ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾದಲ್ಲಿ ವಿಲ್ ಆಗಿ ನಟಿಸಿ ತೆಲುಗು ಸಿನಿ ಪ್ರಿಯರ ಮನಸ್ಸು ಗೆದ್ದ ಕಿಚ್ಚ ಸುದೀಪ್‌ಗೆ ಈಗ ಮತ್ತೊಂದು ಬಿಗ್‌ ಆಫರ್ ಬಂದಿದೆ. 'ಈಗ' ಸಿನಿಮಾದಲ್ಲಿ ತಮ್ಮ ನಟನೆಯಿಂದ ಹೀರೋ ಆಗೋದಕ್ಕೂ ಸೈ, ವಿಲನ್‌ಗೂ ಸೈ ಅಂತ ತೋರಿಸಿಕೊಟ್ಟಿದ್ರು ಸುದೀಪ್.

ನಿರ್ದೇಶಕ ಪರಶುರಾಮ್ ಮಹೇಶ್‌ ಬಾಬು ನಾಯಕ ನಟನಾಗಿ ನಟಿಸುತ್ತಿರುವ ಸರ್ಕಾರು ವಾರಿ ಪಾಠದಲ್ಲಿ ಮೈನ್ ವಿಲನ್ ಆಗಿ ನಟಿಸುವುದಕ್ಕೆ ಸುದೀಪ್‌ಗೆ ಆಫರ್ ಕೊಟ್ಟಿದ್ದಾರೆ.

ಲಾಕ್‌ಡೌನ್‌ನಲ್ಲಿ ಸಮಂತಾ ಶುರು ಹಚ್ಕೊಂಡ್ರು ಹೊಸ ಹವ್ಯಾಸ..! ಟೆರೇಸ್ ಗಾರ್ಡನ್ ಹೇಗಿದೆ ನೋಡಿ

ಮಾಸ್‌ ಹೀರೋ ಆಗಿರೋ ಒಬ್ಬರನ್ನೇ ಸಿನಿಮಾದಲ್ಲಿ ವಿಲನ್ ಮಾಡಬೇಕೆಂದು ನಿರ್ದೇಶಕ ಬಯಸಿದ್ದಾರೆ.  ಕನ್ನಡ ಸಿನಿಮಾ ಲೋಕದಲ್ಲಿ ಅಂತಹದೊಂದು ಹವಾ ಇರೋರು ಸುದೀಪ್. ಕಳೆದ ವರ್ಷ ಸಲ್ಮಾನ್‌ ಖಾನ್ ಅಭಿನಯದ ದಬಾಂಗ್ 3ಯಲ್ಲಿ ಕಿಚ್ಚ ಮೈನ್ ವಿಲನ್ ರೋಲ್ ಪ್ಲೇ ಮಾಡಿದ್ರು.

ಆರಂಭದಲ್ಲಿ ಉಪೇಂದ್ರ ಅವರನ್ನು ಚೂಸ್ ಮಾಡುವುದೆಂದು ನಿರ್ದೇಶಕ ಆಲೋಚಿಸಿದ್ರು. ಆದರೆ ಉಪೇಂದ್ರ ಈ ಆಫರ್ ಬೇಡ ಎಂದಿದ್ರು. ಇದೀಗ ಸುದೀಪ್ ಅವರನ್ನು ಹೇಗಾದ್ರು ಕನ್ವಿನ್ಸ್ ಮಾಡಿ ಸಿನಿಮಾ ಮಾಡೋ ಚಿಂತೆಗೆ ಬಿದ್ದಿದ್ದಾರೆ ನಿರ್ದೇಶಕ.

'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು!

ಮಹೇಶ್ ಬಾಬು ರಿಚ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದು, ಕಥೆಯಲ್ಲೊಂದು ಪ್ಲ್ಯಾಶ್‌ಬ್ಯಾಕ್ ಕೂಡಾ ಇರಲಿದೆ. ಮೈತ್ರಿ ಮೂವಿ ಮೇಕರ್ಸ್‌ ಸಿನಿಮಾ ಮಾಡುತ್ತಿದ್ದಾರೆ. ತಮನ್ ಅವರು ಸಂಗೀತ ಸಂಯೋಜಿಸಲಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಸುದ್ದಿಗಳು

"