ನವದೆಹಲಿ (ಡಿ. 13): ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢವೆಂಬ ಹಿಂದಿ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದು, ಮೋದಿ ಹಾಗೂ ಅಮಿತ್ ಶಾ ಸೋತಿರುವುದು ಇವರಿಬ್ಬರೂ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ತಂತ್ರಗಾರಿಕೆಗೆ ಸಾಣೆ ಹಿಡಿಯುವ ಅನಿವಾರ್ಯತೆಯನ್ನು ಹೇಳುತ್ತದೆ. 

ಬಿಜೆಪಿ ಗಪ್-ಚುಪ್: ರಾಜ್ಯ ಕಾಂಗ್ರೆಸ್‌ ಅತೃಪ್ತ ನಾಯಕರ ಆಟ ಬಂದ್‌..?

ಸಾಮಾನ್ಯವಾಗಿ ವಿಧಾನಸಭೆಯೇ ಬೇರೆ, ಲೋಕಸಭೆಯೇ ಬೇರೆ ಎಂದು ಹೇಳಬಹುದು. ಆದರೆ ಬಿಜೆಪಿಯ ಈ ಸೋಲು ಬದಲಾವಣೆಯ ಸಣ್ಣ ಆಸೆ ಕವಲೊಡೆಯುವಂತೆ ಮಾಡಿದೆ. ಮತದಾರರು ಈ ಬಗ್ಗೆ ಬಲವಾದ ಸಾಕ್ಷ್ಯ ನೀಡಿಲ್ಲವಾದರೂ ಕೇವಲ ಮೋದಿವರನ್ನು ಮುಂದಿಟ್ಟು ಕೊಂಡು 2019 ರಲ್ಲಿ ಗೆಲ್ಲವುದು ಸುಲಭವಲ್ಲ ಎಂದು ಬಿಜೆಪಿ ಅರ್ಥಮಾಡಿಕೊಳ್ಳಬೇಕಿದೆ.

ರಾಜಸ್ಥಾನ, ಮಧ್ಯಪ್ರದೇಶದಲ್ಲಿನ ಬಿಜೆಪಿ ಹೋರಾಟವು ಎರಡು ಅಂಶಗಳನ್ನು ಸ್ಪಷ್ಟಪಡಿಸುತ್ತದೆ. 1. ಬಿಜೆಪಿಯು ಬಲವಾದ ಸ್ಥಳೀಯ ನಾಯಕತ್ವ ಹೊಂದಿರುವಲ್ಲಿ ಕಡಿಮೆ ನಷ್ಟ ಅನುಭವಿಸಿದೆ. 
2. ಛತ್ತೀಸ್ ಗಢದಲ್ಲಿ ಪ್ರಬಲ ವರ್ಚಸ್ಸಿನ ನಾಯಕತ್ವ ಇದ್ದಾಗಿಯೂ ಮತ್ತೆ ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿದೆ.

ಮೋದಿಯ ಮಂಗಳೂರು 'PPP' ಸೂತ್ರ ಸುಳ್ಳು ಮಾಡಿದ ರಾಹುಲ್‌: ಏನದು ಫಾರ್ಮುಲಾ?

ವಿಶ್ವಾಸಾರ್ಹ ನಿರೂಪಣೆ ಬೇಕು

ಅದೆಲ್ಲದರ ಹೊರತಾಗಿ ಬಿಜೆಪಿ ಕಲಿಯಬೇಕಾದ ಮುಖ್ಯ ಪಾಠ- ಗೆಲುವು ಸಾಧಿಸಬೇಕೆಂದಲ್ಲಿ ಮತದಾರರು ನಂಬುವಂತಹ ಕತೆ ಹೇಳಬೇಕು ಎಂಬುದು.  ಬಿಜೆಪಿಯು ತಳಮಟ್ಟದಲ್ಲಿ ಒಳ್ಳೆಯ ಸಂಘಟನೆಯನ್ನೇ ಹೊಂದಿರಬಹುದು, ಗೆಲುವಿಗೆ ಬೇಕಾದ ಎಲ್ಲ ಸಂಪನ್ಮೂಲಗಳನ್ನೂ ಹೊಂದಿರಬಹುದು. ಆದರೆ ಅವೆಲ್ಲದರ ಹೊರತಾಗಿ ಮತ ದಾರರ ಮನಸ್ಸಿಗೆ ನಾಟುವ ನಿರೂಪಣೆ ಇರಬೇಕು.

ಬಿಜೆಪಿ ಛತ್ತೀಸ್ಗಢದಲ್ಲಿ ಹಿಂದೆಬೀಳಲೂ ಇದೇ ಕಾರಣ. ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್‌ನ ಪ್ರತಿ-ನಿರೂಪಣೆಯು ಸರಳವಾಗಿತ್ತು: ಬದಲಾವಣೆ ಅಗತ್ಯವಿದೆ ಎಂದು ಅದು ಸಮರ್ಥವಾಗಿ ಬಿಂಬಿಸಿತ್ತು. ಇದು ಒಂದು ರಾಜ್ಯದಲ್ಲಿ ಸಂಪೂರ್ಣವಾಗಿ ಕೆಲಸ ಮಾಡಿದೆ ಮತ್ತು ಮತ್ತೆರಡು ರಾಜ್ಯಗಳಲ್ಲೂ ಬಿಜೆಪಿಯನ್ನು ಸಿಂಹಾಸನದಿಂದ ಕೆಳಗಿಳಿಸಿದೆ.

ಪಂಚ ರಾಜ್ಯ ಫಲಿತಾಂಶ: ಸೋಶಿಯಲ್ ಮೀಡಿಯಾ ರಿಯಾಕ್ಷನ್‌..ಅಬ್ಬಬ್ಬಾ!

ಇನ್ನುಳಿದವು ಎರಡು. ತೆಲಂಗಾಣದಲ್ಲಿ ಟಿಆರ್‌ಎಸ್ (ತೆಲಂಗಾಣ ರಾಷ್ಟ್ರೀಯ ಸಮಿತಿ) ಮತ್ತು ಮಿಜೋರಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರಕ್ಕೇರಿವೆ. ಅಲ್ಲಿ ಕಾಂಗ್ರೆಸ್‌ಗೂ ವಿರುದ್ಧವಾದ ಫಲಿತಾಂಶ ಬಂದಿದೆ. ಅಲ್ಲೂ ಬಿಜೆಪಿ ಪಾಠ ಕಲಿಯಬೇಕಿದೆ. ತೆಲಂಗಾ ಣದಲ್ಲಿ ಪಾಲುದಾರ ತೆಲುಗು ದೇಶಂ ಸಂಪೂರ್ಣ ನೆಲಕಚ್ಚಿದ್ದರೂ ಕಾಂಗ್ರೆಸ್ ತನ್ನ ಹೆಸರು ಉಳಿಸಿಕೊಂಡಿದೆ. ಆದರೆ ಟಿಆರ್‌ಎಸ್ ಸುನಾಮಿಗೆ ಬಿಜೆಪಿ ಭಗ್ನಾವಶೇಷವಾಗಿದೆ.

ಇದು ರಾಜ್ಯದಲ್ಲಿ ನೆಲೆಕಂಡುಕೊಳ್ಳಲು ಮತ್ತಷ್ಟು ಶಕ್ತಿ ಬೇಕು ಎಂಬುದನ್ನು ಸೂಚಿಸುತ್ತಿದೆ. ಮಿಜೋರಂನಲ್ಲಿ ಎಂಎನ್‌ಎಫ್ ಜಯಭೇರಿ ಭಾರಿಸುವ ಮೂಲಕ ಈಶಾನ್ಯ ರಾಜ್ಯಗಳು ಕಾಂಗ್ರೆಸ್ ಮುಕ್ತವಾಗಿವೆ. ಆದರೆ ಅದರಲ್ಲೇನೂ ವಿಶೇಷವಿಲ್ಲ. ಏಕೆಂದರೆ ಈಶಾನ್ಯ ರಾಜ್ಯಗಳಿಂದ ಲೋಕಸಭೆ ಚುನಾವಣೆಯಲ್ಲಿ ಮಹಾನ್ ಬದಲಾವಣೆಯೇನೂ ಆಗುವುದಿಲ್ಲ.

ಮಿತ್ರರೊಂದಿಗೆ ವಿನಮ್ರರಾಗಬೇಕು

ಮೋದಿ ಮತ್ತು ಶಾ 2019 ರ ಚುನಾವಣೆಗೆ ಹೊಸ ಕತೆ ರೂಪಿಸಿ ರಣತಂತ್ರ ರೂಪಿಸುವುದನ್ನು ನಿಲ್ಲಿಸಿದ್ದಾರೆ. ಅದರ ಬದಲಾಗಿ ಮೋದಿ ಚರಿಶ್ಮಾ ಮತ್ತು ಅವರ ಸದುದ್ದೇಶಗಳನ್ನು ಮಾತ್ರ ಬಿಂಬಿಸುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಸಾಮಾನ್ಯ ಅಭ್ಯರ್ಥಿಗಳೇ ಇದ್ದರೂ ಶಾ ಸಂಘಪರಿವಾರದ ಒಳಗೆ ಮತ್ತು ಹೊರಗಿರುವ ಸ್ನೇಹಿತರು ಮತ್ತು ವರ್ಚಸ್ಸು ಬೀರುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿದೆ.

ಅಲ್ಲಿಗೆ ಮೋದಿ ಮತ್ತು ಶಾ ಬಿಗಿ ನಿಲುವಿನೊಂದಿಗೆ ಮತ್ತೆ ಮುನ್ನುಗ್ಗಬೇಕೆಂಬುದು ಸ್ಪಷ್ಟವಾಗಿದೆ. ಬಿಜೆಪಿಯಲ್ಲಿ ಮಧ್ಯಮ ಹಂತದ ನಾಯಕರುಗಳನ್ನು ಮತ್ತು ಕಾರ್ಯಕರ್ತರನ್ನು ಹಲವೆಡೆ ನಿರ್ಲಕ್ಷಿಸಲಾಗಿದೆ. ಮೈತ್ರಿಗೆ ಭೂತ, ವರ್ತಮಾನ, ಭವಿಷ್ಯದಲ್ಲಿ ವಿನೀತರಾಗಿರುವ ಕೈಗಳು ಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಟಿಡಿಪಿಯ ಚಂದ್ರಬಾಬು ನಾಯ್ಡು ಅವರನ್ನು ಕಳೆದುಕೊಂಡಂತೆ ಶಿವಸೇನೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಯೋಗಿಯನ್ನು ಎಲ್ಲಿಡಬೇಕು?

ರಾಮಮಂದಿರ ಬಗೆಗಿನ ಆಕ್ರೋಶಭರಿತ ಮಾತುಗಳು ಉತ್ತರಪ್ರದೇಶದಲ್ಲಿ ಅಥವಾ ಬೇರೆಡೆಯೂ ಮತ ತಂದುಕೊಂಡುತ್ತವೆಂದು ನಂಬಿದ್ದು ಬಿಜೆಪಿಯ ದೊಡ್ಡ ತಪ್ಪು. ಹಿಂದು ಅಜೆಂಡಾ ಪ್ರಚಾರದ ಬಗ್ಗೆ ಬಿಜೆಪಿ ಇದುವರೆಗೆ ಏನೂ ಮಾಡಿಲ್ಲ. ಅದರ ಅಂಗವಾದ ಸಂಘಪರಿವಾರವೂ ಕಳೆದ ನಾಲ್ಕೂವರೆ ವರ್ಷದಿಂದ ಮೌನವಾಗಿದ್ದು, ಈಗ ಭುಜದಲ್ಲಿ ಚಕ್ರ ಕಟ್ಟಿಕೊಂಡು ಓಡಾಡುತ್ತಿದೆ.

ಈ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಬಳಸಿಕೊಳ್ಳುತ್ತಿರುವುದರಲ್ಲೂ ಬಿಜೆಪಿ ಪಾಠ ಕಲಿಯಬೇಕು: ಅವರು ತಮ್ಮ ಕೇಡರ್‌ಗಳೊಂದಿಗೆ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರ ವಾಕ್ಚಾತುರ್ಯವು ಕೆಲವೊಮ್ಮೆ ಮತದಾರನ್ನು ಹೊರದಬ್ಬುತ್ತದೆ. ಮಾಧ್ಯಮಗಳೇ ತುಂಬಿರುವ ಈ ಯುಗದಲ್ಲಿ ಏನೇ ಮಾತನಾಡಿದರೂ ಅದು ದೇಶಾದ್ಯಂತ ಚರ್ಚೆಗೊಳಪಡುತ್ತದೆ.

ಹೀಗಾಗಿ ಯೋಗಿಯನ್ನು ಬಿಜೆಪಿಯ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಮತ್ತೊಮ್ಮೆ ಯೋಚಿಸಬೇಕು.

ಅತಿಯಾಗಿ ರಾಹುಲ್ ಟೀಕಿಸಿದ್ದೇ ತಪ್ಪಾಯ್ತು

ಬಿಜೆಪಿಯ ಮತ್ತೊಂದು ತಪ್ಪು ರಾಹುಲ್ ಗಾಂಧಿಯನ್ನು ಅಲಕ್ಷಿಸಿ, ಆ ಮೂಲಕವೇ ರಾಹುಲ್‌ಗೆ ತೀರಾ ಪ್ರಾಮುಖ್ಯತೆಯನ್ನು ನೀಡಿದ್ದು. ಹೀಗಾಗಿಯೇ ರಾಹುಲ್ ಕಳೆದ ವರ್ಷದಂತೆ ಕೇವಲ ಪಪ್ಪುವಾಗಿ ಉಳಿದಿಲ್ಲ.

ಕೇವಲ ಅಪಹಾಸ್ಯಕ್ಕೊಳಗಾಗುತ್ತಿದ್ದ ಅವರು ದಿನಕಳೆದಂತೆ ಹೆಚ್ಚು ವಿಶ್ವಾಸ ಗಳಿಸುತ್ತಿದ್ದಾರೆ. ಪ್ರತಿ ರಾಜ್ಯದಲ್ಲೂ ರಣತಂತ್ರ ಹಣೆಯಲು ಬೇಕಾದ ದತ್ತಾಂಶಗಳು ಮತ್ತು ಬೆಂಬಲಿಗ ಸಿಬ್ಬಂದಿಯನ್ನು ಅವರು ಹೊಂದಿದ್ದಾರೆ. ರಾಹುಲ್ ಗಾಂಧಿಯವರ ಸಾಮರ್ಥ್ಯವು ಅವರದ್ದೇ ಆಲೋಚನೆಯಲ್ಲ, ಯೋಜನಾ ಬದ್ಧವಾಗಿ ಕೆಲಸ ಮಾಡಲು ಪಕ್ಷದ ಸಾಮರ್ಥ್ಯವನ್ನು ಬಳಸಿ ಕೊಳ್ಳುವುದೇ ಅವರ ಶಕ್ತಿ.

ಮೋದಿ ಮತ್ತು ಶಾ ರೀತಿ ಅವರು ತಾನು ಹೇಳಿದ್ದೇ ನಡೆಯಬೇಕು ಎನ್ನುವುದಿಲ್ಲ. ಬೆಂಬಲಿಗರ ಮಾತನ್ನೂ ಕೇಳುವ ಕಿವಿ ಅವರಿಗಿದೆ. ಅದೇ ಅವರ ಪ್ಲಸ್ ಪಾಯಿಂಟ್. ಸೆಮಿಫೈನಲ್ ಎಂದೇ ಕರೆಯಲಾದ ಈ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಪಾಠ ಕಲಿತಿದೆ. ಅದನ್ನು ಧನಾತ್ಮಕವಾಗಿ ಸ್ವೀಕರಿಸಿ, ಸ್ನೇಹಿತರೆದುರು ವಿನಮ್ರವಾಗಿರುವ ಪಾಠ ಕಲಿಯಲೇಬೇಕು. ಕೋಪ, ಆಕ್ರೋಶವೇ ಅಂತಿಮವಲ್ಲ. 

- ಆರ್.ಜಗನ್ನಾಥನ್, ಹಿರಿಯ ಪತ್ರಕರ್ತ, ಸ್ವರಾಜ್ಯ ಮ್ಯಾಗ್