ಏಕೈಕ ಪುತ್ರನ ಸಾವಿನ ನಂತರ 58ರ ಇಳಿವಯಸ್ಸಲ್ಲಿ ಮತ್ತೆ ಗರ್ಭಿಣಿಯಾದ ಗಾಯಕ ಸಿಧು ಮೂಸೆವಾಲಾ ತಾಯಿ
ತಮ್ಮ 29ನೇ ವಯಸ್ಸಿಗೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪಂಜಾಬಿ ಗಾಯಕ ನಟ ಸಿಧು ಮೂಸೆವಾಲಾ ಅವರ ತಾಯಿ ಚರಣ ಸಿಂಗ್ ಅವರು ತಮ್ಮ 58ನೇ ಇಳಿವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾಗಿದ್ದು, ಬರುವ ಮಾರ್ಚ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಮಾನ್ಸಾ: ತಮ್ಮ 29ನೇ ವಯಸ್ಸಿಗೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪಂಜಾಬಿ ಗಾಯಕ ನಟ ಸಿಧು ಮೂಸೆವಾಲಾ ಅವರ ತಾಯಿ ಚರಣ ಸಿಂಗ್ ಅವರು ತಮ್ಮ 58ನೇ ಇಳಿವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾಗಿದ್ದು, ಬರುವ ಮಾರ್ಚ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಐವಿಎಫ್ ಚಿಕಿತ್ಸೆಯ ಮೂಲಕ ಸಿಧು ಮೂಸೆವಾಲಾ ಪೋಷಕರು 2ನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಸಿಧು ಮೂಸೆವಾಲಾ 2022ರ ಮೇ 29 ರಂದು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ತಮ್ಮ ಮೊದಲ ಹಾಗೂ ಏಕೈಕ ಮಗನ ಸಾವಿನವರೆಗೂ ಈ ದಂಪತಿ ಇನ್ನೊಂದು ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೆ ಎದೆಯೆತ್ತರಕ್ಕೆ ಬೆಳೆದು ನಿಂತ 29ರ ಹರೆಯದ ತಮ್ಮ ಏಕೈಕ ಪುತ್ರನ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಈ ದಂಪತಿಯ ಬದುಕಿನಲ್ಲಿ ಈಗ ಹೊಸ ಆಶಾಕಿರಣ ಮೂಡಿದೆ. ಸಿಧು ತಾಯಿ ಮತ್ತೆ ಗರ್ಭಿಣಿಯಾಗಿದ್ದು, ಹೊಸ ಮಗುವಿನಲ್ಲಿ ಸಿಧುವನ್ನು ಕಾಣುವ ಮೂಲಕ ತಮ್ಮ ಚೊಚ್ಚಲ ಮಗನ ಅಗಲಿಕೆಯ ನೋವನ್ನು ಮರೆಯುವ ನಿರೀಕ್ಷೆಯಲ್ಲಿದ್ದಾರೆ.
ಪ್ರಸ್ತುತ ಸಿಧು ತಾಯಿ ವೈದ್ಯಕೀಯ ಕಾಳಜಿಯಲ್ಲಿದ್ದಾರೆ. 58ರ ಹರೆಯವಾಗಿರುವುದರಿಂದ ಬಹಳ ಕಾಳಜಿ ವಹಿಸಲಾಗಿದೆ. 2022ರಲ್ಲಿ ಸಿಧು ಅವರು ಮಾನ್ಸಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ವೇಳೆ ಅಫಿಡವಿತ್ ಸಲ್ಲಿಕೆ ವೇಳೆ ಸಿಧು ಅವರ ತಾಯಿ ಚರಣ ಸಿಂಗ್ ಅವರ ವಯಸ್ಸನ್ನು 56 ಎಂದು ನಮೂದಿಸಲಾಗಿತ್ತು. ಈಗ ಎರಡು ವರ್ಷ ಕಳೆದಿದ್ದು, ಅವರಿಗೆ 58 ವರ್ಷ ತುಂಬಿದೆ.
ಜೈಲಲ್ಲೇ ಗ್ಯಾಂಗ್‌ವಾರ್, ಗಾಯಕ ಸಿಧು ಮೂಸೆವಾಲಾ ಕೊಲೆ ಆರೋಪ ಹೊತ್ತಿದ್ದ ಇಬ್ಬರ ಕಥೆ ಫಿನಿಶ್!
ಸಿಧು ಮೂಸೆವಲಾ ಸಾವಿನ ಕುರಿತು
ಪಂಜಾಬ್‌ನ ಮನ್ಸಾ ಜಿಲ್ಲೆಯಲ್ಲಿ ತಮ್ಮ ಸೋದರ ಸಂಬಂಧಿ ಹಾಗೂ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಸಿಧು ಅವರನ್ನು ಆರು ಜನ ಶೂಟರ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ವೇಳೆ ಸಿಧು ಅವರು ಮನ್ಸಾದ ಜವಹರ್ಕೆ ಗ್ರಾಂಕ್ಕೆ ತೆರಳುತ್ತಿದ್ದರು. ಇವರ ಹತ್ಯೆ ಪ್ರಕರಣವನ್ನು ಪಂಜಾಬ್ ಪೊಲೀಸ್ ವಿಶೇಷ ತನಿಖಾ ತಂಡ ತನಿಖೆ ಮಾಡುತ್ತಿದೆ. ಈ ಕೊಲೆ ಪ್ರಕರಣ ಸಂಬಂಧ 32 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಗ್ಯಾಂಗ್‌ಸ್ಟಾರ್‌ಗಳಾದ ಲಾರೆನ್ಸ್ ಬಿಷ್ಣೋಯ್, ಗೊಲ್ಡಿ ಬ್ರಾರ್, ಜಗ್ಗು ಭಗ್ವಾನ್‌ಪುರಿಯಾ ಹೆಸರು ಕೂಡ ಈ ಚಾರ್ಜ್‌ಶೀಟ್‌ನಲ್ಲಿದೆ.
Sidhu Moosewala ಆಸ್ವಸ್ಥಗೊಂಡ ಸಿಧು ಮೂಸೆವಾಲಾ ತಂದೆ, ಪಟಿಯಾಲ ಆಸ್ಪತ್ರೆಗೆ ದಾಖಲು!
2022ರಲ್ಲಿ ತಮ್ಮ ಮಗನ ಸಾವಿನ ನಂತರ ಸಿಧು ಮೂಸೆವಾಲಾ ಪೋಷಕರು ಎಷ್ಟೊಂದು ಆಘಾತಕ್ಕೀಡಾಗಿದ್ದರು ಎಂಬ ಬಗ್ಗೆ ಮತ್ತೊಬ್ಬ ಪಂಜಾಬಿ ಗಾಯಕ ದಿಲ್ಜಿತ್ ದೊಸಂಜ್ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದರು. ಪಂಜಾಬ್‌ನಲ್ಲಿ ಮತ್ತೆ ಮತ್ತೆ ಕಲಾವಿದರ ಹತ್ಯೆಯಾಗುತ್ತಿದೆ ಎಂದ ಅವರು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಇದಕ್ಕೂ ಮೊದಲು ಪಂಜಾಬಿ ನಟ ದೀಪ್ ಸಿಧು ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು.
ಇನ್ನು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು ತಮ್ಮ ಸೋ ಹೈ, ಸೇಮ್ ಬೀಫ್, ದ ಲಾಸ್ಟ್ ರೈಡ್ ಸೇರಿದಂತೆ 200ಕ್ಕೂ ಹೆಚ್ಚು ಹಿಟ್ ಹಾಡುಗಳಿಂದ ಫೇಮಸ್ ಆಗಿದ್ದರು.