Asianet Suvarna News Asianet Suvarna News

ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್: ವೆಲ್‌ಕಮ್‌ ಟು ಫ್ಯಾಮಿಲಿ ಎಂದ ಆನಂದ್‌ ಮಹೀಂದ್ರಾ!

*ಶೋರೂಂ ಸಿಬ್ಬಂದಿಯಿಂದ ರೈತನಿಗೆ ಅಪಮಾನ ಮಾಡಿದ ಪ್ರಕರಣ
*9.40 ಲಕ್ಷ ರೂಪಾಯಿಗೆ ವಾಹನ ಖರೀದಿಸಿದ ಕೆಂಪೇಗೌಡ.
*ಮಹೀಂದ್ರಾ & ಮಹೀಂದ್ರಾ ಕುಟುಂಬಕ್ಕೆ ಸ್ವಾಗತ ಎಂದ ಆನಂದ್‌ ಮಹೀಂದ್ರಾ

Anand Mahindra welcomes Karnataka tumkur farmer to family who was humiliated at Mahindra showroom mnj
Author
Bengaluru, First Published Jan 30, 2022, 1:51 PM IST

ತುಮಕೂರು (ಜ. 30): ಕಾರು ಖರೀದಿಗೆ ಬಂದಿದ್ದ ರೈತನೋರ್ವನನ್ನು(Farmer) ತಮ್ಮ ಒಡೆತನದ ಕಾರು ಶೋ ರೂಂ ಸಿಬ್ಬಂದಿ ಹಿಯಾಳಿಸಿದ ಕರ್ನಾಟಕದ(Karnataka) ಘಟನೆ ಬಗ್ಗೆ ಉದ್ಯಮಿ ಆನಂದ ಮಹಿಂದ್ರಾ (Anand Mahindra) ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲಿ  ಪ್ರತಿಕ್ರಿಯಿಸಿದ್ದ ಆನಂದ ಮಹಿಂದ್ರಾ  "ನಮ್ಮ ಕಂಪನಿ ಸಿದ್ಧಾಂತದಲ್ಲಿ ಯಾವುದೇ ನ್ಯೂನತೆ ಮತ್ತು ತಪ್ಪಾಗಿದ್ದಲ್ಲಿ ತ್ವರಿತವಾಗಿ ಆ ವಿಚಾರದ ಬಗ್ಗೆ ಗಮನ ಹರಿಸಲಾಗುತ್ತದೆ" ಎಂದು ಹೇಳಿದ್ದರು.

ಆದರೆ ಈಗ ಕಾರು ಖರೀದಿಗೆ ಹೋಗಿದ್ದ ವೇಳೆ ಅವಮಾನಕ್ಕೆ ಒಳಗಾಗಿದ್ದ  ರೈತ ಕೆಂಪೇಗೌಡ  ಮನೆಗೆ ಈಗ ಹೊಸ ಗೂಡ್ಸ್ ಜೀಪ್ ಬಂದಿದ್ದು, ಮಹೀಂದ್ರಾ ಕಂಪನಿಯ ಮಾಲೀಕರಾದ ಆನಂದ್ ಮಹೀಂದ್ರಾ ಅವರು ಕೇಂಪೇಗೌಡ ಅವರಿಗೆ ಶುಭ ಕೋರಿದ್ದಾರೆ. ಕೆಂಪೇಗೌಡ 9.40 ಲಕ್ಷ ರೂಪಾಯಿ ನೀಡಿ ಹೊಚ್ಚ ಹೊಸ ಮಹೀಂದ್ರ ಬೊಲೆರೋ ಕಾರು ಖರೀದಿಸಿದ್ದಾರೆ

"

ಇದನ್ನೂ ಓದಿ: ಕಣ್ಣಂಚನ್ನು ತೇವಗೊಳಿಸುವ ಫೋಟೋ... ಸ್ಪೂರ್ತಿದಾಯಕ ಸಂದೇಶ ನೀಡಿದ ಆನಂದ್‌ ಮಹೀಂದ್ರಾ

ಎಸ್‌ಯುವಿ ಶೋರೂಂನಲ್ಲಿ ಅವಮಾನಕ್ಕೊಳಗಾದ ರೈತನನ್ನು ಮಹೀಂದ್ರಾ & ಮಹೀಂದ್ರಾ ಕುಟುಂಬಕ್ಕೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಶುಕ್ರವಾರ, ಮಹೀಂದ್ರಾ ಆಟೋಮೋಟಿವ್ ತನ್ನ ಟ್ವಿಟರ್‌ನಲ್ಲಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ರೈತ ಕೆಂಪೇಗೌಡರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತಾ, "ಜ. 21 ರಂದು ನಮ್ಮ ಡೀಲರ್‌ಶಿಪ್‌ಗೆ ಭೇಟಿ ನೀಡಿದಾಗ ಕೆಂಪೇಗೌಡ ಮತ್ತು ಅವರ ಸ್ನೇಹಿತರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಭರವಸೆ ನೀಡಿದಂತೆ, ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಈಗ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತಿಳಿಸಿದೆ. ಇದಕ್ಕೆ ಪ್ರತಿಕ್ರಯಿಸಿದ ಆನಂದ್ ಮಹೀಂದ್ರಾ  "and let me add my welcome to Mr.Kempegowda" (ಮತ್ತು  ಕೆಂಪೇಗೌಡರಿಗೆ ನನ್ನ ಸ್ವಾಗತವನ್ನು ಸೇರಿಸುತ್ತೇನೆ) ಎಂದು ಹೇಳಿದ್ದಾರೆ.

 

 

ಬೊಲೆರೋ ವಾಹನ ಖರೀದಿಸಿದ ಕೆಂಪೇಗೌಡ!: ಅಪಮಾನದ ನಡುವೆ ಮಹೀಂದ್ರ ಬೊಲೆರೋ(MahindrA bolero) ಕಾರು ಬುಕ್ ಮಾಡಿದ್ದ ತುಮಕೂರಿನ ರೈತ ಕೆಂಪೇಗೌಡ(Farmer Kemegowda)  ಕಾರು ಖರೀದಿಸಿದ್ದಾರೆ. . ಕೆಂಪೇಗೌಡ 9.40 ಲಕ್ಷ ರೂಪಾಯಿ ನೀಡಿ ಹೊಚ್ಚ ಹೊಸ ಮಹೀಂದ್ರ ಬೊಲೆರೋ ಕಾರು ಖರೀದಿಸಿದ್ದಾರೆ. ಜನವರಿ 21ರಂದು ಅವಮಾನ ಘಟನೆ ನಡೆದ ಬೆನ್ನಲ್ಲೇ  2ಲಕ್ಷ ರೂಪಾಯಿ ಪಾವತಿಸಿ ಮಹೀಂದ್ರ ಬೊಲೆರೋ ಕಾರು ಬುಕ್(Car Bookings) ಮಾಡಿದ್ದ. ಇದೀಗ ಉಳಿದ ಹಣವನ್ನು ಬ್ಯಾಂಕ್ ಲೋನ್ (Bank Loan) ಮಾಡಿರುವ ಕೆಂಪೇಗೌಡ, ಕಂತಿನ ಮೂಲಕ ಹಣ ಪಾವತಿಸುವ ಒಪ್ಪಂದ ಮಾಡಿಕೊಂಡಿದ್ದಾನೆ. ತುಮಕೂರು ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ನಿವಾಸಿ ಕೆಂಪೇಗೌಡ ಇದೀಗ ದೇಶದಲ್ಲಿ ಹೀರೋ ಆಗಿದ್ದಾರೆ.

ಇದನ್ನೂ ಓದಿ: Tumakuru: ರೈತಗೆ ಅಪಮಾನ ಕೇಸ್‌: ಕಂಪನಿ ಸಿದ್ಧಾಂತದಲ್ಲಿ ತಪ್ಪಾಗಿದ್ದರೆ ಪರಿಶೀಲನೆ: ಆನಂದ್‌ ಮಹಿಂದ್ರಾ

ಜನವರಿ 21 ರಂದು ರೈತ ಕೆಂಪೇಂಗೌಡ ತುಮಕೂರಿನ(Tumkur) ಮಹೀಂದ್ರ ಶೋ ರೂಂಗೆ ತೆರಳಿ ವಾಹನ ಪರಿಶೀಲಿಸಲು ಮುಂದಾಗಿದ್ದಾನೆ. ಆದರೆ ಕೆಂಪೇಗೌಡನ ವೇಷಭೂಷಣ ನೋಡಿದ ಶೋ ರೂಂ ಸಿಬ್ಬಂದಿ ಅಪಮಾನ ಮಾಡಿದ್ದಾರೆ. 10 ರೂಪಾಯಿ ನೀಡುವ ಯೋಗ್ಯತೆ ಇಲ್ಲ, ಕಾರು ಖರೀದಿಸಲು ಬಂದಿದ್ದಾನೆ. ನಿಮಗೆಲ್ಲಾ ಸುಮ್ಮನೆ ಕಾರಿನ ಕುರಿತು ವಿವರಿಸಲು ಸಾಧ್ಯವಿಲ್ಲ ಎಂದು ಹೀಯಾಳಿಸಿದ್ದಾರೆ. 

ಸಿಬ್ಬಂದಿ ಅಪಮಾನದಿಂದ ರೊಚ್ಚಿಗೆದ್ದ ರೈತ ಕೇಂಪೆಗೌಡ, 2 ಗಂಟೆಯಲ್ಲಿ 10 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಈಗಲೇ ಕಾರು ನೀಡುವಂತೆ ಪಟ್ಟು ಹಿಡಿದಿದ್ದಾನೆ. ಇಷ್ಟೇ ಅಲ್ಲ ಈ ರೀತಿ ಅವಮಾನ ಎಂದಿಗೂ ಸಹಿಸುವುದಿಲ್ಲ ಎಂದು ಕೆಂಪೇಗೌಡ ಹಾಗೂ ಆತನ ಸ್ನೇಹಿತರು ಶೋ ರೂಂನಲ್ಲಿ ಜಾಮಾಯಿಸಿದ್ದಾರೆ. ಆಗಿರುವ ಪ್ರಮಾದ ಅರಿತ ಸಿಬ್ಬಂದಿ ಕ್ಷಮೆ ಯಾಚಿಸಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ರೈತ ಕೆಂಪೇಗೌಡನ ಮನವೋಲಿಸಿದ ಶೋ ರೂಂ ಸಿಬ್ಬಂದಿ ಬೊಲೆರೋ ವಾಹನ ಖರೀದಿಸಲು ಅನುವು ಮಾಡಿಕೊಟ್ಟಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಷ್ಟೇ ಅಲ್ಲ ದೇಶಾದ್ಯಂತ ಮಾಧ್ಯಮಗಳು ಈ ಕುರಿತು ಸುದ್ದಿ ಬಿತ್ತರ ಮಾಡಿತ್ತು.

Follow Us:
Download App:
  • android
  • ios