58ನೇ ವರ್ಷದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೂಸೆವಾಲಾ ತಾಯಿ!

ಸಿಧು ಮೂಸೆವಾಲಾ ಅವರ ತಂದೆ-ತಾಯಿ ಬಲ್ಕೌರ್‌ ಸಿಂಗ್‌ ಮತ್ತು ಚರಣ್‌ ಕೌರ್‌ ಗಂಡು ಮಗುವನ್ನು ಶನಿವಾರ ಸ್ವಾಗತಿಸಿದ್ದಾರೆ. ದಿವಂಗತ ಪಂಜಾಬ್‌ ಗಾಯಕನ ಕುಟುಂಬ ಫೆಬ್ರವರಿಯಲ್ಲಿ 58 ವರ್ಷದ ಚರಣ್‌ ಕೌರ್‌ ಗರ್ಭಿಣಿಯಾಗಿರುವುದುನ್ನು ಖಚಿತಪಡಿಸಿತ್ತು.
 

Sidhu Moosewala parents Balkaur Singh and Charan Kaur welcomed a baby boy san

ನವದೆಹಲಿ (ಮಾ.17): ಸಿಧು ಮೂಸೆವಾಲಾ ಹತ್ಯೆಯಾದ ಅಂದಾಜು ಎರಡು ವರ್ಷಗಳ ಬಳಿಕ ಪ್ರಖ್ಯಾತ ಪಂಜಾಬಿ ಗಾಯಕನ ತಾಯಿ ಚರಣ್‌ ಕೌರ್‌ ತಮ್ಮ 58ನೇ ವರ್ಷದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಸಿಧು ಮೂಸೆವಾಲಾ ತಂದೆ ಬಲ್ಕೌರ್‌ ಸಿಂಗ್‌ ಖಚಿತಪಡಿಸಿದ್ದಾರೆ. ಮಗುವಿನ ಚಿತ್ರವನ್ನು ಬಲ್ಕೌರ್‌ ಸಿಂಗ್‌ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗುವನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಬಲ್ಕೌರ್‌ ಸಿಂಗ್‌ ಇನ್ಸ್‌ಟಾಗ್ರಾಮ್‌ನಲ್ಲಿ ಪಂಜಾಬಿ ಭಾಷೆಯಲ್ಲಿ ಈ ವಿಚಾರ ತಿಳಿಸಿದ್ದಾರೆ.  'ಶುಭದೀಪ್ ಅವರನ್ನು ಪ್ರೀತಿಸುವ ಲಕ್ಷಾಂತರ ವ್ಯಕ್ತಿಗಳ ಆಶೀರ್ವಾದದೊಂದಿಗೆ, ಭಗವಂತನು ಶುಭ್ ಅವರ ಕಿರಿಯ ಸಹೋದರನನ್ನು ನಮ್ಮ ನಡುವೆ ಇರಿಸಿದ್ದಾನೆ. ವಾಹೆಗುರು ಅವರ ಆಶೀರ್ವಾದದೊಂದಿಗೆ, ಕುಟುಂಬವು ಆರೋಗ್ಯವಾಗಿದೆ ಮತ್ತು ಅವರ ಅಪಾರ ಪ್ರೀತಿಗಾಗಿ ಎಲ್ಲಾ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ' ಎಂದು ಅವರು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಸ್ವತಃ ಬಲ್ಕೌರ್‌ ಸಿಂಗ್‌ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಚರಣ್‌ ಕೌರ್‌ ಮತ್ತೊಮ್ಮ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿಯನ್ನು ತಿರಸ್ಕರಿಸಿದ ಬೆನ್ನಲ್ಲೇ  ಈ ಸುದ್ದಿ ಪ್ರಕಟವಾಗಿದೆ. “ನಮ್ಮ ಕುಟುಂಬದ ಬಗ್ಗೆ ಚಿಂತಿತರಾಗಿದ್ದ ಸಿಧು ಅವರ ಅಭಿಮಾನಿಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ನನ್ನ ಕುಟುಂಬದ ಬಗ್ಗೆ ಸಾಕಷ್ಟು ಊಹಾಪೋಹಗಳು ನಡೆಯುತ್ತಿವೆ. ಈ ಎಲ್ಲಾ ವದಂತಿಗಳನ್ನು ನಂಬಬೇಡಿ ಎಂದು ನಾನು ವಿನಂತಿಸುತ್ತೇನೆ. ಯಾವುದೇ ಸುದ್ದಿ ಇದ್ದರೂ, ಕುಟುಂಬದವರು ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ' ಎಂದು ಬರೆಯುವ ಮೂಲಕ ಪತ್ನಿ ಗರ್ಭಿಣಿಯಾಗಿರುವ ಸುದ್ದಿಯನ್ನು ಅವರು ತಿರಸ್ಕರಿಸಿದ್ದರು.

2022 ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಮೂಸೆವಾಲಾ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಅವರಿಗೆ 28 ವರ್ಷ ವಯಸ್ಸಾಗಿತ್ತು. ಅದೇ ವರ್ಷದಲ್ಲಿ ಅವರು ಮಾನ್ಸಾದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಪಂಜಾಬಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಸಿಧು ಮೂಸೆವಾಲಾ ಅಮ್ಮ ಗರ್ಭಿಣಿ ಅಲ್ವಾ? 58ರ ಹರೆಯದ ಪತ್ನಿ ಬಗ್ಗೆ ಗಾಯಕನ ತಂದೆ ಹೇಳಿದ್ದೇನು?

ಸಿಧು ಮೂಸೆವಾಲಾ ತಮ್ಮ ಹಾಡುಗಳನ್ನು ಸಂಯೋಜಿಸಿ ಮತ್ತು ಸಂಗೀತ ನಿರ್ದೇಶನ ಮಾಡಿ ಖ್ಯಾತಿಯನ್ನು ಗಳಿಸಿದ್ದರು. ಅವರ ಅಕಾಲಿಕ ಮತ್ತು ಆಘಾತಕಾರಿ ಸಾವಿನ ಹೊರತಾಗಿಯೂ, ಅವರ ಅನೇಕ ಹಾಡುಗಳು ಮರಣೋತ್ತರವಾಗಿ ಬಿಡುಗಡೆಯಾಗಿ, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿವೆ. 2017 ರಲ್ಲಿ, ಸಿಧು ಮೂಸೆವಾಲಾ ಅವರು ತಮ್ಮ ಮೊದಲ ಹಾಡು 'ಜಿ ವ್ಯಾಗನ್' ನೊಂದಿಗೆ ಸಂಗೀತ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಯಶಸ್ವಿ ಆಲ್ಬಂಗಳ ಸರಣಿಯೊಂದಿಗೆ ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿದ್ದರು.

ಏಕೈಕ ಪುತ್ರನ ಸಾವಿನ ನಂತರ 58ರ ಇಳಿವಯಸ್ಸಲ್ಲಿ ಮತ್ತೆ ಗರ್ಭಿಣಿಯಾದ ಗಾಯಕ ಸಿಧು ಮೂಸೆವಾಲಾ ತಾಯಿ

 

 

Latest Videos
Follow Us:
Download App:
  • android
  • ios