'ಕಾರ್ವಾನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟ  ದುಲ್ಕರ್ ಸಲ್ಮಾನ್  ಭರವಸೆಯನ್ನು ಮೂಡಿಸಿದ ನಟ.  ಮಲಯಾಳಂನಲ್ಲಿ ಉಸ್ತಾದ್ ಹೋಟೆಲ್, ನಜಾನ್, ವಯಾಯಿ ಮೋದಿ ಪೇಸಾವಂ, ಓ ಕಾದಲ್ ಕಣ್ಮಣಿ ಹಾಗೂ ಚಾರ್ಲಿ ಸಿನಿಮಾಗಳಲ್ಲಿ ನಟಿಸಿ ಒಂದು ಮಟ್ಟಿಗೆ ಹೆಸರು ಮಾಡಿದ್ದಾರೆ. 

ಐರಾ ಬರ್ತಡೇ ವಿಡಿಯೋ ರಿಲೀಸ್ ಮಾಡಿದ ಯಶ್

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಇವರು ಹೇಳಿರುವ ಹೇಳಿಕೆ ಗಮನ ಸೆಳೆದಿದೆ.  

ಸಿನಿಮಾಗಳಲ್ಲಿ Intimate seen ಮಾಡುವಾಗ ನನ್ನ ಕೈ ಕಾಲುಗಳು ನಡುಗುತ್ತವೆ. ಸ್ವಲ್ಪ ಭಯವಾಗುತ್ತದೆ. ನಮ್ಮ ಹೆಂಡತಿ, ತಂಗಿ, ಮಗಳು, ಅಮ್ಮ ಆದರೆ ಪ್ರೀತಿ ತೋರಿಸುವುದು ಸುಲಭ. ಅದೇ ತೆರೆ ಮೇಲೆ ಬೇರೆಯವರ ಜೊತೆ ಪ್ರೀತಿಯಿಂದ ನಟಿಸೋದು ಕಷ್ಟ. ಅವರು ಏನಂದುಕೊಳ್ಳುತ್ತಾರೋ ಎಂಬ ಭಯ ಇದ್ದೇ ಇರುತ್ತದೆ' ಎಂದು ಹೇಳಿದ್ದಾರೆ.