ಇಂದು ಪ್ರೇಮ್ ಹುಟ್ಟುಹಬ್ಬದ ಅಂಗವಾಗಿ ರಿಲೀಸ್ ಆಗಿರುವ ಸ್ಪಾರ್ಕ್ ಸಿನಿಮಾದ ಪೋಸ್ಟರ್ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರು ಕೆಂಡಾಮಂಡಲ ಆಗಿದ್ದಾರೆ. ಅವರ ಈ ಪರಿ ಕೋಪಕ್ಕೆ ಕಾರಣವೇನು? ನಡೆದಿದ್ದಾರೂ ಏನು?..
ಹುಟ್ಟುಹಬ್ಬದ ದಿನವೇ ನಟ ಪ್ರೇಮ್ (Nenapirali Prem) ವಿರುದ್ಧ ಆರೋಪ ಕೇಳಿ ಬಂದಿದೆ. ನಟ ನೆನಪಿರಲಿ ಪ್ರೇಮ್ ವಿರುದ್ಧ ಶೃತಿ ನಾಯ್ಡು ಗರಂ ಅಗಿದ್ದಾರೆ.. ಇದೀಗ ಹುಟ್ಟು ಹಬ್ಬದ ದಿನವೇ ಪ್ರೇಮ್‌ಗೆ ಎದುರಾಗುತ್ತಾ ಕಾನೂನು ಸಂಕ ಎನ್ನುವ ಸಂದೇಹ ಮೂಡಿದೆ. 'ಸ್ಪಾರ್ಕ್' ಸಿನಿಮಾ ತಂಡದ ವಿರುದ್ಧ ಶೃತಿ ನಾಯ್ಡು ಮುನಿಸು ತೋರಿದ್ದಾರೆ.ಕಾರಣ, ಅನುಮತಿ ಇಲ್ಲದೇ ರಮೇಶ್ ಇಂದಿರಾ ಫೋಟೋ ಬಳಸಿದ ಚಿತ್ರತಂಡದ ವಿರುದ್ಧ ಶ್ರುತಿ ನಾಯ್ಡು ಭಾರೀ ಗರಂ ಆಗಿದ್ದಾರೆ.
ಇಂದು ಪ್ರೇಮ್ ಹುಟ್ಟುಹಬ್ಬದ ಅಂಗವಾಗಿ ರಿಲೀಸ್ ಆಗಿರುವ ಸ್ಪಾರ್ಕ್ ಸಿನಿಮಾದ ಪೋಸ್ಟರ್ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರು ಕೆಂಡಾಮಂಡಲ ಆಗಿದ್ದಾರೆ. ಪೋಸ್ಟರ್‌ನಲ್ಲಿ ರಮೇಶ್ ಇಂದಿರಾ ಭೀಮ ಚಿತ್ರಕ್ಕೆ ತೆಗೆಸಿದ್ದ ಫೋಟೊ ಹಿಡಿದು ನಟ ಪ್ರೇಮ್ ಪೋಸ್ ಕೊಟ್ಟಿರೋದು ಶ್ರುತಿ ನಾಯ್ಡು ಅವರನ್ನು ಕೆರಳಿಸಿದೆ. ಈ ಬಗ್ಗೆ ಮಾತನ್ನಾಡಿರುವ ಶ್ರತಿ ನಾಯ್ಡು, 'ಈ ಚಿತ್ರ ತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ..' ಎಂದಿದ್ದಾರೆ. ಜೊತೆಗೆ, 'ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪ್ರಕಟವಾಗಿರುವ ಈ ಚಿತ್ರದ ಬಗ್ಗೆ, ಪತ್ರಿಕೆಯ ಕಟ್ಟಿಂಗ್‌ನಲ್ಲಿರುವ ಈ ಚಿತ್ರವನ್ನು ನಟನ ಅನುಮತಿ ಪಡೆಯದೇ ಪೋಸ್ಟ್ ಮಾಡಿದ್ದಾರೆ' ಎಂದಿದ್ದಾರೆ.
'ಮಿಲ್ಕಿ ಬ್ಯೂಟಿ' ಟೈಟಲ್ ಬಗ್ಗೆ ತಮನ್ನಾ ಹೇಳಿದ್ದೇನು? ಬೇಸರವೇ ಖುಷಿಯೇ..? ಹೊರಬಿತ್ತು...
ನಟ ಪ್ರೇಮ್ ಹಿಡಿದುಕೊಂಡ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ಭೀಮಾ ಚಿತ್ರದ್ದು.. ಅದರಲ್ಲಿರೋ ಫೋಟೋವನ್ನು ಭೀಮಾ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು.. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟನಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ' ಎಂದಿದ್ದಾರೆ ಶೃತಿ ನಾಯ್ಡು.
ಸ್ಪಾರ್ಕ್ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ನಾಯಕರಾಗಿ ನಟಿಸುತ್ತಿದ್ದಾರೆ. ಯುವ ಪ್ರತಿಭೆ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಪೋಸ್ಟರ್ ನಟ ನೆನಪಿರಲಿ ಪ್ರೇಮ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಆದರೆ, ಈಗ ಅದು ವಿವಾದದ ಸ್ವರೂಪ ಪಡೆದು, ಕಾನೂನಿನ ಸಂಕಷ್ಟಕ್ಕೆ ಸಿಲುಕುವ ಅಪಾಯದಲ್ಲಿದೆ. ಈ ಬಗ್ಗೆ ಮುಂದಿನ ಅಪ್ಡೇಟ್ ನಿರೀಕ್ಷಿಸಲಾಗುತ್ತಿದೆ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಷ್ಟೇ. ಸದ್ಯಕ್ಕೆ ಶ್ರುತಿ ನಾಯ್ಡು ಸೋಷಿಯಲ್ ಮೀಡಿಯಾ ಪೋಸ್ಟ್ ಸಕತ್ ಸೌಂಡ್ ಮಾಡತೊಡಗಿದೆ.
ಶ್ರೀದೇವಿಯನ್ನೂ ಬಿಟ್ಟಿರಲಿಲ್ಲ ರವಿಚಂದ್ರನ್.. 'ಚೆಲುವೆ'ಗೇ ಗಾಳ ಹಾಕಿದ್ದರು ಕ್ರೇಜಿ ಸ್ಟಾರ್..!
