ಪ್ರೀತ್ಸೋದ್ ತಪ್ಪಾ ಚಿತ್ರದ 'ರಾಜ ರಾಜ' ಹಾಡಿನಲ್ಲಿ 'ಕನ್ಯಾ ಸೆರೆಗೆ ನನ್ನ ಶಾ...' ಎಂಬ ಸಾಲು ಅಶ್ಲೀಲ ಎಂಬ ವಿವಾದಕ್ಕೆ ಸಂಗೀತ ನಿರ್ದೇಶಕ ವಿ. ಮನೋಹರ್ ತೆರೆ ಎಳೆದಿದ್ದಾರೆ. ಹಂಸಲೇಖ ಅವರು ಕನ್ಯಾ ಸೆರೆಗೆ ವಿದಾಯ ಹೇಳುವ ಅರ್ಥದಲ್ಲಿ ಒಂದು ಪದವನ್ನು ಬಳಸಿದ್ದಾರೆ ಎಂದು ಮನೋಹರ್ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಸಿನಿಮಾದ ಅನೇಕ ಹಾಡುಗಳಲ್ಲಿ ಅಶ್ಲೀಲ ಪದ ಬಳಕೆ ಮಾಡಲಾಗಿದೆ. ದೊಡ್ಡ ನಾಯಕರು, ಗಾಯಕರ ಮೇಲೆ ಹಾಗೂ ಮಹಿಳೆಯ ಮೇಲೆ ಅಗೌರವ ತೋರಲಾಗಿದೆ ಎಂಬ ವಿವಾದಗಳು ಹುಟ್ಟಿಕೊಂಡು ಆಯಾ ಸಂದರ್ಭದಲ್ಲಿ ತಣ್ಣಗಾಗಿವೆ. ಆದರೆ, 1998ರಲ್ಲಿ ಬಿಡುಗಡೆಯಾದ ಪ್ರೀತ್ಸೋದ್ ತಪ್ಪಾ ಸಿನಿಮಾದ ರಾಜಾ ರಾಜ ರಾಜ ರಾಜ ಹೆಂಗಿರಬೇಕು ಗೊತ್ತಾ ನನ್ನ ರಾಜ ರಾಜ.. ಹಾಡಿನಲ್ಲಿ 'ಕನ್ಯಾ ಸೆರೆಗೆ ನನ್ನ ಶಾ*.. ತೆರಿಯೋ...' ಎಂಬ ಅಶ್ಲೀಲ ಪದ ಸೇರಿಸಲಾಗಿದೆ ಎಂದು ಭಾರೀ ವಿವಾದ ಹರಡಿತ್ತು. ಇದೀಗ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಈ ಹಾಡಿನ ಅಶ್ಲೀಲ ಪದವೆಂಬ ವಿವಾದಕ್ಕೆ ತೆರೆ ಎಳೆದಿದ್ದಾರೆ. ಒರಿಜಿನಲ್ ಸಾಹಿತ್ಯದಲ್ಲಿ ಏನು ಬರೆಯಲಾಗಿದೆ ಎಂಬುದನ್ನು ರಿವೀಲ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಯೂಟ್ಯೂಬ್‌ನ ಶ್ರೀಗಂಧ ಟಿವಿ ಚಾನೆಲ್‌ನಿಂದ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಂದರ್ಶನವನ್ನು ನಡೆಸಲಾಗಿದೆ. ಈ ಸಂದರ್ಶನದಲ್ಲಿ ಹಂಸಲೇಖ ಅವರ ಹಲವು ಹಾಡಿನ ಸಾಹಿತ್ಯಿಕ ವಿವಾದಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಮನೋಹರ್ ಅವರು ಸಂದರ್ಶನದಲ್ಲಿ ಮಾತನಾಡುತ್ತಾ... 'ಪ್ರೀತ್ಸೋದ್ ತಪ್ಪಾ ಸಿನಿಮಾ 1998ರಲ್ಲಿ ರಿಲೀಸ್ ಆಯ್ತು. ಇದರಲ್ಲಿ 'ರಾಜಾ ರಾಜಾ..., ಹೆಂಗಿರಬೇಕು ಗೊತ್ತಾ ನನ್ನ ರಾಜಾ..' ಈ ಹಾಡಿನಲ್ಲಿ 'ಕನ್ಯಾ ಸೆರೆಗೆ ನನ್ನ ಟಾಟಾ ಚೀರಿಯೋ' ಎಂಬ ಸಾಹಿತ್ಯದ ಸಾಲು ಬಂದಿದೆ. ಆದರೆ, ಇದನ್ನು ಕೆಲವರು ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ವಿವಾದವನ್ನು ಸೃಷ್ಟಿಸಿದರು. ಟಾಟಾ ಚೀರಿಯೋ ಅಂದರೆ ವಿದಾಯ ಎಂಬ ಪದವಾಗಿದೆ. ಆದರೆ, ಇದನ್ನು ಕೆಲವರು 'ಕನ್ಯಾ ಸೆರೆಗೆ ನನ್ನ ಶಾ..* ತೆರಿಯೋ..' ಎಂದು ಅಶ್ಲೀಲ ಸಾಹಿತ್ಯ ಬರೆದಿದ್ದಾರೆ ಎಂಬ ವಿವಾದವನ್ನು ಸೃಷ್ಟಿಸಿದರು.

ಈ ಬಗ್ಗೆ ನಾನು ಶಾಸ್ತ್ರಿಯವರ ಜೊತೆಗೆ ಜಗಳ ಮಾಡಿದೆ. ಹೇಗೆ ಇದೆಲ್ಲಾ ಎಂದು ಚರ್ಚೆ ಮಾಡಿದಾ ಹಾಡಿನ ಸಾಲನ್ನು ಸರಿಯಾಗಿ ಕೇಳಿಸಿಕೊಳ್ಳಿ ಎಂದು ಹೇಳಿದರು. ಆಗ ಟಾಟಾ ಚೀರೊಯೋ ಅಂದರೆ ಏನು? ಎಂಬ ಪ್ರಶ್ನೆ ಹುಟ್ಟಿದಾಗ ನಾನು ಹೇಳಿದೆ. ಟಾಟಾ ಚೀರಿಯೋ ಎಂದರೆ 1970ರವರೆಗೆ ಬ್ರಿಟೀಷರ ಆಡಳಿತದ ಪರಿಣಾಮವಾಗಿ ಬಳಕೆಯಲ್ಲಿದ್ದ ಪದ ಅದು. ಬ್ರಿಟೀಷರು ಟಾಟಾ ಚೀರಿಯೋ... ಬೈ..ಬೈ ಎಂದು ಹೇಳುತ್ತಿದ್ದರು. ಅದು ಕಾಲಕ್ರಮೇಣ ಟಾಟಾ ಬೈ ಬೈ ಆಗಿದೆ. ಇದಾದ ನಂತರ ಬೈ ಬೈ... ಈಗ ಬೈ.. ಎಂದು ಹೇಳುತ್ತಾರೆ. ಅದೇ ರೀತಿ ಹಾಡಿನಲ್ಲಿ ನಟಿ ಕನ್ಯಾ ಸೆರೆಗೆ ನನ್ನ ಟಾಟಾ... ಬೈ ಬೈ.. ಎಂದು ಗುಡ್‌ಬೈ ರೀತಿ ವಿದಾಯ ಹೇಳುವ ಪದವಾಗಿದೆ. ಇವರು ಅದನ್ನು ಅಶ್ಲೀಲ ಅರ್ಥಕ್ಕೆ ಪರಿವರ್ತಿಸಿ ಕೆಟ್ಟದಾಗಿ ಬಿಂಬಿಸಿ ಪ್ರಚಾರ ಮಾಡಲು ಪ್ರಯತ್ನಿಸಿದರು.

View post on Instagram

ಕನ್ನಡ ನಾಡಿನ ಅಭಿಮಾನಿಗಳೇ ರಾಜಾ ರಾಜಾ.. ಹಾಡಿನ ಬಗ್ಗೆ ಸರಿಯಾದ ಅರ್ಥ ತಿಳಿದುಕೊಂಡು ಅಪ ಪ್ರಚಾರ ಮಾಡಿದವರ ವಿರುದ್ಧವೇ ತಿರುಗಿಬಿದ್ದರು. ಆಗ ಈ ವಿಚಾರ ತಣ್ಣಗಾಯಿತು' ಎಂದು ಮನೋಹರ್ ಅವರು ಹೇಳಿಕೊಂಡಿದ್ದಾರೆ.

ಹಾಡಿನ ಸಾಹಿತ್ಯ

ಕ್ರೇಜಿ ಬಾಯ್ .. ಹೇಹೇಹೇಹೇಹೇ... ಹಾ... ಹಾ ... ಹೇಹೇಹೇಹೇ

ರಾಜ ರಾಜ ರಾಜ ರಾಜ
ಹೆಂಗಿರಬೇಕು ಗೊತ್ತ ನನ್ನ ರಾಜ
ರಾಜ ರಾಜ ರಾಜ ರಾಜ ಕನಸಿನ ರಾಜ (ಹೇ ಹೇ ಹೇ ಹೇ)
ನಾ ಮೆಚ್ಚೋ ಹುಡುಗ ರಾಜರ ರಾಜ (ಹೇ ಹೇ ಹೇ ಹೇ)
ಜೋಕುಮಾರ ಗ್ರೀಕುವೀರ
ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು
ಇವನ ಮುಂದೆ ಕುರಿಮಂದೆ

||ರಾಜ ರಾಜ ರಾಜ ರಾಜ
ಹೆಂಗಿರಬೇಕು ಗೊತ್ತಾ
ನನ್ನ ರಾಜ ರಾಜ ರಾಜ ||

ಹೇ ಹೇ ಹೇ ಹೇ... ಹೇ ಹೇ ಹೇ ಹೇ
ಕಣ್ಣಲ್ಲೆ ಕನಸಲ್ಲೆ ಕೂತವನೇ ನನ್ನ ರಾಜ ರಾಜ
ಸೈಲಾಟ್ ವಾಕಿಂಗು ಮ್ಯಾಗ್ನೆಟಿಕ್ ಸ್ಟೈಲಿಂಗು
ಅವನ ಹಿಂದೆ ನೂರು ಹೆಣ್ಣು
ನನ್ನ ಮೇಲೆ ಅವನ ಕಣ್ಣು…
ಹೇ ಹೇ ಹೇ ಹೇ

ನಗ್ತಾನೆ ನಗಿಸ್ತಾನ ಹಾಡ್ತಾನೆ ನನ್ನ ರಾಜ ರಾಜ
ಆ ನಗು ಕಾಯುತ್ತ ಇರ್ತೀನಿ ನಾನು ಗೊತ್ತ
ಆ ಹಾಡು ಕಾಯುತ್ತ ಇರ್ತೀನಿ ಹಾಡುತ್ತ
ಬರ್ತಿದ್ದಾನಂತೆ ನನ್ನ ರೋಮಿಯೋ
ಸುತ್ತಿಕೊಟ್ಟಿದ್ದ ನನ್ನ ಹೃದಯ ಬೇಲಿಯೋ
ಬಂದ ಕೂಡಲೆ ಪ್ರೀತಿಯಿಂದಲೆ
ಕನ್ಯಾಸರೆಗೆ ನನ್ನ ಟಾಟಾ ಚೀರಿಯೋ..

ರವಿಚಂದ್ರನ್, ಶಿಲ್ಪಾ ಶೆಟ್ಟಿ, ಲಕ್ಷ್ಮಿ ಅಭಿನಯದ ಕನ್ನಡ ಚಲನಚಿತ್ರ 'ಪ್ರೀತ್ಸೋದ್ ತಪ್ಪಾ' ಚಿತ್ರದ ರಾಜ ರಾಜ ಕನಸಿನ ರಾಜ ಹಾಡಿನ ಸಾಹಿತ್ಯವನ್ನು ಹಂಸಲೇಖ ಬರೆದಿದ್ದಾರೆ. ಈ ಸಾಹಿತ್ಯವನ್ನು ಅನುರಾಧ ಶ್ರೀರಾಮ್ ಹಾಡಿದ್ದಾರೆ. ಹಂಸಲೇಖ ಅವರ ಸಂಗೀತ ಸಂಯೋಜನೆಯನ್ನು ವಿ.ರವಿಚಂದ್ರನ್ ನಿರ್ದೇಶಿಸಿದ್ದಾರೆ ಮತ್ತು ಚಲನಚಿತ್ರವು 1998 ರಲ್ಲಿ ಬಿಡುಗಡೆಯಾಯಿತು.