Asianet Suvarna News Asianet Suvarna News

ಅತೀ ಹೆಚ್ಚು ಐಕ್ಯೂ ಹೊಂದಿರುವ ವಿಶ್ವದ 12 ಪ್ರಸಿದ್ಧ ವ್ಯಕ್ತಿಗಳು

ಬುದ್ಧಿಯನ್ನು ಒಂದು ಮೊತ್ತವೆಂದು ಗಣಿಸಿದರೆ ಅದರಲ್ಲಿ ಸಂಬಂಧಿಸಿದ ವ್ಯಕ್ತಿಯ ಬುದ್ಧಿಯ ಭಾಗ ಎಷ್ಟು ಎಂದು ಹೇಳುವುದೇ ಐಕ್ಯೂ. ಬುದ್ಧಿಮತ್ತೆಯನ್ನು ನಿಖರವಾಗಿ ಅಳೆಯಲು ಸಾಧ್ಯವಿಲ್ಲ ಆದರೂ ವೈದ್ಯಕೀಯ ಉದ್ದೇಶಗಳಿಗಾಗಿ
ಸಾರ್ವತ್ರಿಕ ಒಪ್ಪಿಗೆ ಪಡೆದಿರುವ ಕೆಲವು ಪರೀಕ್ಷಾ ವಿಧಾನಗಳಿಂದ ಅಳೆಯಬಹುದು. 

What is the Highest IQ in The World Ever Recorded ?
Author
Bengaluru, First Published Oct 12, 2018, 5:45 PM IST

ಮಾನವನ ಜ್ಞಾನಮಟ್ಟವನ್ನು ಆಧರಿಸುವ ಅಥವಾ ಸುತ್ತಮುತ್ತಲಿನ ಪರಿಸರವನ್ನು ಅರ್ಥಮಾಡಿಕೊಂಡು ಅದನ್ನು ಮನದಟ್ಟು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಳ್ಳುವ ಮೆದುಳಿನ ಶಕ್ತಿಯನ್ನು ಬುದ್ಧಿಮತ್ತೆ ಎಂದು ಕರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಐಕ್ಯೂ ಅಥವಾ ಇಂಟೆಲಿಜೆನ್ಸ್ ಕ್ವೋಶಿಯೆಂಟ್ ಎನ್ನಲಾಗುತ್ತದೆ.

ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಕೋಷಂಟ್ ಅಂದರೆ ಭಾಗಲಬ್ಧ. ಬುದ್ಧಿಯನ್ನು ಒಂದು ಮೊತ್ತವೆಂದು ಗಣಿಸಿದರೆ ಅದರಲ್ಲಿ ಸಂಬಂಧಿಸಿದ ವ್ಯಕ್ತಿಯ ಬುದ್ಧಿಯ ಭಾಗ ಎಷ್ಟು ಎಂದು ಹೇಳುವುದೇ ಐಕ್ಯೂ. ಬುದ್ಧಿಮತ್ತೆಯನ್ನು ನಿಖರವಾಗಿ ಅಳೆಯಲು ಸಾಧ್ಯವಿಲ್ಲ ಆದರೂ ವೈದ್ಯಕೀಯ ಉದ್ದೇಶಗಳಿಗಾಗಿ ಸಾರ್ವತ್ರಿಕ ಒಪ್ಪಿಗೆ ಪಡೆದಿರುವ ಕೆಲವು ಪರೀಕ್ಷಾ ವಿಧಾನಗಳಿಂದ ಅಳೆಯಬಹುದು. ಅವುಗಳು ಜ್ಞಾನವನ್ನು ಗಳಿಸುವ ಸಾಮರ್ಥ್ಯ, ಜ್ಞಾನದ ಪ್ರಯೋಗ ಮಾಡುವ ಸಾಮರ್ಥ್ಯ ಹಾಗೂ ಅಮೂರ್ತ ತರ್ಕಗಳಲ್ಲಿ ತೊಡಗುವ ಸಾಮರ್ಥ್ಯದ ಆಧಾರದ ಮೇಲೆ ಬುದ್ಧಿಮತ್ತೆಯನ್ನು ನಿರ್ಧರಿಸಲಾಗುತ್ತದೆ.

ಮೆದುಳಿನ ಸಂರಚನೆ ಸಾಮರ್ಥ್ಯ ಒಂದೇ ರೀತಿ ಇರಬೇಕೆಂದೇನು ಇಲ್ಲ ಕಾಲ ಕಳೆದಂತೆ ಹೆಚ್ಚಾಗಲುಬಹುದು ಅಥವಾ ಕಡಿಮೆಯಾಗಲು ಬಹುದು ಎನ್ನುತ್ತಾರೆ ಸಂಶೋಧಕರು. ಸಾಮಾನ್ಯವಾಗಿ ಪ್ರತಿಯೊಬ್ಬರ ಐಕ್ಯೂ 70 ರಿಂದ 130ರವರೆಗೂ ಇರುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಐಕ್ಯೂ ಹೊಂದಿರುವ 12 ಮಂದಿಯಿದ್ದು ಅವರ ಬುದ್ಧಿಮತ್ತೆ 160 ರಿಂದ 300ರವರೆಗೂ ಇರುವುದು ಕಂಡು ಬಂದಿದೆ.

ಹೆಚ್ಚು ಐಕ್ಯೂ ಹೊಂದಿರುವ ವ್ಯಕ್ತಿಗಳು ಹಾಗೂ ಅವರ ಸಾಧನೆಗಳು 

1] ವಿಲಿಯಂ ಜೇಮ್ಸ್ ಸಿಡೀಸ್ [250 - 300] : ಅಮೆರಿಕಾದಲ್ಲಿ 1898ರಲ್ಲಿ ಜನಿಸಿದ ಇವರು 5 ವಯಸ್ಸಿಗೆ ಟೈಪ್'ರೈಟಿಂಗ್ ಬಳಸುವುದರ ಜೊತೆ  ಲ್ಯಾಟಿನ್, ಗ್ರೀಕ್, ರಷ್ಯನ್, ಫ್ರೆಂಚ್ ಮುಂತಾದ ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಿದ್ದರು. ಪ್ರೌಢ ವ್ಯವಸ್ಥೆಗೆ ಬಂದ ನಂತರ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಐಕ್ಯೂ 250 ರಿಂದ 300.  

What is the Highest IQ in The World Ever Recorded ?  

2] ಟೆರೇನ್ಸ್ ತಯೋ [225-230] : 1975ರಲ್ಲಿ ಚೀನಾದಲ್ಲಿ ಜನಿಸಿದ ಇವರು ಸಣ್ಣ ವಯಸ್ಸಿನಲ್ಲಿಯೇ ಗಣಿತ ವಿಷಯದಲ್ಲಿ ಹೆಚ್ಚು ಪಾಂಡಿತ್ಯ ಪಡೆದುಕೊಂಡಿದ್ದರು. 20ನೇ ವಯಸ್ಸಿನಲ್ಲಿ ಪಿಹೆಚ್.ಡಿ ಪದವಿ ಪಡೆದು ಪ್ರಸ್ತುತ ಅಮೆರಿಕಾದಲ್ಲಿ ಲೆಕ್ಕಶಾಸ್ತ್ರ ಪರಿಣಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಐಕ್ಯೂ 225 ರಿಂದ 230. 

What is the Highest IQ in The World Ever Recorded ?

3] ಮರ್ಲಿನ್ ವೋಸ್ ಸವಂಟ್ [228] : ಅಮೆರಿಕಾದಲ್ಲಿ 1946ರಲ್ಲಿ ಜನಿಸಿದ ಈಕೆ ಖ್ಯಾತ ಲೇಖಕಿ ಹಾಗೂ ಅಂಕಣಗಾರ್ತಿಯಾಗಿದ್ದಾರೆ. 1986ರಲ್ಲಿಯೇ ಇವರ ಐಕ್ಯೂ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿತ್ತು. ಆಂಗ್ಲ ಒಗಟುಗಳನ್ನು ಬಿಡಿಸುವುದರಲ್ಲಿ ಮರ್ಲಿನ್ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇವರ ಐಕ್ಯೂ 228.  

What is the Highest IQ in The World Ever Recorded ?  

4] ಕ್ರಿಸ್ಟೋಫರ್ ಹಿರಾಟಾ [225] : ಅಮೆರಿಕಾದವರಾದ ಇವರು ಅಂತರರಾಷ್ಟ್ರೀಯ ಪ್ರಸಿದ್ಧ ಖಭೌತಶಾಸ್ತ್ರಜ್ಞ. 13ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ  ಭೌತಶಾಸ್ತ್ರ ಒಲಂಪಿಯಾಡ್'ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. 16 ನೇ ವಯಸ್ಸಿನಲ್ಲೇ ನಾಸಾ ಹಾಗೂ ಮಂಗಳ ಗ್ರಹದ ಬಗ್ಗೆ ಸಂಶೋಧನೆ ಕೈಗೊಂಡು ಪಿಹೆಚ್.ಡಿ ಪಡೆದಿದ್ದರು. ಇವರ ಐಕ್ಯೂ  225. 

What is the Highest IQ in The World Ever Recorded ?

5] ಕಿಮ್ ಉಂಗ್ ಯಾಂಗ್ [210] : ಕೊರಿಯಾದಲ್ಲಿ 1963ರಲ್ಲಿ ಜನಿಸಿದ ಇವರು ಕೇವಲ ತಿಂಗಳಲ್ಲೇ ಮಾತನಾಡುವುದನ್ನು ಕಲಿತ್ತಿದ್ದರು. 3ನೇ ವಯಸ್ಸಿಗೆ ಇಂಗ್ಲಿಷ್, ಕೊರಿಯಾ, ಜಪಾನ್  ಹಾಗೂ ಜರ್ಮನ್ ಭಾಷೆಗಳನ್ನು ಮಾತನಾಡುತ್ತಿದ್ದರು. 16ನೇ ವಯಸ್ಸಿಗೆ ಪಿಹೆಚ್.ಡಿ ಪದವಿ ಪಡೆದು ಪ್ರಸ್ತುತ ದಕ್ಷಿಣ ಕೊರಿಯಾದ ಪ್ರತಿಷ್ಠಿತ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿದ್ದಾರೆ. ಇವರ ಐಕ್ಯೂ 210.  

What is the Highest IQ in The World Ever Recorded ?  

6] ಎಡ್ತ್ ಸ್ಟ್ರೆನ್ [200 ಕ್ಕೂ ಅಧಿಕ] : ಅಮೆರಿಕಾದ ನ್ಯೂಯಾರ್ಕ್ ಪಟ್ಟಣದಲ್ಲಿ 1901ರಲ್ಲಿ ಜನಿಸಿದ ಇವರು ಪ್ರಸಿದ್ಧ ಕಾದಂಬರಿಗಾರ್ತಿ ಹಾಗೂ ಬರಹಗಾರ್ತಿಯಾಗಿದ್ದರು. ಮಾನಸಿಕ ಖಿನ್ನತೆ, ಅಂಗವಿಕಲರು ಹಾಗೂ ವಯೋವೃದ್ಧರ ಬಗೆಗಿನ ಸಮಸ್ಯೆಗಳನ್ನು ಪರಿಹರಿಸುವಿದರಲ್ಲಿ ಪ್ರಸಿದ್ಧಿ ಪಡೆದಿದ್ದರು. ಇವರ ಐಕ್ಯೂ 200ಕ್ಕೂ ಅಧಿಕ. 

What is the Highest IQ in The World Ever Recorded ?

7] ಕ್ರಿಸ್ಟೋಫರ್ ಮೈಖೇಲ್ ಲಂಗಾನ್ [190 - 210] : ಅಮೆರಿಕಾದಲ್ಲಿ 1952ರಲ್ಲಿ ಜನಿಸಿದ ಕ್ರಿಸ್ಟೋಫರ್ ಸಂಶೋಧಕ, ವಿದ್ವಾಂಸ ಹಾಗೂ  ಬೌನ್ಸರ್ ಕೂಡ ಆಗಿದ್ದಾರೆ. ಇವರೂ ಕೂಡ ಜನಿಸಿದ 6 ತಿಂಗಳಿಗೆ ಮಾತನಾಡುವುದನ್ನು ಕಲಿತರೆ 3ನೇ ವಯಸ್ಸಿಗೆ ಓದುತ್ತಿದ್ದರು. ಇವರ ಐಕ್ಯೂ 190ರಿಂದ 210.

What is the Highest IQ in The World Ever Recorded ?  

8] ಗ್ಯಾರಿ ಕ್ಯಾಸ್ಪರಾವ್ [194] : ವಿಶ್ವದ ನಂ 1 ಚೆಸ್ ಆಟಗಾರ. ರಷ್ಯಾದವರು. ಒಟ್ಟು 15 ವರ್ಷಗಳ ಕಾಲ ವಿಶ್ವದ ನಂ.1 ಚೆಸ್ ಆಟಗಾರರಾಗಿದ್ದರು. 15 ಬಾರಿ ಸತತ ಒಮ್ಮೆಯೂ ಸೋತಿಲ್ಲ. 11 ಬಾರಿ ಚೆಸ್ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇವರ ಐಕ್ಯೂ 194.  

What is the Highest IQ in The World Ever Recorded ? 

9] ಪಿಲಿಪ್ ಇಮಾಗ್ವಾಲಿ [190]: ನೈಜೀರಿಯಾದಲ್ಲಿ 1954ರಲ್ಲಿ ಜನನ.  ಗಣಿತಜ್ಞ, ಕಂಪ್ಯೂಟರ್ ವಿಜ್ಞಾನಿ. ಅರ್ಧಕ್ಕೆ ಶಾಲೆ ಬಿಟ್ಟ ಇವರು ಒಂದಷ್ಟು ಕಾಲ ನೈಜೀರಿಯಾದ ನಾಗರಿಕ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇವರ ಐಕ್ಯೂ 190. ವಿಶ್ವ ಕಂಪ್ಯೂಟರ್ ಪರಿಣಿತರಲ್ಲಿ ಇವರು ಒಬ್ಬರು.  

What is the Highest IQ in The World Ever Recorded ?     

10] ಜುಡಿತ್ ಪೋಲ್ಗಾರ್ [170]: ಹಂಗರಿ ದೇಶದವರು. 1976ರಲ್ಲಿ ಜನನ. ವಿಶ್ವ ವಿಖ್ಯಾತ ಮಹಿಳಾ ಚೆಸ್ ಚಾಂಪಿಯನ್. ತಮ್ಮ 16ನೇ ವಯಸ್ಸಿಗೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದವರು. ಒಟ್ಟು 10 ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಸಿದ್ಧ ವಿಶ್ವಖ್ಯಾತ ಗ್ಯಾರಿ ಕ್ಯಾಸ್ಪರಾವ್ ಅವರನ್ನು 2002ರಲ್ಲಿ ಸೋಲಿಸಿದ್ದರು. ಇವರ ಐಕ್ಯೂ 170.

What is the Highest IQ in The World Ever Recorded ?   

11] ಅಲ್ಬರ್ಟ್ ಐನ್ ಸ್ಟೈನ್ [160-190] : ಸಾಪೇಕ್ಷತ ಸಿದ್ಧಾಂತವನ್ನು ಜಗತ್ತಿನ ಮುಂದಿಟ್ಟವರು. ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಸಿದ್ಧಾಂತಗಳಿಗೂ ಕೂಡ ಮಹತ್ತರವಾದ ಕೊಡುಗೆ ನೀಡಿದ್ದಾರೆ. ದ್ಯುತಿವಿದ್ಯುತ್ ಪರಿಣಾಮ ಬಣ್ಣಿಸಿದ ಇವರ ವಾದ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ನೀಡಿದ ಕೊಡುಗೆಗೆ 1921ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ. 

What is the Highest IQ in The World Ever Recorded ?

12] ಸ್ಟೀಪನ್ ಹಾಕಿಂಗ್ [160]: ಸ್ಟೀಫನ್ ಹಾಕಿಂಗ್ ಅವರನ್ನು ವಿಜ್ಞಾನದ ವಿಸ್ಮಯಕಾರರೆಂದು ಕರೆಯುತ್ತಾರೆ. ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಒಕ್ಕೂಟವು ವಿವರಿಸಿರುವ ವಿಶ್ವವಿಜ್ಞಾನದ ಸಿದ್ಧಾಂತವನ್ನು ಮೊದಲ ಬಾರಿಗೆ ಇವರು ರಚಿಸಿದವರು ಹಾಕಿಂಗ್. ಲೋ ಗೆರಿಗ್ಸ್’ ಎನ್ನುವ ನರವೈಜ್ಞಾನಿಕ ರೋಗದಿಂದ ಬಳಲುತ್ತಿದ್ದ ಇವರು 2018, ಮಾರ್ಚ್ 14 ರಂದು ನಿಧನರಾದರು.

What is the Highest IQ in The World Ever Recorded ?
 

Follow Us:
Download App:
  • android
  • ios