MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Money
  • Economy
  • ನಿಮ್ಮ ಬಳಿಯೂ 2 ಸಾವಿರ ರೂಪಾಯಿ ನೋಟಿದ್ಯಾ? ಆರ್ ಬಿಐ ಬಿಗ್ ಅಪ್ಡೇಟ್ ಇದು

ನಿಮ್ಮ ಬಳಿಯೂ 2 ಸಾವಿರ ರೂಪಾಯಿ ನೋಟಿದ್ಯಾ? ಆರ್ ಬಿಐ ಬಿಗ್ ಅಪ್ಡೇಟ್ ಇದು

ನೋಟ್ ಬ್ಯಾನ್ ಸಂದರ್ಭದಲ್ಲಿ ಅನೇಕರಿಗೆ ಆಸರೆಯಾಗಿದ್ದ 2 ಸಾವಿರ ರೂಪಾಯಿ ನೋಟು ಈಗ ಕಣ್ಮರೆಯಾಗ್ತಿದೆ. ಈಗಾಗಲೇ ಆರ್ ಬಿಐ ಅದ್ರ ಮುದ್ರಣ ನಿಲ್ಲಿಸಿದ್ದು, ಬ್ಯಾಂಕ್ ಕೂಡ ನೋಟು ಪಡೆಯುತ್ತಿಲ್ಲ. ಈಗ ಅದ್ರ ಬಗ್ಗೆ ಮತ್ತೊಂದು ಅಪ್ಡೇಟ್ ಬಂದಿದೆ.

2 Min read
Author : Roopa Hegde
Published : Feb 05 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
16
2000 ರೂಪಾಯಿ ನೋಟು
Image Credit : Asianet News

2000 ರೂಪಾಯಿ ನೋಟು

ನವೆಂಬರ್ 2016 ರಲ್ಲಿ ಸರ್ಕಾರ ನೋಟು ರದ್ದತಿ ಘೋಷಿಸಿತ್ತು. ರಾತ್ರೋರಾತ್ರಿ 500 ಮತ್ತು 1000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿತ್ತು. ಈ ಸಂದರ್ಭದಲ್ಲಿ ದೇಶದ ಜನರು ತೀವ್ರ ನಗದು ಕೊರತೆ ಎದುರಿಸಬೇಕಾಯ್ತು. ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಆರ್ಥಿಕತೆಯಲ್ಲಿ ನಗದು ಚಲಾವಣೆ ಹೆಚ್ಚಿಸಲು, ಜೊತೆಗೆ ಜನರಿಗೆ ನೋಟಿನ ಬದಲಾವಣೆ ಸುಲಭವಾಗಲಿ ಎನ್ನುವ ಕಾರಣಕ್ಕೆ ಸರ್ಕಾರ 2000 ರೂಪಾಯಿ ಮುಖಬೆಲೆಯ ನೋಟನ್ನು ಪರಿಚಯಿಸಿತ್ತು.

26
ಮಹತ್ವದ ಘೋಷಣೆ
Image Credit : Asianet News

ಮಹತ್ವದ ಘೋಷಣೆ

2018-19 ರ ಹೊತ್ತಿಗೆ ದೇಶ ಸಹಜ ಸ್ಥಿತಿಗೆ ಮರಳಿತ್ತು. ದೇಶದಲ್ಲಿ ನಗದು ಬಿಕ್ಕಟ್ಟಿಗೆ ಮುಕ್ತಿ ಸಿಕ್ಕಿತ್ತು. ಇದಾದ್ಮೇಲೆ ಆರ್ಬಿಐ, 2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಮೇ 2023 ರಲ್ಲಿ, ಆರ್ಬಿಐ ಕ್ಲೀನ್ ನೋಟ್ ನೀತಿಯಡಿಯಲ್ಲಿ 2000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು.

Related Articles

Related image1
Business Idea: 1 ಲಕ್ಷ ಹೂಡಿಕೆ, ದಿನಕ್ಕೆ 2 ಸಾವಿರ ಗಳಿಕೆ! 6 ತಿಂಗ್ಳಲ್ಲಿ ಲಕ್ಷಾಧಿಪತಿಯಾಗೋದು ಪಕ್ಕಾ
Related image2
ಕೆಲಸ ಬಿಟ್ಟ ನಂತ್ರ ಪಿಎಫ್ ಏನ್ ಮಾಡ್ಬೇಕು?, ಈ ಒಂದು ತಪ್ಪು ನಿರ್ಧಾರದಿಂದ ನಿವೃತ್ತಿ ಸಮಯದಲ್ಲಿ ಪಶ್ಚಾತಾಪ ಪಡ್ತೀರಿ
36
ಆರ್ ಬಿಐಗೆ ಮರಳಿದ ಶೇ. 98ರಷ್ಟು ನೋಟು
Image Credit : Asianet News

ಆರ್ ಬಿಐಗೆ ಮರಳಿದ ಶೇ. 98ರಷ್ಟು ನೋಟು

ಆರ್ ಬಿಐ ಘೋಷಣೆ ನಂತ್ರ 2000 ರೂಪಾಯಿ ನೋಟುಗಳಲ್ಲಿ ಸರಿಸುಮಾರು ಶೇಕಡಾ 98 ರಷ್ಟು ನೋಟುಗಳು ಈಗಾಗಲೇ ಆರ್ಬಿಐಗೆ ಮರಳಿವೆ. ಪ್ರಸ್ತುತ, ಕೇವಲ 5,669 ಕೋಟಿ ಮೌಲ್ಯದ ನೋಟುಗಳು ಮಾತ್ರ ಮಾರ್ಕೆಟ್ ನಲ್ಲಿ ಚಲಾವಣೆಯಲ್ಲಿವೆ. ತಜ್ಞರ ಪ್ರಕಾರ, 2000 ರೂಪಾಯಿ ಮುಖಬೆಲೆ ನೋಟುಗಳು 2026 ರವರೆಗೆ ಕಾನೂನುಬದ್ಧವಾಗಿ ಉಳಿಯಲಿವೆ. ಆದ್ರೆ ಅವುಗಳ ಪ್ರಾಯೋಗಿಕ ಬಳಕೆ ಗಮನಾರ್ಹವಾಗಿ ಕಡಿಮೆಯಾಗಿದೆ.

46
ನಿಮ್ಮ ಬಳಿ 2000 ರೂ. ನೋಟಿದ್ಯಾ?
Image Credit : Asianet News

ನಿಮ್ಮ ಬಳಿ 2000 ರೂ. ನೋಟಿದ್ಯಾ?

ನಿಮ್ಮ ಬಳಿ 2000 ರೂಪಾಯಿ ನೋಟಿದ್ರೆ ಭಯಪಡುವ ಅಗತ್ಯವಿಲ್ಲ. ನೋಟುಗಳು ಕಾನೂನುಬದ್ಧವಾಗಿ ಮಾನ್ಯವಾಗಿದೆ. ಆದ್ರೆ ಅಕ್ಟೋಬರ್ 7, 2023 ರ ನಂತ್ರ ಯಾವುದೇ ಸಾಮಾನ್ಯ ಬ್ಯಾಂಕ್ನಲ್ಲಿ 2000 ನೋಟುಗಳ ವಿನಿಮಯ ಆಗ್ತಿಲ್ಲ. ಅಂದ್ರೆ ಯಾವುದೇ ಬ್ಯಾಂಕ್ ನೀವು ನೀಡುವ 2 ಸಾವಿರ ರೂಪಾಯಿ ನೋಟನ್ನು ಪಡೆಯುತ್ತಿಲ್ಲ.

56
ನಿಮ್ಮ ಮುಂದಿರುವ ಆಯ್ಕೆ ಏನು?
Image Credit : Asianet News

ನಿಮ್ಮ ಮುಂದಿರುವ ಆಯ್ಕೆ ಏನು?

ನಿಮ್ಮ ಬಳಿ ಈಗ್ಲೂ 2 ಸಾವಿರ ರೂಪಾಯಿ ಮುಖಬೆಲೆ ನೋಟಿದ್ದರೆ ನೀವು ಅದನ್ನು ಬದಲಿಸಿಕೊಳ್ಳಲು ಒಂದು ಆಯ್ಕೆ ಇದೆ. ನೀವು ಆರ್ ಬಿಐ (RBI) ನ 19 ಗೊತ್ತುಪಡಿಸಿದ ಕಚೇರಿಗಳಲ್ಲಿ ಒಂದರಲ್ಲಿ 2000 ರೂಪಾಯಿ ನೋಟುಗಳನ್ನು ಠೇವಣಿ ಮಾಡಬಹುದು. ಈ ಕಚೇರಿಗಳು ಬೆಂಗಳೂರು, ಅಹಮದಾಬಾದ್, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತಪುರಂ ಮತ್ತು ಬೇಲಾಪುರದಲ್ಲಿವೆ.

66
ಆದಷ್ಟು ಬೇಗ ಕ್ರಮ
Image Credit : Asianet News

ಆದಷ್ಟು ಬೇಗ ಕ್ರಮ

2000 ರೂಪಾಯಿ ನೋಟು ಇನ್ನೂ ಮಾನ್ಯವಾಗಿದೆ. ಆದ್ರೆ ಮಾರ್ಕೆಟ್ ನಲ್ಲಿ ಅದ್ರ ಚಲಾವಣೆ ಕಣ್ಮರೆಯಾಗ್ತಿದೆ. ನೀವು 2 ಸಾವಿರ ರೂಪಾಯಿ ನೀಡಿದ್ರೆ ಅದನ್ನು ವ್ಯಾಪಾರಸ್ಥರು ಪಡೆಯುತ್ತಿಲ್ಲ. ಮುಂದೆ ಸಮಸ್ಯೆ ಎದುರಿಸುವ ಬದಲು ಈಗ್ಲೇ ನೋಟು ವಿನಿಮಯಕ್ಕೆ ಮುಂದಾದ್ರೆ ಒಳ್ಳೆಯದು. ಸಾಸಿವೆ ಡಬ್ಬದಲ್ಲಿ, ಬೀರುವಿನಲ್ಲಿ, ಹಳೆ ಪರ್ಸ್ ನಲ್ಲಿ 2 ಸಾವಿರ ರೂಪಾಯಿ ನೋಟಿದ್ರೆ ಅದನ್ನು ಆರ್ ಬಿಐ ಕಚೇರಿಗೆ ತೆಗೆದುಕೊಂಡು ಹೋಗಿ ನೋಟು ವಿನಿಮಯ ಮಾಡ್ಕೊಳ್ಳಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಹಣ (Hana)
ವ್ಯವಹಾರ

Latest Videos
Recommended Stories
Recommended image1
Indian Rupee vs USD: ರೂಪಾಯಿ ಕುಸಿದರೂ ಪ್ರಗತಿಯತ್ತ ಭಾರತ: ನಿಜಕ್ಕೂ ಏನಾಗುತ್ತಿದೆ?‌
Recommended image2
ಕೇವಲ 1% ಜನರ ಕೈಯಲ್ಲಿ ಭಾರತದ 40% ಸಂಪತ್ತು, ವಿಶ್ವ ಅಸಮಾನತೆ ವರದಿ 2026 ರ ಭಯಾನಕ ಚಿತ್ರ!
Recommended image3
ಕೇರಳ ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯ
Related Stories
Recommended image1
Business Idea: 1 ಲಕ್ಷ ಹೂಡಿಕೆ, ದಿನಕ್ಕೆ 2 ಸಾವಿರ ಗಳಿಕೆ! 6 ತಿಂಗ್ಳಲ್ಲಿ ಲಕ್ಷಾಧಿಪತಿಯಾಗೋದು ಪಕ್ಕಾ
Recommended image2
ಕೆಲಸ ಬಿಟ್ಟ ನಂತ್ರ ಪಿಎಫ್ ಏನ್ ಮಾಡ್ಬೇಕು?, ಈ ಒಂದು ತಪ್ಪು ನಿರ್ಧಾರದಿಂದ ನಿವೃತ್ತಿ ಸಮಯದಲ್ಲಿ ಪಶ್ಚಾತಾಪ ಪಡ್ತೀರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved