Asianet Suvarna News Asianet Suvarna News

ಸುದೀಪ್ ಹುಟ್ಟುಹಬ್ಬಕ್ಕೆ ಮಗಳು ಸಾನ್ವಿಯಿಂದ ವಿಶೇಷ ಗಿಫ್ಟ್

ಮಕ್ಕಳಿಗೆ ಅಪ್ಪನೆಂದ್ರೆ ಬಹುಪ್ರೀತಿ. ಅದ್ರಲ್ಲೂ ಹೆಣ್ಮಕ್ಕಳಿಗೆ ಅಪ್ಪನ ಮೇಲೆ ಡಬಲ್ ಪ್ರೀತಿ ಇರುತ್ತೆ. ಕಿಚ್ಚ ಸುದೀಪ್ ಮಗಳು ಸಾನ್ವಿಗೆ ಅಪ್ಪನೆಂದ್ರೆ ಅಭಿಮಾನ. ಅವರ ಹುಟ್ಟುಹಬ್ಬದಂದು ಮಗಳು ಚೆಂದದ ಆರ್ಟ್ ವರ್ಕ್ ಗಿಫ್ಟ್ ಮಾಡಿದ್ದಾರೆ.

sanvi sudeep wished father sudeep on his birthday through art work roo
Author
First Published Sep 2, 2024, 11:08 AM IST | Last Updated Sep 2, 2024, 11:33 AM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Abhinaya Chakraborty Kiccha Sudeep) ಮಗಳು ಸಾನ್ವಿ ಸುದೀಪ್ (Sanvi Sudeep) ಕೂಡ ಕಿಚ್ಚನಂತೆ ಬಹಮುಖ ಪ್ರತಿಭೆ. ಹಾಡು, ಡಾನ್ಸ್, ಚಿತ್ರಕಲೆಯಲ್ಲಿ ತುಂಬಾ ಮುಂದಿದ್ದಾರೆ. ಅಪ್ಪ ಸುದೀಪ್ ಹುಟ್ಟುಹಬ್ಬ (Sudeep birthday)ದ ದಿನ ಸಾನ್ವಿ ಸುದೀಪ್ ಹೊಸ ಆರ್ಟ್ ವರ್ಕ್ (art work) ಮಾಡಿದ್ದಾರೆ. ಅದ್ರಲ್ಲಿ ಸುದೀಪ್ ಕೋಪದಲ್ಲಿರೋದನ್ನು ನೀವು ನೋಡ್ಬಹುದು. ಹೊಸ ಆರ್ಟ್ ವರ್ಕ್ ಫೋಟೋವನ್ನು ಸೋಶಿಯಲ್ ಮೀಡಿಯಾ (Social Media)ದಲ್ಲಿ ಪೋಸ್ಟ್ ಮಾಡಿರುವ ಸಾನ್ವಿ ಸುದೀಪ್, ಹ್ಯಾಪಿ ಬರ್ತ್ ಡೇ (Happy Birthday) ಅಪ್ಪ ಅಂತ ಸುದೀಪ್ ಅವರಿಗೆ ವಿಶ್ ಮಾಡಿದ್ದಾರೆ.

ಸಾನ್ವಿ ಈ ಆರ್ಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಹುಟ್ಟುಹಬ್ಬದಂದು ಮಗಳ ಸೂಪರ್ ಗಿಫ್ಟ್ (Super Gift) ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಸಾನ್ವಿ ಸುದೀಪ್, ಅಪ್ಪನ ದಾರಿಯಲ್ಲಿ ಸಾಗ್ತಿದ್ದಾರೆ. ಜಿಮ್ಮಿ (Jimmy) ಚಿತ್ರದ ಹಾಡೊಂದಕ್ಕೆ ಧ್ವನಿ ನೀಡುವ ಮೂಲಕ ಸಾನ್ವಿ ಈಗಾಗಲೇ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಅವರ ಧ್ವನಿಗೆ ಈಗಾಗಲೇ ಫುಲ್ ಮಾರ್ಕ್ಸ್ ಬಿದ್ದಾಗಿದೆ. ಶಾಲೆ, ಕಾಲೇಜಿನಲ್ಲಿ ಹಾಡ್ತಿದ್ದ ಸಾನ್ವಿ ಸುದೀಪ್ ಗೆ, ಜಿಮ್ಮ ಚಿತ್ರದಲ್ಲಿ ಹಾಡಲು ಅವಕಾಶ ಸಿಕ್ಕಿದೆ. ಸಿನಿಮಾ ಟೈಟಲ್ ಟ್ರ್ಯಾಕ್ ಇಂಗ್ಲೀಷ್ ನಲ್ಲಿ ಹಾಡಿರುವ ಸಾನ್ವಿ, ಕಿಚ್ಚ ಫ್ಯಾನ್ಸ್ ಮೆಚ್ಚುಗೆ ಗಳಿಸಿದ್ದಾರೆ. ಜಿಮ್ಮಿ ಚಿತ್ರ ಸೆಪ್ಟೆಂಬರ್ 20ರಂದು ತೆರೆಗೆ ಬರಲಿದ್ದು, ಈ ಚಿತ್ರದಲ್ಲಿ ಸುದೀಪ್ ಕುಟುಂಬದ ಇಬ್ಬರು ಕಾಣಿಸಿಕೊಂಡಿದ್ದಾರೆ.

ನಿಮ್ಮ ಹೆಸರು ಉಳಿಸುವ ಕೆಲಸ ಮಾಡ್ತೇನೆ... ಸುದೀಪ್‌ ಸಿಲ್ಕಿ ಹೇರ್‌ ಮೇಲೆ ಪ್ರೀತಿ ತೋರಿಸಿ ಅಪ್ಪನಿಗೆ ಸಾನ್ವಿ ಬರ್ತ್‌ ಡೇ ವಿಶ್‌

ಸಾನ್ವಿ ಸುದೀಪ್ ನಟನೆಯಲ್ಲೂ ಹಿಂದಿಲ್ಲ. ಅವರು ಇನ್ಸ್ಟಾಗ್ರಾಮ್ ನಲ್ಲಿ ವರ್ಕ್ ಶಾಪ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದ್ರಲ್ಲಿ ಅವರ ಆಕ್ಟಿಂಗ್ ಅಧ್ಬುತವಾಗಿದ್ದು, ಸುದೀಪ್ ಗತ್ತು, ಲಕ್ ನಲ್ಲಿ ಸಾನ್ವಿ ಮಿಂಚಿದ್ದರು. ಸದ್ಯ ಹಾಡಿನ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟಿರುವ ಸಾನ್ವಿ ಕೆಲವೇ ದಿನಗಳಲ್ಲಿ ಬಣ್ಣ ಹಚ್ಚುವ ನಿರೀಕ್ಷೆ ಇದೆ. ಸುದೀಪ್ ಫ್ಯಾನ್ಸ್ ಇದಕ್ಕೆ ಕಾಯ್ತಿದ್ದಾರೆ. ಸಾನ್ವಿ ಸುದೀಪ್ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಹಾಕ್ತಾ ಮಿಂಚುತ್ತಿರುತ್ತಾರೆ.

ಈಗ ಅಪ್ಪ ಸುದೀಪ್ ಹುಟ್ಟುಹಬ್ಬದ ಸಮಯದಲ್ಲಿ ಸಾನ್ವಿ ಎರಡು ಫೋಸ್ಟ್ ಹಂಚಿಕೊಂಡಿದ್ದಾರೆ. ಒಂದರಲ್ಲಿ ಅಪ್ಪನಿಗೆ ಅವರು ವಿಶ್ ಮಾಡಿ, ವಿಡಿಯೋ ಹಾಕಿದ್ರೆ. ಇನ್ನೊಂದರಲ್ಲಿ ಆರ್ಟ್ ವರ್ಕ್ ಫೋಟೋ ಹಂಚಿಕೊಂಡಿದ್ದಾರೆ. ಸಾನ್ವಿ ಈ ಹಿಂದೆಯೂ ಒಂದು ಆರ್ಟ್ ವರ್ಕ್ ಫೋಟೋ ಪೋಸ್ಟ್ ಮಾಡಿದ್ದರು. ಅದನ್ನು ನೋಡಿದ್ದ ಅಭಿಮಾನಿಗಳು, ಕಿಚ್ಚ ಸುದೀಪ್ ಮಗಳು ಅಂದ್ರೆ ಸುಮ್ನೇನಾ? ಆರ್ಟ್ ವರ್ಕ್ ನಲ್ಲೂ ನೀವು ಮುಂದಿದ್ದೀರಿ ಎಂದು ಕಮೆಂಟ್ ಮಾಡಿದ್ದರು.

Happy Birthday Kichcha Sudeep: ಎಷ್ಟೇ ದೊಡ್ಡ ನಟನಾದರೂ ಸಿನಿಮಾ ಮಾಡುತ್ತಿರಲೇಬೇಕು!

ಸಾನ್ವಿ ಸುದೀಪ್ ಗೆ 20 ವರ್ಷ. ಹೈದ್ರಾಬಾದ್ ನಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಸಾನ್ವಿ, ಅಪ್ಪನ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಅಮ್ಮ ಪ್ರಿಯಾ ಮತ್ತು ಅಪ್ಪ ಸುದೀಪ್ ಜೊತೆಗಿರುವ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡ್ತಾ, ತಮ್ಮ ಪ್ರೀತಿಯನ್ನನು ವ್ಯಕ್ತಪಡಿಸ್ತಿರುತ್ತಾರೆ. ಕೆಲ ದಿನಗಳ ಹಿಂದೆ ಸಾನ್ವಿ ಕತ್ತಿನ ಮೇಲಿರುವ ಟ್ಯಾಟು ಸುದ್ದಿ ಮಾಡಿತ್ತು. ಅವರು ತಮ್ಮ ಕತ್ತಿನ ಮೇಲೆ ಪೀಕು ಅಂತ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದು ಅಮ್ಮ ಪ್ರಿಯಾ ನಿಕ್ ನೇಮ್. ಇದನ್ನು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದ ಅವರು, ಎಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂಬುದನ್ನು ಕೂಡ ಹೇಳಿದ್ದರು.

ಸಾನ್ವಿ ಸುದೀಪ್ ತಮ್ಮ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ತುಂಬಾ ದಪ್ಪಗಿದ್ದ ಅವರು ಈಗ ಸೌಂದರ್ಯದಲ್ಲಿ ಅಪ್ಪನನ್ನು ಸೈಡ್ ಹೊಡೆಯೋಕೆ ಸಜ್ಜಾಗ್ತಿದ್ದಾರೆ. ಸುದೀಪ್ ಹುಟ್ಟುಹಬ್ಬದ ದಿನ ಮಗಳ ಸಂಭ್ರಮವನ್ನು ವಿಡಿಯೋ, ಪೋಸ್ಟ್ ಮೂಲಕ ಕಾಣಬಹುದು. 

Latest Videos
Follow Us:
Download App:
  • android
  • ios