ಹಿಂದೆ ಸ್ವಿಗ್ಗಿ ಡೆಲಿವರಿ ಬಾಯ್ ಆಗಿದ್ದವನು ಈಗ ಸೂಪರ್ ಮಾಡೆಲ್..!

ಒಂದ್ಕಾಲದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿದ್ದ ಸಾಹಿಲ್ ಸಿಂಗ್ ಈಗ ಫೇಮಸ್ ಫ್ಯಾಷನ್ ಮಾಡಲ್ ಆಗಿದ್ದಾರೆ. ಸಾಹಿಲ್ ಸಿಂಗ್ ಅವರ ಈ ಸಾಧನೆಯ ಪ್ರೇರಣಾದಾಯಕ ಪಯಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

swiggy delivery boy to fashion model roo

ತಾಳಿದವನು ಬಾಳಿಯಾನು ಎನ್ನುವ ಗಾಧೆ ಇದೆ. ಒಬ್ಬ ವ್ಯಕ್ತಿಯ ಅದೃಷ್ಟ (good luck) ಸಮಯ ಬದಲಾದಂತೆ ಬದಲಾಗುತ್ತೆ. ಹಳ್ಳಿಯ ಮೂಲೆಯಲ್ಲೆಲ್ಲೋ ಇದ್ದವರು ಡೆಲ್ಲಿ ಖುರ್ಚಿಯಲ್ಲಿ ಕುಳಿತ್ಕೊಳ್ಬಹುದು. ಇದಿಷ್ಟೆ ಲೈಫ್ ಅಂತ ನಿಂತಲ್ಲಿ ನೀರಾಗ್ದೆ, ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಹಾಗೂ ಧೈರ್ಯ (courage) ದಲ್ಲಿ ಮುನ್ನುಗ್ಗಿದ್ರೆ ಏನುಬೇಕಾದ್ರೂ ಸಾಧನೆ ಮಾಡ್ಬಹುದು. ಅದಕ್ಕೆ ಈ ವ್ಯಕ್ತಿ ಉತ್ತಮ ಎಗ್ಸಾಂಪಲ್.

ಸೋಶಿಯಲ್ ಮೀಡಿಯಾ (social media ) ದಲ್ಲಿ ಈಗ ಸ್ವಿಗ್ಗಿ ಡೆಲೆವರಿ ಬಾಯ್ (Swiggy Delivery Boy) ಸುದ್ದಿಯಲ್ಲಿದ್ದಾರೆ. ಅವರ ಟ್ರಾನ್ಸ್ಫರ್ಮೇಶನ್ (Transformation) ಚರ್ಚೆ ಜೋರಾಗಿದೆ. ಸ್ವಿಗ್ಗಿ ಡಿಲೆವರಿ ಬಾಯ್ ಈಗ ಫೇಮಸ್ ಫ್ಯಾಷನ್ ಮಾಡಲ್ (Fashion Model ) ಆಗಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು. ಸ್ವಿಗ್ಗಿಯಿಂದ ಮಾಡೆಲ್ ಆದ ವ್ಯಕ್ತಿ ಹೆಸರು ಸಾಹಿಲ್ ಸಿಂಗ್. ಊರು ಮುಂಬೈ. ಒಂದ್ಕಾಲದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿದ್ದ ಸಾಹಿಲ್ ಸಿಂಗ್ ತನ್ನ ಕಥೆಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋವನ್ನು ಈವರೆಗೆ 40 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಜೀವನದಲ್ಲಿ ಏನಾದ್ರೂ ಸಾಧನೆ ಮಾಡ್ಬೇಕು ಅಂತ ಪಣತೊಟ್ಟು ಕೆಲಸ ಮಾಡ್ತಿರುವ ಅನೇಕರಿಗೆ ಸಾಹಿಲ್, ಮಾದರಿ, ಸ್ಫೂರ್ತಿಯಾಗಿದ್ದಾರೆ.

ಸುದೀಪ್ ಹುಟ್ಟುಹಬ್ಬಕ್ಕೆ ಮಗಳು ಸಾನ್ವಿಯಿಂದ ವಿಶೇಷ ಗಿಫ್ಟ್

ಸಾಹಿಲ್ ಸಿಂಗ್, fashiontipssahil ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಹೊಂದಿದ್ದು, ಅದ್ರಲ್ಲಿ ತಮ್ಮ ಜರ್ನಿಯ ವಿಡಿಯೋ ಹಂಚಿಕೊಂಡಿದ್ದಾರೆ. ಅವರು ಹಾಕಿರುವ ವಿಡಿಯೋ ಪ್ರಕಾರ, ಅವರು 2 ವರ್ಷ ಸ್ವಿಗ್ಗಿಯಲ್ಲಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡಿದ್ರು. ಅಷ್ಟೇ ಅಲ್ಲ, ಮಹಾರಾಷ್ಟ್ರದ ಬರ್ಗರ್ ಕಿಂಗ್ ಔಟ್ಲೆಟ್ ನಲ್ಲಿ ಒಂದು ವರ್ಷ ಚೆಫ್ ಆಗಿ ಕೆಲಸ ಮಾಡಿದ ಅನುಭವ ಸಾಹಿಲ್ ಸಿಂಗ್ ಅವರಿಗಿದೆ. ಮ್ಯಾಂಗೋ ಮಾರ್ಟ್ ನಲ್ಲಿ 8 ತಿಂಗಳು ಕೆಲಸ ಮಾಡಿರುವ ಸಾಹಿಲ್ ಸಿಂಗ್, ಮೂರ್ ವರ್ಷ ಮಾಡಿದ ಕೆಲಸವೇ ಬೇರೆ ನಂತ್ರ ಆಯ್ಕೆ ಮಾಡ್ಕೊಂಡಿದ್ದೇ ಬೇರೆ. ಸಾಹಿಲ್ ಈಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು, ಅದ್ರಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಾರೆ. 

ಅನೇಕ ಫ್ಯಾಷನ್ ಶೋ, ಪ್ರಾಜೆಕ್ಟ್ ಜಾಹೀರಾತಿನಲ್ಲಿ ಸಾಹಿಲ್ ಕಾಣಿಸಿಕೊಳ್ತಿದ್ದಾರೆ. ಅವರ ಪೋಸ್ಟ್ ನೋಡಿದ ಜನರು, ಕಮೆಂಟ್ ಶುರು ಮಾಡಿದ್ದಾರೆ. ಸಾಹಿಲ್ ಸಾಧನೆ ನಮಗೆ ಸ್ಪೂರ್ತಿ ನೀಡಿದೆ, ಹೊಸದನ್ನು ಮಾಡಲು ಉತ್ಸಾಹ ನೀಡಿದೆ ಎಂದು ಬಳಕೆದಾರರು ಬರೆದಿದ್ದಾರೆ. ಈಗಿನ ಸಮಯದಲ್ಲಿ ಅನೇಕರು ನಿಮ್ಮ ಸಾಧನೆಗೆ ಕ್ರೆಡಿಟ್ ತೆಗೆದುಕೊಳ್ಳಲು ಬರ್ತಾರೆ. ನಾವೇ ಸಾಧನೆಗೆ ಸಹಾಯ ಮಾಡಿದ್ದು, ನಮ್ಮ ಅಕಾಡೆಮಿಯಿಂದ ಈತ ಸಾಧನೆ ಮಾಡಿದ್ದಾನೆ ಎಂದು ಕೆಲ ಸಂಸ್ಥೆಗಳು ಜಾಹೀರಾತು ನೀಡುತ್ವೆ. ನನ್ನ ಬಗ್ಗೆಯೂ ಇಂಥ ಪ್ರಚಾರ ನಡೆದಿದೆ. ಆದ್ರೆ ಇದ್ರಲ್ಲಿ ಯಾವ ಅಕಾಡೆಮಿ ಪಾತ್ರವಿಲ್ಲ. ನಾನು ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ ಎಂದು ಸಾಹಿಲ್, ಬಳಕೆದಾರರು ಮಾಡಿದ ಕಮೆಂಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಶೀಘ್ರದಲ್ಲೇ 'ಸುಬ್ರಹ್ಮಣ್ಯ' ಪ್ರಪಂಚದ ಪರಿಚಯ; ಇದು ನಟ ರವಿಶಂಕರ್ ಪುತ್ರ ಅದ್ವೆ ಸಿನಿಮಾ!

ಅಷ್ಟೇ ಅಲ್ಲ, ಅನೇಕ ಬಳಕೆದಾರರಿಗೆ ಧೈರ್ಯ ತುಂಬುವ ಕಮೆಂಟ್ ಮಾಡಿದ್ದಾರೆ ಸಾಹಿಲ್. ನಿಮ್ಮನ್ನು ನೀವು ಯಾವಾಗ್ಲೂ ಡಿಮೋಟಿವ್ ಮಾಡ್ಕೊಳ್ಬೇಡಿ. ಎಲ್ಲರಂತೆ ನೀವು ಬೆಸ್ಟ್ ಇರ್ತೀರಾ, ಪ್ರಯತ್ನ ಅಗತ್ಯ ಎನ್ನುವುದು ಸಾಹಿಲ್ ಮಾತು. ಆರಂಭದಲ್ಲಿ 150 ಇದ್ದ ಸಾಹಿಲ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಈಗ 64 ಸಾವಿರಕ್ಕಿಂತ ಹೆಚ್ಚಿದೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಾಹಿಲ್, ತಾವು ಮಾಡೆಲ್ ಆಗಿ ಬದಲಾಗಿದ್ದು ಹೇಗೆ, ಎಲ್ಲಿ ಉಚಿತವಾಗಿ ಟ್ರೈನಿಂಗ್ ಸಿಗುತ್ತೆ ಎನ್ನುವುದು ಸೇರಿದಂತೆ ಅನೇಕ  ಮಾಹಿತಿಯನ್ನು ಫಾಲೋವರ್ಸ್ ಗೆ ನೀಡುವ ಮೂಲಕ ಅವರ ಕನಸನ್ನು ನನಸು ಮಾಡುವ ಪ್ರಯತ್ನ ಮಾಡ್ತಿದ್ದಾರೆ. 

Latest Videos
Follow Us:
Download App:
  • android
  • ios