ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ರೆಡ್ಡಿ ಅವರು ಸ್ಥಳೀಯ ಧಾಬಾದಲ್ಲಿ ಊಟ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. 'ಪುಷ್ಪಾ' ನಟನ ಸರಳತೆಯನ್ನು ಇಂಟರ್ನೆಟ್ ಬಹುವಾಗಿ ಮೆಚ್ಚಿದೆ. 

ಬೆಂಗಳೂರು (ಮೇ.21): ಕುಂತಲ್ಲಿ, ನಿಂತಲ್ಲಿ ಐಷಾರಾಮಿತನವನ್ನೇ ಬೇಡುವ ಸಿನಿಮಾ ಸ್ಟಾರ್‌ಗಳಿಗೆ ಭಾರತದಲ್ಲಿ ಬರವಿಲ್ಲ. ಆದರೆ, ದಕ್ಷಿಣದ ಸಿನಿಮಾ ಸ್ಟಾರ್‌ಗಳು ಇದಕ್ಕೆ ಸ್ವಲ್ಪ ಭಿನ್ನ ಇತ್ತೀಚೆಗೆ ಕೆಜಿಎಫ್‌ ಸ್ಟಾರ್‌ ಯಶ್‌, ಭಟ್ಕಳದ ಸಣ್ಣ ಅಂಗಡಿಯಲ್ಲಿ ಹೆಂಡತಿ ಮಕ್ಕಳಿಗೆ ತಿಂಡಿ ಕೊಡಿಸಿದ್ದ ಚಿತ್ರಗಳು ವೈರಲ್‌ ಆಗಿತ್ತು. ಈಗ ಮತ್ತೊಂದು ಅಂಥದ್ದೇ ಚಿತ್ರ ವೈರಲ್‌ ಆಗಿದೆ. ಆದರೆ, ಇದು ಯಶ್‌ ಅವರ ಚಿತ್ರವಲ್ಲ, ಟಾಲಿವುಡ್‌ನ ಸ್ಟಾರ್‌ ಹೀರೋ ಮೆಗಾಸ್ಟಾರ್‌ ಕುಟುಂಬದ ಕುಡಿ ಅಲ್ಲು ಅರ್ಜುನ್‌ಗೆ ಸಂಬಂಧಿಸಿದ್ದು. ಇತ್ತೀಚೆಗೆ ಪತ್ನಿ ಸ್ನೇಹಾ ರೆಡ್ಡಿ ಜೊತೆ ಪ್ರಯಾಣದಲ್ಲಿದ್ದ ಅಲ್ಲು ಅರ್ಜುನ್‌ ಲೋಕಲ್‌ ಢಾಬಾದಲ್ಲಿ ಮಧ್ಯಾಹ್ನ ಊಟ ಮಾಡಿದ್ದಾರೆ ಈ ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕನಿಷ್ಠ ಎಸಿ ಕೂಡ ಇಲ್ಲದ ಢಾಬಾದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಗಂಡ-ಹೆಂಡತಿ ಇಬ್ಬರೂ ಊಟ ಸವಿದಿರುವ ಚಿತ್ರವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಈ ಚಿತ್ರ ಎಲ್ಲಿ ಹಾಗೂ ಯಾವಾಗ ತೆಗೆದಿದ್ದು ಎನ್ನುವ ಮಾಹಿತಿ ಇಲ್ಲವಾದರೂ ಪುಷ್ಪಾ ನಟನ ಅಭಿಮಾನಿಗಳು, ತಮ್ಮ ಹೀರೋನ ಸರಳತೆಯನ್ನು ಬಹುವಾಗಿ ಮೆಚ್ಚಿಕೊಂಡು ಇದನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ವೈರಲ್‌ ಫೋಟೋವನ್ನು ಅಲ್ಲು ಅರ್ಜುನ್‌ ಅವರ ಫ್ಯಾನ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಬಿಳಿ ಬಣ್ಣದ ಶರ್ಟ್‌ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ಅನ್ನು ಅಲ್ಲು ಅರ್ಜುನ್‌ ಧರಿಸಿದ್ದು, ಫೋನ್‌ನಲ್ಲಿ ಮಾತನಾಡುತ್ತಲೇ ಊಟವನ್ನು ಎಂಜಾಯ್‌ ಮಾಡುತ್ತಿದ್ದಾರೆ. ಇನ್ನು ಅವರ ಪತ್ನಿ ಸ್ನೇಹಾ ರೆಡ್ಡಿ ಸಿಂಪಲ್‌ ಆದ ಸಲ್ವಾರ್‌ ಕಮೀಜ್‌ಅನ್ನು ಧರಿಸಿದ್ದು, ಊಟದಲ್ಲಿ ಮಗ್ನರಾಗಿರುವುದು ಕಂಡಿದೆ.

ಕಳೆದ ಕೆಲ ವರ್ಷಗಳಿಂದ ಅಲ್ಲು ಅರ್ಜುನ್‌, ಸುಕುಮಾರ್ ನಿರ್ದೇಶನದ ಪುಷ್ಪಾ ಚಿತ್ರದ ಪಾರ್ಟ್‌-2ನಲ್ಲಿ ಬ್ಯುಸಿ ಇದ್ದಾರೆ. 2021ರಲ್ಲಿ ಸಿನಿಮಾದ ಮೊದಲ ಭಾಗ ರಿಲೀಸ್‌ ಆಗಿತ್ತು. ಅಂದಾಜು ಒಂದು ವರ್ಷಗಳ ಕಾಲ ಬ್ರೇಕ್‌ ಪಡೆದುಕೊಂಡ ಬಳಿಕ ಪುಷ್ಪಾ: ದ ರೂಲ್‌' ಸಿನಿಮಾವನ್ನು ಆರಂಭ ಮಾಡಿದ್ದರು. ಚತ್ರದ ಶೂಟಿಂಗ್‌ ಕೂಡ ಮುಕ್ತಾಯವಾಗಿದ್ದು, ಈ ವರ್ಷದ ಆಗಸ್ಟ್‌ 15 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಿನಿಮಾ ತಂಡ ಈಗಾಗಲೇ ತಿಳಿಸಿದೆ.

ಆಂಧ್ರ ಎಲೆಕ್ಷನ್​​ ಬಳಿಕ ಟಾಲಿವುಡ್​​ನಲ್ಲಿ ಸ್ಟಾರ್ಸ್​​​ಗಳ ವಿವಾದ: ಅಲ್ಲು ಅರ್ಜುನ್​ ವಿರುದ್ಧ ಹೆಚ್ಚಾಯ್ತು ಕೋಪ!

ಕಥೆ-ಚಿತ್ರಕಥೆಯೊಂದಿಗೆ ನಿರ್ದೇಶನ ಕೂಡ ಮಾಡಿರುವ ಸುಕುಮಾರ್‌ ಅವರ ಪುಷ್ಪಾ: ದ ರೂಲ್‌ ಸಿನಿಮಾದಲ್ಲಿ ಅಲ್ಲು ಅರ್ಜುನ್‌, ಫಹಾದ್‌ ಫಾಸಿಲ್‌ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿದ್ದಾರೆ. ಜಗದೀಶ್ ಪ್ರತಾಪ್ ಬಂಡಾರಿ, ಜಗಪತಿ ಬಾಬು, ಪ್ರಕಾಶ್ ರಾಜ್, ಅನಸೂಯಾ ಭಾರದ್ವಾಜ್ ಮತ್ತು ರಾವ್ ರಮೇಶ್ ಪೋಷಕ ಪಾತ್ರದಲ್ಲಿದ್ದಾರೆ. 'ಪುಷ್ಪಾ 2' ಹೊರತುಪಡಿಸಿ, ಅಲ್ಲು ಅರ್ಜುನ್ ಸುಕುಮಾರ್ ಜೊತೆಗಿನ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅವರು ತಮ್ಮ ಮುಂಬರುವ ಯೋಜನೆಗಳನ್ನು ಇನ್ನೂ ಘೋಷಿಸಿಲ್ಲ.

ಯಶ್ ಜೊತೆ ಮತ್ತೆ ಪೈಪೋಟಿಗೆ ಇಳಿದ ಅಲ್ಲು ಅರ್ಜುನ್! ಕೆಜಿಎಫ್2 ದಾಖಲೆ ಮುರಿಯಲು ಪುಷ್ಪ2 ದೊಡ್ಡ ಪ್ಲ್ಯಾನ್!

Scroll to load tweet…