ಬೆಂಗಳೂರು[ಆ. 08]  ಕುರುಕ್ಷೇತ್ರ ಚಿತ್ರದ ವೈಭವ ಮಧ್ಯರಾತ್ರಿಯಿಂದಲೇ ಶುರುವಾಗ್ತಿದೆ. ಟಾಲಿವುಡ್​​ನಲ್ಲಿ ಸುಮಾರು 500 ಸ್ಕೀನ್​​ನಲ್ಲಿ ಚಿತ್ರ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಬೆಂಗಳೂರಿನ ಜೆ.ಪಿ ನಗರದ ಸಿದ್ಧಲಿಂಗೇಶ್ವರ ಥಿಯೇಟರ್​ನಲ್ಲಿ ರಾತ್ರಿ 12 ಗಂಟೆಗೆ ಚಿತ್ರ ತೆರೆ ಕಂಡಿದೆ. ಹಾಗೆಯೇ ರಾಕ್ಲೈನ್​ ಮಾಲ್​​ನಲ್ಲಿ ಬೆಳಗಿನ ಜಾವ 3.30ಕ್ಕೆ, ತಾವರೆಕೆರೆಯ ಲಕ್ಷ್ಮಿ ಥಿಯೇಟರ್​ನಲ್ಲಿ 5.30ಕ್ಕೆ ಪ್ರದರ್ಶನ ಕಂಡಿದೆ. ರಾಜ್ಯ, ಸೇರಿ ಹೊರ ರಾಜ್ಯದ ಹಲವು ಥಿಯೇಟರ್​​ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

"

ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ ದರ್ಶನವಾಗುತ್ತಿದೆ.ಪ್ರಮುಖ ಥಿಯೇಟರ್ ಅಲ್ಲಿ ಅಭಿಮಾನಿಗಳ ಅಬ್ಬರ ಬಲು ಜೋರಾಗಿಯೇ ಇದೆ. ಕನ್ನಡನಾಡಿನ ಜನತೆಯ ಕುತೂಹಲ ಹೆಚ್ಚಿಸಿರೋ ಕುರುಕ್ಷೇತ್ರ ಚಿತ್ರದ ರಿಲೀಸ್,ಒಂದ್ ರೀತಿ ಅಭಿಮಾನಿಗಳಿಗೆ ಅತಿ ದೊಡ್ಡ ಹಬ್ಬವೇ ಆಗಿದೆ.ಅದನ್ನ ಅಷ್ಟೇ ವೈಭವ ಮತ್ತು ಸಂಭ್ರಮದಲ್ಲಿಯೇ ಫ್ಯಾನ್ಸ್ ವೆಲ್ ಕಮ್ ಮಾಡ್ತಿದ್ದಾರೆ.

ಕನ್ನಡದ ಕುರುಕ್ಷೇತ್ರ ಅಮೆರಿಕದಲ್ಲಿರೋ ಕುರುಕ್ಷೇತ್ರ ಪ್ರೇಮಿಗಳಿಗೆ,ಒಂದ್ ದಿನ ಮುಂಚೇನೆ ನೋಡೋ ಅವಕಾಶ ಸಿಕ್ಕಿದೆ. ಆಗಸ್ಟ್-08 ರಂದೇ ಇಲ್ಲಿ ಕುರುಕ್ಷೇತ್ರ ಚಿತ್ರದ ವಿಶೇಷ ಪ್ರೀಮಿಯರ್ ಷೋ ನಡೆದಿದೆ. ಇಲ್ಲಿಯ ಒಟ್ಟು 50 ಸ್ಕ್ರಿನ್ ಗಳಲ್ಲಿ ಸಿನಿಮಾ ಪ್ರದರ್ಶನ ಆಗೋದು ಪಕ್ಕಾ ಆಗಿದೆ. ಈ ಸಂಖ್ಯೆ 100 ಕ್ಕೂ ತಲುಪೊ ಸಾಧ್ಯತೆ ಇದೆ.