Asianet Suvarna News Asianet Suvarna News

ಭಾರತರತ್ನ ಅಟಲ್ ಬಾಲ್ಯದ ದಿನಗಳು ಹೇಗಿದ್ದವು?

ಮಾಜಿ ಪ್ರಧಾನಿ, ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅಪಾರ ಆದರ್ಶಗಳನ್ನು ಬಿಟ್ಟು ಈ ಲೋಕದ ಯಾತ್ರೆ ಮುಗಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಾಜಪೇಯಿ ಕಳೆದ ಎರಡು ತಿಂಗಳಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Former prime minister atal bihari vajpayee childhood days
Author
Bengaluru, First Published Aug 16, 2018, 6:15 PM IST

ಬೆಂಗಳೂರು[ಆ.16] ಮುತ್ಸದ್ಧಿ ರಾಜಕಾರಣಿ, ಅಜಾತಶತ್ರು ವಾಜಪೇಯಿ ಅವರ ಬಾಲ್ಯದ ದಿನಗಳು ಹೇಗಿದ್ದವು. ಇಲ್ಲೊಂದು ಚಿತ್ರಣ ನಿಮ್ಮ ಮುಂದಿದೆ. ಧೀಮಂತ ರಾಜಕಾರಣಿ, ಕವಿ, ಪತ್ರಕರ್ತ, ಶ್ರೇಷ್ಠವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ ಅಟಲ್ ಅವರ ಬಾಲ್ಯ ಹೇಗಿತ್ತು?

* ವಾಜಪೇಯಿ ಹುಟ್ಟಿದ್ದು 1924ರಲ್ಲಿ ಕ್ರಿಸ್ ಮಸ್ ದಿನ [ಡಿಸೆಂಬರ್  25, 1924]. ತಾಯಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ. ತಂದೆ ಶಾಲಾ ಶಿಕ್ಷಕ ಹಾಗೂ ಕವಿಯಾಗಿದ್ದವರು.

* ವಾಜಪೇಯಿ ಹುಟ್ಟಿದ್ದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣೆ ಎಂಬ ಗ್ರಾಮದಲ್ಲಿ.

* ವಿಕ್ಟೋರಿಯಾ ಕಾಲೇಜಿನಲ್ಲಿ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪದವಿ, ಬಳಿಕ ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.
 
* ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಅಟಲ್ ಬಿಹಾರಿ ವಾಜಪೇಯಿ ಕವಿ ಕೂಡಾ ಹೌದು.   Twenty-One Poems ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದ.
 
* 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು.

ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. 'ವೀರ ಅರ್ಜುನ' ಹಾಗೂ 'ಪಾಂಚಜನ್ಯ' ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು. ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ವಾಜಪೇಯಿ. 1968 ಹಾಗೂ 1973ರಲ್ಲಿ ಇದರ ಮುಖ್ಯಸ್ಥರಾಗಿದ್ದರು. 

Follow Us:
Download App:
  • android
  • ios