ದಕ್ಷಿಣ ಭಾರತದ ಬಹುಭಾಷೆ ತಾರೆ ಶ್ರಿಯಾ ಶರಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿರುವ ನೃತ್ಯದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಶ್ರಿಯಾ ಶರಣ್ ಪೋಟೋವೊಂದರ ಮುಂದೆ ನಿಂತು ಸ್ವಿಮ್ ಸೂಟ್ ನಲ್ಲಿ ನೃತ್ಯ ಮಾಡುತ್ತಿರುವುದಕ್ಕೆ ಕಮೆಂಟ್ ಗಳ ಸುರಿಮಳೆಯಾಗಿದೆ. ಶ್ರಿಯಾ ಪವರ್​ ಸ್ಟಾರ್​ ಪುನೀತ್​ ರಾಜುಕುಮಾರ್​ ಅಭಿನಯದ ಅರಸು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಕೊಂಡಿದ್ದರು. ಇದಾದ ಬಳಿಕ ಲವ್ಲಿ ಸ್ಟಾರ್​ ಪ್ರೇಮ್​ ಅಭಿನಯದ ‘ಚಂದ್ರ’ ನಾಯಕಿಯಾಗಿ ಅಭಿನಯಿಸಿದ್ದರು.

ಪತಿಯೊಂದಿಗೆ ಲಂಡನ್ ಪ್ರವಾಸಲ್ಲಿರುವ ನಟಿ ಪೋಟೋವೊಂದರ ಮುಂದೆ ನಿಂತು ಸ್ಟೆಪ್ ಹಾಕಿದ್ದಾರೆ. ಸ್ವಿಮ್​​ಸೂಟ್ ಮೇಲೆ ಪಾರದರ್ಶಕವಾದ ಗೌನ್ ಹಾಗೂ ಸನ್​​​ ಗ್ಲಾಸ್ ಧರಿಸಿರುವ ಶ್ರಿಯಾ ವಿಚಿತ್ರ ಸ್ಟೆಪ್ ಗೆ ಅಭಿಮಾನಿಗಳು ಬಗೆಬಗೆಯಾದ ಕಮೆಂಟ್ ಮಾಡಿದ್ದಾರೆ.

View post on Instagram