ಮಹೀಂದ್ರಾ ಗ್ರೂಪ್‌ನ ಬಸ್‌ ಹಾಗೂ ಟ್ರಕ್‌ನ ಜಾಹೀರಾತು ಶೂಟ್‌  ಶೂಟಿಂಗ್‌ ವೇಳೆ ತಾಳ್ಮೆ ಕಳೆದುಕೊಂಡ ನಟ ಅಜಯ್‌ದೇವಗನ್ ಟ್ವಿಟ್ಟರ್‌ನಲ್ಲಿ ಆನಂದ್‌ ಮಹೀಂದ್ರಾ ಏನ್‌ ಹೇಳಿದ್ರು ನೋಡಿ

ಮುಂಬೈ(ಫೆ.15): ಖ್ಯಾತ ಉದ್ಯಮಿ ಆನಂದ್‌ ಮಹೀಂದ್ರಾ ಸಾರಥ್ಯದ ಮಹೀಂದ್ರಾ ಗ್ರೂಪ್‌ನ ಜಾಹೀರಾತು ಚಿತ್ರೀಕರಣದ ವೇಳೆ ಬಾಲಿವುಡ್‌ನ ಖ್ಯಾತ ನಟ ಅಜಯ್ ದೇವಗನ್ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಈ ಬಗ್ಗೆ ನಂತರ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. ಆನಂದ್‌ ಮಹೀಂದ್ರಾ ಟ್ವಿಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನಂದ್ ಮಹೀಂದ್ರಾ ಅವರು ತಮ್ಮದೇ ಮಹೀಂದ್ರಾ ಟ್ರಕ್ ಮತ್ತು ಬಸ್‌ನ ಟ್ವಿಟರ್ ಖಾತೆ ಪೋಸ್ಟ್ ಮಾಡಿದ ಜಾಹೀರಾತನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ನಟ ಅಜಯ್ ದೇವಗನ್ ಇರುವ ಜಾಹೀರಾತಿನ ಸಣ್ಣ ವಿಡಿಯೋ ಇದೆ. 

ಹೆಡ್ಡಿಂಗ್ ನೋಡಿ ಬಹುಶಃ ನಿಮಗೂ ಗೊಂದಲವಾಗಿರಬಹುದು. ಆನಂದ್‌ ಮಹೀಂದ್ರಾ ಹಾಗೂ ನಟ ಅಜಯ್‌ ದೇವಗನ್‌ ಮಧ್ಯೆ ಎಲ್ಲವೂ ಸರಿ ಇಲ್ಲವೇ. ಸರಿ ಇದಿದ್ದರೆ ಹೀಗೆ ಏಕಾಯಿತು ಎಂದು ನೀವು ಯೋಚಿಸಬಹುದು. ಆದರೆ ಇದು ಕೇವಲ ಪ್ರಚಾರದ ಉಪಾಯವಾಗಿದೆ. ಮಹೀಂದ್ರಾ ಗ್ರೂಪ್‌ನ ವಾಣಿಜ್ಯ ವಾಹನ ತಯಾರಿಕಾ ವಿಭಾಗವಾದ ಮಹೀಂದ್ರಾ ಟ್ರಕ್ ಅಂಡ್ ಬಸ್, ಬ್ರಾಂಡ್ ಅಂಬಾಸಿಡರ್ ಆಗಿರುವ ಅಜಯ್ ದೇವಗನ್ ಅವರನ್ನು ಒಳಗೊಂಡ ಪ್ರಚಾರದ ವೀಡಿಯೊವನ್ನು ಭಾನುವಾರ ಪೋಸ್ಟ್ ಮಾಡಿದೆ. ಸ್ಕ್ರಿಪ್ಟ್‌ನ ಭಾಗವಾಗಿ, ಸ್ಕ್ರಿಪ್ಟ್‌ನಲ್ಲಿನ ಬದಲಾವಣೆಗಳಿಂದಾಗಿ ನಟ ಅಜಯ್ ಸಿಟ್ಟಿಗೆದ್ದಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ.

Scroll to load tweet…

ವೈರಲ್ ಆದ ಈ ಜಾಹೀರಾತಿನಲ್ಲಿ ಅಜಯ್ ದೇವಗನ್ 'ಯೇ ಬಾರ್ ಬಾರ್ ಸ್ಕ್ರಿಪ್ಟ್ ಕ್ಯೂ ಬದಲ್ ರಹೇ ಹೋ? (ಸ್ಕ್ರಿಪ್ಟ್ ಅನ್ನು ಏಕೆ ಪದೇ ಪದೇ ಬದಲಾಯಿಸುತ್ತಿದ್ದೀರಿ' ಎಂದು ಹೇಳುವುದನ್ನು ಕೇಳಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ, ಶೂಟ್‌ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು ಸ್ಕ್ರಿಪ್ಟ್ ಅನ್ನು ಮತ್ತೆ ಮತ್ತೆ ಬದಲಾಯಿಸಲಾಗಿಲ್ಲ, ಕೇವಲ ನಾಲ್ಕು ಬಾರಿ ಮಾತ್ರ ಬದಲಾಯಿಸಲಾಗಿದೆ ಎಂದು ನಗುತ್ತಾ ಹೇಳುತ್ತಾರೆ. ಈ ಜಾಹೀರಾತು 'ವೀಕ್ಷಿಸುತ್ತಿರಿ' ಎಂದು ಹೇಳುವುದರೊಂದಿಗೆ ಕೊನೆಗೊಳ್ಳುತ್ತದೆ.

Scroll to load tweet…

ಅಜಯ್‌ದೇವಗನ್‌ @MahindraTrukBus ಫಿಲ್ಮ್ ಶೂಟ್‌ ವೇಳೆ ತಮ್ಮ ತಾಳ್ಮೆ ಕಳೆದುಕೊಂಡರು ಎಂದು ನನಗೆ ತಿಳಿಸಲಾಯಿತು. ಅವರು ನಮ್ಮ ಟ್ರಕ್‌ನಲ್ಲಿ ನನ್ನನ್ನು ಹಿಂಬಾಲಿಸುವ ಮೊದಲು ನಾನು ಪಟ್ಟಣವನ್ನು ತೊರೆಯುವುದು ಉತ್ತಮ ಎಂದು ಆನಂದ್ ಮಹೀಂದ್ರ ಅವರು ಈ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. 

84 ಕೋಟಿಯ ಖಾಸಗಿ ಜೆಟ್: ಅಜಯ್‌ದೇವಗನ್‌ ಲಕ್ಷುರಿಯಸ್‌ ಲೈಫ್‌ಸ್ಟೈಲ್‌!

ಆನಂದ್ ಮಹೀಂದ್ರಾ ಅವರ ಈ ಶೀರ್ಷಿಕೆಯು ಅನೇಕ ಟ್ವಿಟರ್ ಬಳಕೆದಾರರನ್ನು ಬಹಳ ರಂಜಿಸಿದೆ. ಆನಂದ್ ಮಹೀಂದ್ರಾ ಅವರು ಸರಿಸಾಟಿಯಿಲ್ಲದ ಮಾರ್ಕೆಟಿಂಗ್ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಟ್ವಿಟ್ಟರ್‌ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಜಾಹೀರಾತು ನೀಡಲು ಉತ್ತಮ ಮಾರ್ಗ ಇದು ಎಂದು ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್: ವೆಲ್‌ಕಮ್‌ ಟು ಫ್ಯಾಮಿಲಿ ಎಂದ ಆನಂದ್‌ ಮಹೀಂದ್ರಾ!

ಆದರೆ ಅಜಯ್ ದೇವಗನ್ ಕೇವಲ ಒಂದಲ್ಲ ಎರಡು ಟ್ರಕ್‌ಗಳಲ್ಲಿ ಬರುತ್ತಾರೆ. ನಿಮಗೆ ಬಹುಶಃ ಅವರ ಸಿನಿಮಾ ಸಾಹಸಗಳ ಬಗ್ಗೆ ತಿಳಿದಿಲ್ಲವೆನಿಸುತ್ತದೆ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಜಯ್ ದೇವಗನ್‌ ಅವರ ಫೂಲ್‌ ಔರ್‌ ಕಾಂತೆ (phool aur kaante)ಸಿನಿಮಾದಲ್ಲಿ ಅವರು ಎರಡು ಟ್ರಕ್‌ಗಳಲ್ಲಿ ಬರುವ ದೃಶ್ಯವಿದೆ.