ಸೇರಿದಂತೆ ಸುಮಾರು 40 ಗ್ರಾಮಗಳಿಗೆ ಅನುಕೂಲವಾಗಲಿದೆ. ರಮೇಶ ಬಳೂಟಗಿ ಸ್ಥಳೀಯ ಕೃಷಿ ಸಾಧಕ ತಲ್ಲೂರು ಕೆರೆಯನ್ನು ಯಶೋ ಮಾರ್ಗದಿಂದ ಅಭಿವೃದ್ಧಿ ಮಾಡ ಲಾಗುತ್ತದೆ. ರಾಜ್ಯಾದ್ಯಂತ ಕೆರೆ ಅಭಿವೃದ್ಧಿ ಮಾಡುವ ಯಶ್‌ ಸಂಕಲ್ಪದ ್ಟಮೊದಲ ಕೆರೆ ಇದಾಗಿದ್ದು, ಫೆ.28ಕ್ಕೆ ಚಾಲನೆ ನೀಡಲಿದ್ದಾರೆ'.
ರಾಧಾಕೃಷ್ಣ ಭಡ್ತಿ, ಕಾರ್ಯಕ್ರಮ ಸಂಯೋಜಕ

'ಕೆರೆಯ ಅಭಿವೃದ್ಧಿಯ ಜೊತೆಗೆ ಜಲ ಜಾಗೃತಿಯನ್ನು ಮೂಡಿಸುವುದಕ್ಕಾಗಿ ಜಲ ಕುಟೀರವನ್ನು ಮಾಡಲಾಗಿದ್ದು, ಇಲ್ಲಿ ಕೆರೆ ಅಭಿವೃದ್ಧಿಯಾಗುವವರೆಗೂ ನಿತ್ಯನಿರಂತರವಾಗಿ ಜಲ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ'.

ಶಿವಾನಂದ ಕಳವೆ, ಕಾರ್ಯಕ್ರಮ ಸಂಯೋಜಕ

(ಕನ್ನಡಪ್ರಭ ವಾರ್ತೆ)