Asianet Suvarna News Asianet Suvarna News

Vivek Agnihotri ಕೋರ್ಟ್​ಗೆ ಕ್ಷಮೆ ಕೋರಿದರೂ ತಪ್ಪಿಲ್ಲ ಸಂಕಷ್ಟ!

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ನ್ಯಾಯಮೂರ್ತಿ ವಿರುದ್ಧ ಹೇಳಿಕೆ ನೀಡಿರುವ ಆರೋಪ ಹೊತ್ತ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿಯವರಿಗೆ ಸಂಕಷ್ಟ ಎದುರಾಗಿದೆ? ಏನದು?
 

Vivek Agnihotri contempt case: Delhi High Court directs film director to appear in person
Author
First Published Mar 16, 2023, 9:32 PM IST

ಭೀಮಾ ಕೋರೆಗಾಂವ್ (Bheema Koregav) ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ನ್ಯಾಯಮೂರ್ತಿ ಅವರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ ಕ್ಷಮೆ ಯಾಚಿಸಿದ್ದರೂ ಅವರಿಗೆ ಸಂಕಷ್ಟ ತಪ್ಪಿಲ್ಲ. ಅವರು ಖುದ್ದು ಕೋರ್ಟ್​ನಲ್ಲಿ ಹಾಜರು ಇರುವಂತೆ ದೆಹಲಿ ಹೈಕೋರ್ಟ್​ ನಿರ್ದೇಶಿಸಿದೆ.  ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಜಾಮೀನು ನೀಡಿದ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ಟೀಕಿಸಿದ್ದ ಆರೋಪ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಮೇಲಿದೆ.  ಇದಕ್ಕೆ ಸಂಬಂಧಿಸಿದಂತೆ ಕಳೆದ ಬಾರಿಯೇ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಅಗ್ನಿಹೋತ್ರಿ ಪರ ವಕೀಲರು ಬೇಷರತ್ ಕ್ಷಮೆಯಾಚಿಸಿ ಅಫಿಡವಿಟ್ ಸಲ್ಲಿಸಿದ್ದರು. ಇದರ ಹೊರತಾಗಿಯೂ ಅವರಿಗೆ ಸಂಕಷ್ಟ ತಪ್ಪಿಲ್ಲ. 

ಕೋರ್ಟ್​ ಆದೇಶದ ಮೇರೆಗೆ ವಿವೇಕ್​ ಅಗ್ನಿಹೋತ್ರಿ ಅವರು ಬರುವ ಏಪ್ರಿಲ್​ 10ರಂದು ದೆಹಲಿ ಹೈಕೋರ್ಟ್​ಗೆ ಹಾಜರಾಗಬೇಕಿದೆ. ಇವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೋರ್ಟ್​ ಖುದ್ದು ದಾಖಲಿಸಿಕೊಂಡಿದ್ದು, ಅವರು ಇಂದು ವಿಚಾರಣೆ ವೇಳೆ ಹಾಜರು ಇರಬೇಕಿತ್ತು. ಅವರ ಖುದ್ದು ಹಾಜರಿಗೆ ಈ ಹಿಂದಿನ ವಿಚಾರಣೆ ವೇಳೆ ಕೋರ್ಟ್​ ಆದೇಶಿಸಿತ್ತು. ಆದರೆ  ವಿವೇಕ್‌ ಅವರು ಹಾಜರಾಗಲಿರಲಿಲ್ಲ. ತಮ್ಮ ಕಕ್ಷಿದಾರರ ಆರೋಗ್ಯ ಸರಿ ಇಲ್ಲ, ಆದ್ದರಿಂದ ಹಾಜರು ಆಗಲು ಸಾಧ್ಯವಾಗಲಿಲ್ಲ ಎಂದು ಅವರ ಪರ ವಕೀಲರು ಕೋರ್ಟ್​ಗೆ ತಿಳಿಸಿ,  ವಿಚಾರಣೆ ಮುಂದೂಡುವಂತೆ ಹೇಳಿದ್ದರು. ಇದೀಗ ಏಪ್ರಿಲ್​ 10ರ ಕಾಲವಾವಕಾಶ ನೀಡಲಾಗಿದೆ. 

Kangana Ranaut: ಅನುಮತಿ ಇಲ್ದೇ ಬಂದ್ರೆ ಶೂಟ್​ ಮಾಡ್ತೀನಿ ಎಂದ ನಟಿ!

ಅಷ್ಟಕ್ಕೂ ಈ ಪ್ರಕರಣ ಏನೆಂದರೆ,  2018ರ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ, ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ (Gowthan Navlakha) ಅವರ ಟ್ರಾನ್ಸಿಟ್ ರಿಮಾಂಡ್ ಅನ್ನು ರದ್ದುಗೊಳಿಸಿದ ನಂತರ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರನ್ನು ಟೀಕಿಸಿ 2018ರಲ್ಲಿ ವಿವೇಕ್​ ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ. ಭಾರಿ ಕೋಲಾಹಲ ಸೃಷ್ಟಿಸಿದ್ದ ಭೀಮಾ ಕೋರೆಗಾಂವ್​ ಪ್ರಕರಣದಲ್ಲಿ ಗೌತಮ್​ ನವ್ಲಾಖಾ ಪ್ರಮುಖ ಆರೋಪಿಯಾಗಿದ್ದ. ಆದರೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದಿದ್ದ ಕೋರ್ಟ್​ ಆತನನ್ನು ಖುಲಾಸೆಗೊಳಿಸಿತ್ತು.   ಗೌತಮ್‌ ನವ್ಲಾಖ ಅವರಿಗೆ ಜಾಮೀನು ನೀಡಿದ್ದ ನ್ಯಾಯಮೂರ್ತಿ ಎಸ್‌. ಮುರಳೀಧರ್‌ ಅವರು ಪಕ್ಷಪಾತ ಎಸಗಿದ್ದಾರೆ ಎಂದು ಟ್ವಿಟರ್​ನಲ್ಲಿ  ವಿವೇಕ್‌ ಅವರು ಆರೋಪಿಸಿದ್ದರು.  ಈ ಸಂಬಂಧ ದೆಹಲಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಇದರ ವಿಚಾರಣೆ ಕೋರ್ಟ್​ ಮುಂದೆ ಬಂದಾಗ  ವಿವೇಕ್‌ ಅಗ್ನಿಹೋತ್ರಿ ಪರ ವಕೀಲರು, ತಮ್ಮ ಕಕ್ಷಿದಾರರು ಟ್ವೀಟ್‌ ಡಿಲೀಟ್‌ ಮಾಡಿದ್ದಾರೆ ಎಂದು ಕೋರ್ಟ್​ಗೆ ಪ್ರಮಾಣ ಪತ್ರ  ಸಲ್ಲಿಸಿದ್ದರು. ಆದರೆ ಅದನ್ನು ಡಿಲೀಟ್‌ ಮಾಡಿದ್ದರು ವಿವೇಕ್‌ ಅಗ್ನಿಹೋತ್ರಿ ಅಲ್ಲ, ಟ್ವಿಟ್ಟರ್‌ ಸಂಸ್ಥೆ ಎಂದು ನ್ಯಾಯಾಲಯದ ಪರ ವಕೀಲರು ವಾದ ಮಂಡಿಸಿದ್ದರು. 

ಇದಾಗಲೇ ಹಲವಾರು ಚಿತ್ರಗಳನ್ನು ಮಾಡಿರುವ ವಿವೇಕ್​ ಅಗ್ನಿಹೋತ್ರಿ ಅವರು ಬಹಳ ಸುದ್ದಿಯಾದದ್ದು ಅವರ ದಿ ಕಾಶ್ಮೀರ್​ ಫೈಲ್ಸ್​ ಚಿತ್ರದ ಮೂಲಕ. 1990ರ ದಶಕದಲ್ಲಿ ಕಾಶ್ಮೀರಿ (The Kashmir Files) ಪಂಡಿತರ ನರಮೇಧ ಹೇಗೆ ನಡೆದಿತ್ತು ಎಂದು ಎಳೆಎಳೆಯಾಗಿ ಕ್ರೌರ್ಯದ ಮುಖ ಬಿಚ್ಚಿಟ್ಟ ಈ ಚಿತ್ರ. ಇದಾದ ಬಳಿಕ ಹಲವರು ವಿವೇಕ್​ ಅಗ್ನಿಹೋತ್ರಿ ಅವರ ಫ್ಯಾನ್ಸ್​ ಆದರೆ, ಒಂದು ವರ್ಗಕ್ಕೆ ಮಾತ್ರ ಈ ಚಿತ್ರ ಕೆಂಗಣ್ಣು ಬೀರುವಂತೆ ಮಾಡಿದೆ. ಇದಕ್ಕಾಗಿ ಅವರಿಗೆ ಕೊಲೆ ಬೆದರಿಕೆಗಳೂ ಸಾಕಷ್ಟು ಬಂದಿವೆ. 

ಬೆಳ್ಳಿ ತೆರೆಮೇಲೆ ಬರಲಿದ್ದಾರೆ ಉರಿಗೌಡ ನಂಜೇಗೌಡ: ಒಕ್ಕಲಿಗ ವೀರರ ಬಗ್ಗೆ ಮುನಿರತ್ನ ಸಿನಿಮಾ ನಿರ್ಮಾಣ

Follow Us:
Download App:
  • android
  • ios