ಬೆಂಗಳೂರು (ಮಾ.07):  ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‌ನಾಗ್‌ ಶನಿವಾರ ಬೆಳಗ್ಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ.  

ದೇಶದಲ್ಲಿ ಎರಡನೇ ಹಂತದ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿದ್ದು, ಇತ್ತೀಚೆಗಷ್ಟೆನಟ ಕಮಲ್‌ ಹಾಸನ್‌ ಚೆನ್ನೈನ ಶ್ರೀರಾಮಚಂದ್ರ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದರು.

7 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು: ಶಾಲೆಗೆ ಬೀಗ, ಹೆಚ್ಚಿದ ಆತಂಕ

ಆ ಮೂಲಕ ಕೋವಿಡ್‌ ಲಸಿಕೆ ಪಡೆದ ಮೊದಲ ಭಾರತೀಯ ನಟ ಎನ್ನುವ ಹೆಗ್ಗಳಿಕೆಗೆ ಕಮಲ್‌ ಹಾಸನ್‌ ಪಾತ್ರರಾಗಿದ್ದರು. 

ಈಗ ಕಲಾವಿದ ಅನಂತ್‌ನಾಗ್‌ ಕೂಡ ಲಸಿಕೆ ಹಾಕಿಸಿಕೊಂಡು ಕೊರೋನಾ ವಿರೋಧಿ ಹೋರಾಟಕ್ಕೆ ಸಾಥ್‌ ನೀಡಿದ್ದಾರೆ