ಮೋದಿಯ 'PPP' ಸೂತ್ರ ಸುಳ್ಳುವನ್ನು ರಾಹುಲ್ ಗಾಂಧಿ ಸುಳ್ಳು ಮಾಡಿದ್ದಾರೆ. ಹಾಗಾದ್ರೆ ಏನದು 'PPP' ಸೂತ್ರ? ಇಲ್ಲಿದೆ ನೋಡಿ.
ಬೆಂಗಳೂರು, [ಡಿ.12]: ಪಂಚ ರಾಜ್ಯ ಚುನಾವಣೆಯಲ್ಲಿ ಅಭೂತ ಪೂರ್ವ ವಿಜಯದೊಂದಿಗೆ ಪ್ರಧಾನಿ ಮೋದಿಯ ಮಂಗಳೂರು 'PPP' ಸೂತ್ರವನ್ನು ರಾಹುಲ್ ಗಾಂಧಿ ಸುಳ್ಳು ಮಾಡಿದ್ದಾರೆ.
2018ರ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆಂದು ಮಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅನ್ನು ಪಿಪಿಪಿ ಎಂದು ವ್ಯಂಗ್ಯವಾಡಿದ್ದರು.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಳಿಕ ಕಾಂಗ್ರೆಸ್ ಪಿಪಿಪಿ (ಪಿ- ಪಂಜಾಬ್, ಪಿ-ಪುದುಚೇರಿ, ಪಿ (ಗಾಂಧೀ)ಪರಿವಾರ)ಗೆ ಸೀಮಿತವಾಗಲಿದೆ ಎಂದಿದ್ದರು.
ಆದರೆ ಕರ್ನಾಟಕದ ವಿಷಯದಲ್ಲಿ ಮೋದಿ ಭವಿಷ್ಯ ಸುಳ್ಳಾಯ್ತು. ಜೊತೆಗೆ ಇದೀಗ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ, ಮೋದಿ ಭವಿಷ್ಯವನ್ನು ಕಾಂಗ್ರೆಸ್ ಮತ್ತೊಮ್ಮೆ ಸುಳ್ಳು ಮಾಡಿದೆ.
ಜೊತೆಗೆ ಬಿಜೆಪಿ ಅಲೆಯಲ್ಲಿ ಇನ್ನೇನು ಕಾಂಗ್ರೆಸ್ ಪೂರ್ಣ ಅವನತಿ ಹೊಂದಿತು ಎಂಬ ವಿಶ್ಲೇಷಣೆಗಳ ಬೆನ್ನಲ್ಲೇ, ಹೊರಬಿದ್ದ ಈ ಫಲಿತಾಂಶ, ಕಾಂಗ್ರೆಸ್‌ಗೆ ಮತ್ತೆ ಪುನರುಜ್ಜೀವನದ ಆಸೆ ಚಿಗುರಿಸಿದೆ.
