* ಸೆರೆಬ್ರಲ್‌ ವೆನಸ್‌ ಸಮಸ್ಯೆಯಿಂದ ಬಳಲುತ್ತಿದ್ದ ನಿರ್ಮಾಪಕ* ಸಾವಿನಲ್ಲೂ ಸಾರ್ಥಕತೆ ಮೆರೆದ ಕಿರುಚಿತ್ರ ನಿರ್ಮಾಪಕ ಗಣೇಶ್‌* 6 ಅಂಗಾಂಗ ದಾನ, ಇದರಿಂದ 8 ಜನರಿಗೆ ಹೊಸ ಜೀವನ

ಬೆಂಗಳೂರು(ಏ.16): ಕಿರುಚಿತ್ರ ನಿರ್ಮಾಪಕ, 42 ವರ್ಷದ ಗಣೇಶ್‌ ವೇಮುಲ್ಕರ್‌ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ತಮ್ಮ 6 ಅಂಗಾಂಗಗಳನ್ನು ದಾನ ಮಾಡಿ 8 ಜನರಿಗೆ ಹೊಸ ಜೀವನ ನೀಡಿದ್ದಾರೆ.

ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಗಣೇಶ್‌ ಕುಟುಂಬ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಂಡಿದ್ದರು. ಆದರೆ, ನಿರಂತರ ತಲೆನೋವು, ವಾಂತಿಯಿಂದಾಗಿ ಏಪ್ರಿಲ್‌ 6 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಜಿಎಸ್‌ ಗ್ಲೆನೆಗಲ್ಸ್‌ ಗ್ಲೋಬಲ್‌ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಾಗಿದ್ದರು. ಸೆರೆಬ್ರಲ್‌ ವೆನಸ್‌ ಥ್ರಂಬೋಸಿಸ್‌ಗೆ ತುತ್ತಾಗಿರುವುದು ಎಂಆರ್‌ಐ ಪರೀಕ್ಷೆಯಿಂದ ದೃಢಪಟ್ಟಿತು. ವೆಂಟಿಲೇಟರ್‌ಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಿದರೂ ಏಪ್ರಿಲ್‌ 13ರಂದು ಸಂಜೆ 5ಕ್ಕೆ ಬ್ರೈನ್‌ ಡೆಡ್‌ ಎಂದು ವೈದ್ಯರು ಘೋಷಿಸಿದರು.

ಮಾನವನ ರಕ್ತದಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದ ಸೂಕ್ಷ್ಮ ಪ್ಲಾಸ್ಟಿಕ್, ವಿಜ್ಞಾನಿಗಳ ಎಚ್ಚರಿಕೆ!

ಆ ಬಳಿಕ ಗಣೇಶ್‌ ಕುಟುಂಬಸ್ಥರು ಅಂಗಾಂಗ ದಾನ ನೀಡಲು ಮುಂದಾದರು. ಅವರ 2 ಮೂತ್ರಪಿಂಡ, ಯಕೃತ್ತು (2 ಜನರಿಗೆ ದಾನ), ಹೃದಯ, ಶ್ವಾಸಕೋಶ ಮತ್ತು ಕಾರ್ನಿಯಾವನ್ನು ದಾನ ಮಾಡಲಾಯಿತು. ಇದರಿಂದಾಗಿ 8 ರೋಗಿಗಳಿಗೆ ಪ್ರಯೋಜನವಾಗಿದೆ.

ಬಿಜಿಎಸ್‌ ಗ್ಲೆನೆಗಲ್ಸ್‌ ಗ್ಲೋಬಲ್‌ ಆಸ್ಪತ್ರೆಯ ಡಾ| ಪಿ.ಸಿ.ಮೋಹನ್‌ ಮತ್ತು ಡಾ| ಕ್ರಾಂತಿ ಮೋಹನ್‌ ಅವರನ್ನು ಒಳಗೊಂಡ ನರವಿಜ್ಞಾನ ತಂಡ ಗಣೇಶ್‌ ಕುಟುಂಬಕ್ಕೆ ಧನ್ಯವಾದ ಸಲ್ಲಿಸಿದೆ. ಆಸ್ಪತ್ರೆ ಸಮೂಹದ ಕ್ಲಸ್ಟರ್‌ ಸಿಒಒ ಆಗಿರುವ ಬಿಜು ನಾಯರ್‌ ಮಾತಾನಾಡಿ, ಪ್ರೀತಿ ಪಾತ್ರರನ್ನು ಕಳೆದುಕೊಂಡ ಅಪಾರ ನೋವಿನ ನಡುವೆಯು ಮಾನವೀಯತೆ ಮೇಲುಗೈ ಸಾಧಿಸಿದೆ. ರೋಗಿಯ ಕುಟುಂಬದ ನಿರ್ಧಾರದಿಂದಾಗಿ 8 ರೋಗಿಗಳು ಸಾಮಾನ್ಯ ಜೀವನವನ್ನು ನಡೆಸುವ ಭರವಸೆ ಪಡೆದಿದ್ದಾರೆ. ಇದು ಅಂಗಾಂಗ ದಾನಕ್ಕೆ ಇನ್ನಷ್ಟುಪ್ರೇರಣೆಯಾಗಲಿ ಎಂದು ಹೇಳಿದ್ದಾರೆ.

ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ಧೆ

ಹುಟ್ಟು ಹೇಗಾದ್ರೂ ಆಗಲಿ ಸಾವು ಚರಿತ್ರೆಯಾಗಿರಬೇಕು ಎನ್ನುವ ಮಾತು ಸರ್ವಕಾಲಿಕ. ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಾಧನೆ ಬದುಕನ್ನು ಬಾಳಬೇಕು. ಆದರೆ ಇಲ್ಲಿನ ವೃದ್ಧೆ (Old Women) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತನ್ನ ಸಾವಿನ (Death) ಬಳಿಕ ತನ್ನ ದೇಹ ಮಣ್ಣು ಸೇರಬಾರದು ಕನಿಷ್ಠ ವೈದ್ಯಕೀಯ ವಿದ್ಯಾರ್ಥಿಗಳಿಗಾದರೂ (Students) ಕಲಿಕೆ ಸಹಾಯಕ್ಕೆ ಬರಲಿ ಎಂದು ದೇಹದಾನ ಮಾಡಿ ಮಾದರಿಯಾಗಿದ್ದಾರೆ.

ಬಳ್ಳಾರಿಗೆ ಬಂತು ಬೆಳಗಾವಿ ಮೃತದೇಹ: ಬೆಳಗಾವಿ ಜಿಲ್ಲೆ ಬೈಲಹೊಂಗಲದ ನಿವಾಸಿ ದಿ . ಕಸ್ತೂರವ್ವ ಬಸವಣ್ಣೆಪ್ಪ ಜಿಗಜಿನ್ನಿ (85) ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು. ಮೃತರ ಹತ್ತಿರ ಸಂಬಂಧಿಗಳ ಮನವಿ ಮೇರೆಗೆ ಮೃತ ದೇಹವನ್ನು ಬೈಲಹೊಂಗಲದ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಹೊಂಗಲದ ಡಾ. ರಾಮಣ್ಣನವರ ಚಾರಿಟಬಲ್ ಟ್ರಸ್ಟ್ ಮೂಲಕ ಬಳ್ಳಾರಿಯ ತಾರಾನಾಥ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ.

Ballari ಭವಿಷ್ಯ ಹೇಳೋ ನೆಪದಲ್ಲಿ ವಾಮಾಚಾರ ಮಾಡಿ ಕಣ್ಣೆದುರೇ ಕತ್ತಿನ ಸರ ಎಗರಿಸಿದ ಚಾಲಾಕಿ!

ನೇತ್ರದಾನ ಚರ್ಮದಾನವನ್ನು ಮಾಡಿದ್ದಾರೆ: ಮಣ್ಣಿಗೆ ಹೋಗೋ ದೇಹಕ್ಕಾಗಿ ಜೀವನವೀಡಿ ಬಡಿದಾಡೋ ಮನುಷ್ಯ ಸತ್ತ ಮೇಲೂ ಮತ್ತೊಬ್ಬರಿ ಸಹಕಾರಿಯಾಗಬೇಕು ಅನ್ನೋ ತತ್ವದಡಿ ಇಲ್ಲಿ ದೇಹದ ಎಲ್ಲ ಅಂಗಾಂಗಗಳನ್ನು ದಾನ ಮಾಡಲಾಗಿದೆ. ನೇತ್ರದಾನದ ಮುಖಾಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಚರ್ಮ ದಾನದ ಮುಖಾಂತರ ಸುಟ್ಟ ರೋಗಿಗೆ ಜೀವದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಸ್ತೂರವ್ವ ಅವರ ನೇತ್ರಗಳು, ಬೆಳಗಾವಿ ಕೆಎಲ್‌ಇ ಸಂಸ್ಥೆಯ ಡಾ,ಪ್ರಭಾಕರ ಕೋರೆ ಆಸತ್ರೆಯ ನೇತ್ರ ಭಂಡಾರಕ್ಕೆ ಹಾಗೂ ಚರ್ಮವನ್ನು ಅದೇ ಆಸ್ಪತ್ರೆಯ ಕೆಎಲ್‌ಇ ರೋಟರಿ ಸ್ಕಿನ್‌ ಬ್ಯಾಂಕ್‌ಗೆ (ಚರ್ಮ ಭಂಡಾರ) ದಾನ ನೀಡಿದ್ದಾರೆ.

ಸುಟ್ಟ ಗಾಯವಿರೋರಿಗೆ ಚರ್ಮವೇ ಸಿಗೋದಿಲ್ಲ: ಹೌದು! ವಿವಿಧ ಅವಘಡದಲ್ಲಿ ಮೈಮೇಲಿನ ಚರ್ಮ ಸುಟ್ಟಿರೋ ರೋಗಿಗಳಿಗೆ ಚರ್ಮವೇ ಸಿಗೋದಿಲ್ಲ. ಹೀಗಾಗಿ ಮೃತಪಟ್ಟ ವ್ಯಕ್ತಿಗಳು ಈ ರೀತಿಯ ದೇಹದಾನ ಮಾಡಿದರೆ ಆ ವ್ಯಕ್ತಿಯ ಚರ್ಮ ಹಲವರಿಗೆ ಬಳಕೆ ಮಾಡಬಹುದಂತೆ. ಇನ್ನೂ ಸುಟ್ಟಗಾಯಕ್ಕೆ ದಾನಿಯ ಚರ್ಮ ಜೋಡಿಸುವ ಮೂಲಕ ಬೇಗ ಗುಣವಾಗುವಂತೆ ಮಾಡಲು ಅವಕಾಶವಿದೆ. ಹೀಗೆ ಅಂಗಾಂಗ ದಾನದ ಮೂಲಕ ಇಬ್ಬರು ಅಂಧರಿಗೆ ಬೆಳಕು ನೀಡಿದ್ದಲ್ಲದೇ, ಸುಟ್ಟಗಾಯದಿಂದ ಬಳಲುತ್ತಿರುವ ರೋಗಿಗಳಿಗೆ ಶೀಘ್ರ ಗುಣಮುಖರಾಗಲು ನೆರವಾಗಿರೋದು ವಿಶೇಷವಾಗಿದೆ.