ಬೆಂಗಳೂರು (ಡಿ. 15): ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ಮಗನನ್ನು ಬಿಡಿಸುತ್ತೇವೆಂದು ವೃದ್ಧೆ ಗಿರಿಜಮ್ಮ ಎಂಬುವವರಿಗೆ  ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ಸ್ನೇಹಿತರು ವಂಚನೆ ಮಾಡಿದ್ದಾರೆ ಎನ್ನಲಾಗಿದೆ.  

ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಕೆಜಿಎಫ್‌ 2 ಟೀಂನಿಂದ ಹೊಸ ಸುದ್ದಿ!

ನವೆಂಬರ್ 22 ರ ರಾತ್ರಿ ನಮ್ಮ ಮನೆಗೆ ಪ್ರಶಾಂತ್ ರಾಜ್, ನವೀನ್ ರಾಜ್ ಹಾಗೂ ಅವರ ಮಾವ ನಾಗರಾಜ್ ಬಂದಿದ್ದರು. ನಿಮ್ಮ ಮಗನನ್ನ ಬಿಡುಗಡೆ ಮಾಡಿಸ್ತೀವಿ 20 ಲಕ್ಷ ನೀಡಬೇಕು ಎಂದರು. ಹತ್ತಿರದ ಸಂಬಂಧಿಕರಾದ್ದರಿಂದ ಅವರ ಮಾತು ನಂಬಿ 10 ಲಕ್ಷ ಹಣ ನೀಡಿದೆವು. ಹಣ ಸಾಕಾಗುವುದಿಲ್ಲ ಎಂದ ಮೂವರೂ 542 ಗ್ರಾಂ ಚಿನ್ನಾಭರಣವನ್ನೂ ಪಡೆದಿದ್ದರು ಎಂದು ಗಿರಿಜಮ್ಮ ಅಪಾದಿಸಿದ್ದರು. 

ಹಸಿಬಿಸಿ ಸೀನ್‌ಗಳಲ್ಲಿ ನಟಿಸುವಾಗ ಈ ನಟನಿಗೆ ಕೈ ಕಾಲು ನಡುಗುತ್ತಂತೆ!

ನಂತರ ಕೆಲಸವನ್ನು ಮಾಡಿ ಕೊಡಿ ಎಂದು ಪೋನ್ ಮಾಡಿದ್ರೆ ಫೋನ್ ಎತ್ತುತ್ತಿಲ್ಲ. ನೀಡಿದ ಹಣವನ್ನು ವಾಪಾಸ್ ಕೇಳಿದ್ರೆ ಜೀವ ಬೆದರಿಕೆ ಹಾಕುತ್ತಿದ್ದಾರೆ  ನಿರ್ದೇಶಕ ಎಂದು ಗಿರಿಜಮ್ಮ ಆಪಾದಿಸಿದ್ದಾರೆ. ವಂಚನೆ ವಿಚಾರ ತಿಳಿದು ನಿರ್ದೇಶಕ ಹಾಗೂ ಆತನ ಸ್ನೇಹಿತನ ವಿರುದ್ದ ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಗಿರಿಜಮ್ಮ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಯಾರ ಸಂಪರ್ಕಕ್ಕೂ ಸಿಗದೆ ಆರೋಪಿಗಳು ನಾಪತ್ತೆಯಾಗಿದ್ದಾರೆ. ಎಚ್.ಎ.ಎಲ್ ಠಾಣಾ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.