ಹಳೆ ನೋಟುಗಳಿಗೆ ವಿಶೇಷ ಬೇಡಿಕೆ ಇದೆ. ಆನ್ಲೈನ್ ಗಳಲ್ಲಿ ಲಕ್ಷಾಂತರ ರೂಪಾಯಿ ನೀಡಿ ಅದನ್ನು ಖರೀದಿಸಲಾಗುತ್ತದೆ. ಈಗ ಭಾರತದಲ್ಲಿ ಮುದ್ರಣವಾಗ್ತಿದ್ದ, ಗಲ್ಫ್ ದೇಶಗಳಲ್ಲಿ ಮಾನ್ಯವಾಗಿದ್ದ ನೋಟೊಂದು 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ನಿಮ್ಮ ಮನೆಯಲ್ಲೂ ಈ ನೋಟಿದ್ಯಾ ಚೆಕ್ ಮಾಡ್ಕೊಳ್ಳಿ.
ಹಳೆಯ ನೂರು ರೂಪಾಯಿ ನೋಟೊಂದು 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ನಿಮಗೆ ಅಚ್ಚರಿ ಆಗ್ಬಹುದು. ಆದ್ರೆ ಇದು ಸತ್ಯ. 1950 ರ ದಶಕದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ 100 ರೂಪಾಯಿ 'ಹಜ್ ನೋಟು' ಲಂಡನ್ ಹರಾಜಿನಲ್ಲಿ 56 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಕೆಲವು ಗಲ್ಫ್ ದೇಶಗಳಲ್ಲಿ ಮಾತ್ರ ಈ ನೋಟುಗಳು ಮಾನ್ಯವಾಗಿದ್ದವು. ಈ ಅಪರೂಪದ ನೋಟಿಗೆ ಈಗ್ಲೂ ಬೆಲೆ ಜಾಸ್ತಿ.
56 ಲಕ್ಷಕ್ಕೆ ಮಾರಾಟವಾದ 100ರ ನೋಟು
56 ಲಕ್ಷ ರೂಪಾಯಿಗೆ ಮಾರಾಟವಾದ ನೋಟಿನ ಸಿರಿಯಲ್ ಸಂಖ್ಯೆ HA 078400. ಈ ಹಜ್ ನೋಟುಗಳನ್ನು, ಹಜ್ ಯಾತ್ರೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುವ ಭಾರತೀಯ ತೀರ್ಥಯಾತ್ರಿಕರಿಗಾಗಿ ಆರ್ ಬಿಐ ಬಿಡುಗಡೆ ಮಾಡಿತ್ತು. ಯಾತ್ರಿಕರು ಹಜ್ ಯಾತ್ರೆಗಾಗಿ ಚಿನ್ನವನ್ನು ಖರೀದಿಸುತ್ತಿದ್ದರು. ಇದು ಭಾರತದಿಂದ ಅಕ್ರಮವಾಗಿ ಚಿನ್ನದ ರಫ್ತಿಗೆ ಕಾರಣವಾಯಿತು. ಅಕ್ರಮವಾಗಿ ಚಿನ್ನ ಖರೀದಿಸುವುದನ್ನು ತಡೆಯುವ ಉದ್ದೇಶದಿಂದ ಈ ಕರೆನ್ಸಿ ಜಾರಿಗೆ ಬಂದಿತ್ತು. ಈ ನೋಟು ಭಾರತದಲ್ಲಿ ಮಾನ್ಯವಾಗ್ತಿರಲಿಲ್ಲ. 1961 ರಲ್ಲಿ, ಕುವೈತ್ ತನ್ನದೇ ಆದ ಕರೆನ್ಸಿಯನ್ನು ಪರಿಚಯಿಸಿತು. ಇದನ್ನು ಶೀಘ್ರದಲ್ಲೇ ಇತರ ಗಲ್ಫ್ ರಾಷ್ಟ್ರಗಳು ಅಳವಡಿಸಿಕೊಂಡವು. ಇದರ ಪರಿಣಾಮವಾಗಿ, 1970 ರ ದಶಕದಲ್ಲಿ ಹಜ್ ನೋಟುಗಳ ಉತ್ಪಾದನೆ ನಿಂತುಹೋಯಿತು. ಇತ್ತೀಚಿನ ದಿನಗಳಲ್ಲಿ, ಈ ನೋಟುಗಳನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ. ಕರೆನ್ಸಿ ಸಂಗ್ರಹಕಾರರು, ಹೆಚ್ಚಿನ ಬೆಲೆ ನೀಡಿ ಇದನ್ನು ಖರೀದಿ ಮಾಡ್ತಿದ್ದಾರೆ.
Interesting Facts: ₹1 ನಾಣ್ಯ ತಯಾರಿಸಲು ₹1.11 ವೆಚ್ಚ! ನಷ್ಟ ಆದ್ರೂ ಖರ್ಚು ಮಾಡೋದ್ಯಾಕೆ ಸರ್ಕಾರ?
ಹಜ್ ನೋಟುಗಳ ವಿಶೇಷತೆ ಏನು?
ಹಜ್ ನೋಟ್ಗಳು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದವು. ಸೀರಿಯಲ್ ಸಂಖ್ಯೆ HA ನಿಂದ ಶುರುವಾಗ್ತಿತ್ತು. ಅದನ್ನು ಗುರುತಿಸುವುದು ಸುಲಭವಾಗಿತ್ತು. ಈ ನೋಟುಗಳು ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಬಹ್ರೇನ್, ಕುವೈತ್ ಮತ್ತು ಓಮನ್ನಂತಹ ಕೆಲವು ಗಲ್ಫ್ ದೇಶಗಳಲ್ಲಿ ಮಾತ್ರ ಮಾನ್ಯವಾಗಿದ್ದವು. ಹಜ್ ನೋಟುಗಳ ಬಣ್ಣ ಸಾಮಾನ್ಯ ಭಾರತೀಯ ನೋಟುಗಳಿಗಿಂತ ಭಿನ್ನವಾಗಿತ್ತು.
ಹಿಂದಿನ ವರ್ಷವೂ ದುಬಾರಿ ಬೆಲೆಗೆ ಮಾರಾಟವಾಗಿದ್ದ ನೋಟು
ಈ ವರ್ಷ ಮಾತ್ರವಲ್ಲ ಮೇ 2024 ರಲ್ಲಿಯೂ ದುಬಾರಿ ಬೆಲೆಗೆ ಈ ನೋಟುಗಳು ಮಾರಾಟ ಆಗಿದ್ದವು. ಲಂಡನ್ನಲ್ಲಿ ನಡೆದ ಹರಾಜಿನಲ್ಲಿ ಎರಡು ಹಳೆಯ 10 ರೂಪಾಯಿ ನೋಟುಗಳು ಹೆಚ್ಚಿನ ಬೆಲೆಗೆ ಹರಾಜಾಗಿದ್ದವು. ಒಂದು ನೋಟು 6.90 ಲಕ್ಷ ರೂಪಾಯಿಗಳಿಗೆ ಮತ್ತು ಇನ್ನೊಂದು 5.80 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿತ್ತು.
ನಿಮ್ಮ ಬಳಿಯೂ 2 ಸಾವಿರ ರೂಪಾಯಿ ನೋಟಿದ್ಯಾ? ಆರ್ ಬಿಐ ಬಿಗ್ ಅಪ್ಡೇಟ್ ಇದು
ಆಗ ಹರಾಜಾಗಿದ್ದ ನೋಟುಗಳನ್ನು ಮೇ 25, 1918 ರಂದು ಮೊದಲನೆಯ ಮಹಾಯುದ್ಧದ ಅಂತಿಮ ವರ್ಷಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ನೋಟುಗಳು ಜುಲೈ 2, 1918 ರಂದು ಜರ್ಮನ್ ಯು-ಬೋಟ್ನಿಂದ ಟಾರ್ಪಿಡೊ ಮಾಡಲ್ಪಟ್ಟ ಬ್ರಿಟಿಷ್ ಹಡಗು ಎಸ್ಎಸ್ ಶಿರಾಲಾದಲ್ಲಿತ್ತು. ಎಸ್ಎಸ್ ಶಿರಾಲಾ ಮುಳುಗುವುದು ಒಂದು ಮಹತ್ವದ ಐತಿಹಾಸಿಕ ಘಟನೆಯಾಗಿದೆ. ಆ ಯುಗದ ನೋಟುಗಳು ವಿಶಿಷ್ಟ ಐತಿಹಾಸಿಕ ಮಹತ್ವವನ್ನು ಹೊಂದಿವೆ. ಅದಕ್ಕಾಗಿಯೇ ಅವು 21 ನೇ ಶತಮಾನದಲ್ಲಿ ಅಂತಹ ಹೆಚ್ಚಿನ ಬೆಲೆಗಳನ್ನು ಹೊಂದಿವೆ.


