Asianet Suvarna News Asianet Suvarna News

ಶಾಂತಿ-ನೆಮ್ಮದಿಯಿಂದ ಇರುವ ವಿಶ್ವದ ಟಾಪ್ 10 ಶಾಂತಿಯುತ ರಾ‍ಷ್ಟ್ರಗಳಿವು..!

ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ವಿಶ್ವದಲ್ಲೇ ಈ ರಾಷ್ಟ್ರಗಳ ಜನ ತುಂಬ ಶಾಂತಿ-ನೆಮ್ಮದಿಯಿಂದ ಜೀವಿಸುತ್ತಿದ್ದಾರೆ, ಹಾಗಾದ್ರೆ ಆ ಅದೃಷ್ಟವಂತ ರಾಷ್ಟ್ರಗಳು ಯಾವವು ಗೊತ್ತಾ? ಇಲ್ಲಿವೆ ನೋಡಿ.

 

2018 Top 10 Most Peaceful Countries In The World
Author
Bengaluru, First Published Oct 13, 2018, 12:03 AM IST

ಯಾವುದೇ ದೇಶದ ಜನರು ಶಾಂತಿ-ನೆಮ್ಮದಿಯಿಂದ ಬದುಕಲು ಇಚ್ಛಿಸುತ್ತಾರೆ. ಆದರೆ, ಭೌಗೋಳಿಕ ಪರಿಸ್ಥಿತಿ, ನೆರೆರಾಷ್ಟ್ರಗಳ ಉಪಟಳ, ದೇಶದ ರಾಜಕೀಯ ವ್ಯವಸ್ಥೆ, ಬೇರೆ ರಾಷ್ಟ್ರಗಳೊಂದಿಗೆ ಆ ರಾಷ್ಟ್ರ ಹೊಂದಿರುವ ಸಂಬಂಧ, ಅದರ ಸಾಮರ್ಥ್ಯದ ಮೇಲೆ ಆ ರಾಷ್ಟ್ರದಲ್ಲಿ ಶಾಂತಿ ನೆಲೆಸುತ್ತದೆ.

ಅತೀ ಹೆಚ್ಚು ಐಕ್ಯೂ ಹೊಂದಿರುವ ವಿಶ್ವದ 12 ಪ್ರಸಿದ್ಧ ವ್ಯಕ್ತಿಗಳು

ಈ ಅಂಶಗಳೆಲ್ಲ ಒಂದೇ ರಾಷ್ಟ್ರದಲ್ಲಿ ಮೇಳೈಸುವುದು ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಕಷ್ಟಸಾಧ್ಯ. ಆದರೂ, ವಿಶ್ವಸಂಸ್ಥೆಯು 162 ರಾಷ್ಟ್ರಗಳ ಪರಿಸ್ಥಿತಿ, ಅಲ್ಲಿನ ಜನರು ಎಷ್ಟರಮಟ್ಟಿಗೆ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂಬ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ಜಾಗತಿಕ ಶಾಂತಿ ಸೂಚ್ಯಂಕ (ಜಿಪಿಐ) ವರದಿ ಪ್ರಕಟಿಸಿದೆ.

ಸಾಯೋದ್ರೊಳಗೆ ನೋಡಲೇಬೇಕಾದ 10 ಜಾಗಗಳಿವು

ಇದರ ಅನ್ವಯ ಹಲವು ರಾಷ್ಟ್ರಗಳು ಶಾಂತಿ-ನೆಮ್ಮದಿಯಿಂದ ಇವೆ, ಅಲ್ಲಿನ ಜನರು ಸಂತೋಷದಿಂದ ಇದ್ದಾರೆ ಎಂದು ಜ್ಯೇಷ್ಠತೆ ನೀಡಿದೆ. ಅವುಗಳಲ್ಲೇ ಟಾಪ್ ಹತ್ತು ರಾಷ್ಟ್ರಗಳ ಜನರ ಹೇಗೆ ಸಂತಸದಿಂದ ಇದ್ದಾರೆ, ಹೇಗೆ ಆ ರಾಷ್ಟ್ರಗಳಲ್ಲಿ ನೆಮ್ಮದಿ ನೆಲೆಸಿದೆ ಎಂಬ ಕುರಿತು ಈ ಕೆಳಗಿನಂತೆ ವಿವರಿಸಲಾಗಿದೆ.

#1 ಐಸ್‌ಲ್ಯಾಂಡ್: 2017ರ ಜಾಗತಿಕ ಶಾಂತಿ ಸೂಚ್ಯಂಕದ ಪ್ರಕಾರ, ಐಸ್‌ಲ್ಯಾಂಡ್ ಅತ್ಯಂತ ಶಾಂತಿಯುತ ದೇಶ ಎಂದು ನಂಬರ್ ಒನ್ ಸ್ಥಾನದಲ್ಲಿದೆ. ಇಲ್ಲಿ ಉನ್ನತ ಮಟ್ಟದ ಪ್ರಜಾಪ್ರಭುತ್ವ, ಲಿಂಗ ಸಮಾನತೆ ಮತ್ತು ಕಡಿಮೆ ಕಾರಾಗೃಹವಾಸವನ್ನು ಹೊಂದಿದೆ. ಕಡಿಮೆ ಕಾರಾಗೃಹವಾಸ ಅಂದ್ರೆ, ಇಲ್ಲಿ ಆ ರೀತಿಯಾದ ಯಾವುದೇ ಕ್ರೈಂ, ಹಿಂಸಾತ್ಮಕ ಕೃತ್ಯಗಳು ಜರುಗುವುದಿಲ್ಲ ಎಂದರ್ಥ. ಇನ್ನು ದೇಶದ ಸಾಕ್ಷರತೆಯು 99% ಇದ್ದು, ಇಲ್ಲಿ ಶಿಕ್ಷಣಕ್ಕಾಗಿ ಯಾವುದೇ ಶುಲ್ಕವಿರುವುದಿಲ್ಲದಿರುವುದು ಈ ದೇಶದ ವಿಶೇಷ.

#2 ನ್ಯೂಜಿಲ್ಯಾಂಡ್: ಕಳೆದ ಹತ್ತು ವರ್ಷಗಳಿಂದ ನ್ಯೂಜಿಲೆಂಡ್ ಪ್ರಪಂಚದ ಶಾಂತಿ ರಾಷ್ಟ್ರಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕಿಂತ ಕೆಳಗೆ ಜಾರಿಲ್ಲ. ಅಷ್ಟರ ಮಟ್ಟಿಗೆ ಶಾಂತಿ ಈ ರಾಷ್ಟ್ರದಲ್ಲಿ ನೆಲೆಸಿದೆ. ಕೇವಲ 4.7 ದಶಲಕ್ಷ ಜನಸಂಖ್ಯೆ ಹೊಂದಿರುವ ನ್ಯೂಜಿಲ್ಯಾಂಡ್ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಆದಾಯವನ್ನು ನೋಡಿದರೆ ಕಿವೀಸ್ ಉನ್ನತ ಸ್ಥಾನದಲ್ಲಿದೆ.

ಕೇವಲ 20%ರಷ್ಟು ಪ್ರಜೆಗಳು ಮಾತ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ, ಇನ್ನುಳಿದಂತೆ ಸುರಕ್ಷಿತವಾಗಿ ವಾಸಿಸಲು ನ್ಯೂಜಿಲೆಂಡ್ ಅದ್ಭುತ ರಾಷ್ಟ್ರವಾಗಿದೆ.

#3 ಆಸ್ಟ್ರಿಯಾ: ಆಸ್ಟ್ರಿಯಾ ವಿಶ್ವದ ಮೂರನೇ ಶಾಂತಿಯೂತ ದೇಶವಾಗಿದ್ದು, ವಾಸಿಸಲು ಉತ್ತಮ ಸ್ಥಳವಾಗಿದೆ. ಏಕೆಂದರೆ ಈ ದೇಶವು ಅತಿ ಕಡಿಮೆ ಅಪರಾಧ ಮತ್ತು ನರಹತ್ಯೆ ಪ್ರಮಾಣವನ್ನು ಹೊಂದಿದೆ. ಇನ್ನು ಜಿಡಿಪಿಯಲ್ಲಿ ಆಸ್ಟ್ರಿಯಾವು ವಿಶ್ವದಲ್ಲೇ ಅತಿ ಶ್ರೀಮಂತ ದೇಶವಾಗಿದೆ.

ಪರಿಸರವನ್ನು ರಕ್ಷಿಸಲು ಆಸ್ಟ್ರಿಯಾ ತನ್ನ ಶುಚಿತ್ವ ಮತ್ತು ಕಟ್ಟುನಿಟ್ಟಾದ ಮರುಬಳಕೆ ಕಾನೂನಿನಲ್ಲೂ ಸಹ ಹೆಸರುವಾಸಿಯಾಗಿದ್ದು, ಸೌಂದರ್ಯ ಮತ್ತು ಐತಿಹಾಸಿಕ ವಾಸ್ತುಶೈಲಿಯು ಪ್ರತಿವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

#4 ಪೋರ್ಚುಗಲ್: ಶಾಂತಿ ಮತ್ತು ಸುರಕ್ಷತೆಗೆ ಬಂದಾಗ ಪೋರ್ಚುಗಲ್ ತನ್ನದೇ ಹಿಡಿತವನ್ನು ಮುಂದುವರೆಸಿದೆ. 2014-15ರಲ್ಲಿ 18ನೇ ಸ್ಥಾನದಲ್ಲಿದ್ದ ಪೋರ್ಚುಗಳ 2016 ರಲ್ಲಿ ಐದನೇ ಸ್ಥಾನಕ್ಕೇರಿತ್ತು ಇನ್ನು ಕಳೆದ ವರ್ಷ 4ನೇ ಶಾಂತಿಯೂತ ರಾಷ್ಟ್ರವಾಗಿ ಹೊರಮ್ಮಿದೆ.

ವಸತಿ, ಕೆಲಸ, ಜೀವನದ ಸಮತೋಲನ, ವೈಯಕ್ತಿಕ ಭದ್ರತೆ ಮತ್ತು ಪರಿಸರದ ಗುಣಮಟ್ಟದಲ್ಲಿ ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಸರಾಸರಿಗಿಂತ ಹೆಚ್ಚಿನ ಸ್ಥಾನಮಾನವನ್ನು ಹೊಂದಿರುವ ಪೋರ್ಚುಗಲ್, ಜೀವನಶೈಲಿ ಅನುಭವದ ಒಟ್ಟಾರೆ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಅಗ್ರ 4ರ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ.

#5 ಡೆನ್ಮಾರ್ಕ್:  2011 ರಿಂದ 2016 ವರೆಗೆ ಡೆನ್ಮಾರ್ಕ್ ಸತತ ಐದು ವರ್ಷಗಳಲ್ಲಿ 2ನೇ ಸ್ಥಾನದಲ್ಲಿತ್ತು. ತರುವಾಯ ಕಳೆದ ವರ್ಷ ಮತ್ತು ಪ್ರಸ್ತುತ ವರ್ಷ ಐದನೇ ಸ್ಥಾನಕ್ಕೆ ಕುಸಿದೆ. ಅಂದರೆ ಕೊಂಚ ಮಟ್ಟಿಗೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎನ್ನಬಹುದು. ಒಟ್ಟಿನಲ್ಲಿ ಪ್ರಯಾಣ ಮತ್ತು ವಾಸಿಸುವ ಒಂದು ಸುರಕ್ಷಿತ ದೇಶ. ರಾಜಕೀಯ ಸ್ಥಿರತೆ, ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಗೌರವವನ್ನು ಉನ್ನತ ಮಟ್ಟದಲ್ಲಿ ಹೊಂದಿದೆ.

#6 ಕೆನಡಾ: ಕೆನಡಾವು 163 ದೇಶಗಳಲ್ಲಿ ಆರನೇ ಸುರಕ್ಷಿತ ರಾಷ್ಟ್ರವಾಗಿದೆ. ಕಳೆದ ಎರಡು ವರ್ಷಗಳಿಂದ ಆಂತರಿಕ ಘರ್ಷಣೆಗಳು, ಅಪರಾಧ ಮತ್ತು ರಾಜಕೀಯ ಸ್ಥಿರತೆಗಳಿಗೆ ಸಂಬಂಧಿಸಿದಂತೆ ಉತ್ತಮ ಅಂಕಗಳನ್ನು ಪಡೆಯುತ್ತಿದೆ. ಕೇವಲ 37 ದಶಲಕ್ಷ ಜನಸಂಖ್ಯೆ ಹೊಂದಿರುವ ಕೆನಡಾ ಉನ್ನತ ವ್ಯಾಪಾರದ ರಾಷ್ಟ್ರವಾಗಿದ್ದು, ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಉತ್ತಮ ಉದ್ಯೋಗ ಅವಕಾಶಗಳು, ಉತ್ತಮ ಆರೋಗ್ಯ ಸೌಕರ್ಯಗಳು ಮತ್ತು ಪರಿಣಾಮಕಾರಿ ಆಡಳಿತವನ್ನು ನೋಡಿದ್ರೆ ಇದು ವಾಸಿಸಲು ಉತ್ತಮ ದೇಶಗಳಲ್ಲಿ ಒಂದಾಗಿದೆ.

#7 ಜೆಕ್ ಗಣರಾಜ್ಯ: ಜೆಕ್ ಗಣರಾಜ್ಯವು ಮಧ್ಯ ಯುರೋಪಿನಲ್ಲಿರುವ ಒಂದು ರಾಷ್ಟ್ರ. ಇದು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದ್ದು, ಶಾಂತಿದೂತ ದೇಶಗಳ ಪೈಕಿ ಇದು ಏಳನೇ ಸ್ಥಾನದಲ್ಲಿದೆ. ಓಇಸಿಡಿ ಪ್ರಕಾರ, ಇದು ಉದ್ಯೋಗಗಳು ಮತ್ತು ಗಳಿಕೆಯ, ಕೆಲಸ-ಜೀವನದ ಸಮತೋಲನ ಮತ್ತು ಶಿಕ್ಷಣ ಮತ್ತು ಕೌಶಲ್ಯಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದೆ. ವಯಸ್ಕರರು ಮಾತ್ರವಲ್ಲದೆ 25ರಿಂದ 64 ವಯಸ್ಸಿನ 93% ರಷ್ಟು ಜನರು ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

#8 ಸಿಂಗಪುರ: ವಿಶ್ವದ ಏಂಟನೇ ಶಾಂತದೂತ ದೇಶವಾಗಿರುವ ಸಿಂಗಪುರ, ಕಳೆದ ವರ್ಷ 21ನೇ ಸ್ಥಾನದಿಂದ 13 ಸ್ಥಾನಗಳನ್ನು ಹೆಚ್ಚಿಸಿದೆ. ಸಿಂಗಾಪುರ ಸಮುದ್ರದ ವ್ಯಾಪಾರವನ್ನು ಅವಲಂಬಿಸಿದೆ.

#9 ಜಪಾನ್: ಜಪಾನ್ ಯೂರೋಪ್‌ಗಿಂತ ಮೂರು ಪಟ್ಟು ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹಾಗೂ ಯುನೈಟೆಡ್ ಸ್ಟೇಟ್ಸ್‌ಗಿಂತ ಹನ್ನೆರಡು ಪಟ್ಟು ಹೆಚ್ಚಿನ ಜನಸಂಖ್ಯೆ ಹೊಂದಿದೆ.ಆದರೂ ಈ ದೇಶದಲ್ಲಿ ಹಿಂಸಾತ್ಮಕೃತ್ಯಗಳು ನಡೆಯುವುದು ಬಹಳ ಕಡಿಮೆ. ಇದ್ರಿಂದ ಇದು ಜಾಗತಿಕ ಮಟ್ಟದಲ್ಲಿ 9ನೇ ಶಾಂತಯುತ ರಾಷ್ಟ್ರವಾಗಿದೆ.

#10 ಐರ್ಲೆಂಡ್: ಪ್ರಗತಿಶೀಲ ಮತ್ತು ಅಭಿವೃದ್ಧಿ ಹೊಂದಿದ ಜಗತ್ತಿನ 77 ನೇಯ ಅತಿ ಚಿಕ್ಕ ದೇಶ ಈ ಐರ್ಲೆಂಡ್. ವಿಶ್ವದ ಶಾಂತಿಯುತ ರಾಷ್ಟ್ರಗಳಲ್ಲಿ ಹತ್ತನೇ ಸ್ಥಾನದಲ್ಲಿದೆ. ಸ್ವತಂತ್ರ ಸ್ಥಾನಮಾನ ಮತ್ತು ತಟಸ್ಥ ಸೇನೆಯ ಕಾರಣದಿಂದಾಗಿ ಐರ್ಲೆಂಡ್ ವಾಡಿಕೆಯಂತೆ ವಿಶ್ವದ ಸುರಕ್ಷಿತ ದೇಶಗಳಲ್ಲಿ ಒಂದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಐರ್ಲೆಂಡ್ ಅಭಿವೃದ್ಧಿಶೀಲ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

Follow Us:
Download App:
  • android
  • ios