ನಟಿ ಸಮೀರಾ ರೆಡ್ಡಿ ತಮ್ಮ ಇತ್ತೀಚಿನ ಫಿಟ್ನೆಸ್ ಜರ್ನಿ ಮತ್ತು ಗ್ಲಾಮರ್ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಜಿಮ್, ಡಯಟ್ ಮತ್ತು ಕಾರ್ಡಿಯೋ ಮೂಲಕ ಇಂಚುಗಳಷ್ಟು ತೂಕ ಇಳಿಸಿಕೊಂಡು ಸ್ಲಿಮ್ ಆಗಿರುವ ಅವರು, 46ನೇ ವಯಸ್ಸಿನಲ್ಲಿಯೂ ಗ್ಲಾಮರ್ ಗೊಂಬೆಯಾಗಿ ಮಿಂಚುತ್ತಿದ್ದಾರೆ.
ವೇಟ್‌ಲಾಸ್ ಆಗೋದಕ್ಕಿಂತ ಇಂಚ್ ಲಾಸ್ ಆದರೆ, ಅದು ಹೆಣ್ಣುಮಕ್ಕಳಿಗೆ ತುಂಬಾ ಖುಷಿಕೊಡುತ್ತದೆ. ಅದರಲ್ಲೂ ದೇಹರಚನೆಯ ವಿಚಾರ ಬಂದಾಗ ಅದರಲ್ಲಿ ಕಟ್ಟುನಿಟ್ಟು. ಕಳೆದ ಮಾರ್ಚ್ 17 ರಂದು ಇನ್ಸ್‌ಟಾಗ್ರಾಮ್ ಪೋಸ್ಟ್‌ನಲ್ಲಿ 46 ವರ್ಷದ ನಟಿ ಸಮೀರಾ ರೆಡ್ಡಿ, ಜಿಮ್ ಡಯಟ್ ಮತ್ತು ಕಾರ್ಡಿಯೋ ಮೂಲಕ ಇಂಚುಗಳಷ್ಟು ತೂಕ ಇಳಿಸಿಕೊಂಡಿದ್ದರು ಬಗ್ಗೆ ಮಾತನಾಡಿದ್ದರು.
ಅವರು ದೊಡ್ಡ ಪ್ರಮಾಣದಲ್ಲಿ ವೇಟ್‌ಲಾಸ್ ಜರ್ನಿಗೆ ಇಳಿದಿದ್ದಾರೆ. ಫಿಸಿಕ್ ಮೇಂಟೇನ್ ಮಾಡಿಕೊಳ್ಳಲು ಮುಂದಾಗಿದ್ದಾಗಿದ್ದಾರೆ. ಇದರಿಂದ ಸದೃಢ ಹಾಗೂ ತೆಳ್ಳಗಿನ ದೇಹ ಪಡೆಯಲು ಕಾರಣವಾಗಿದೆ ಎಂದಿದ್ದಾರೆ.
ಫಿಟ್‌ನೆಸ್ ಜರ್ನಿ ಬಗ್ಗೆ ಮಾತನಾಡಿದ ಸಮೀರಾ: 2013ರಲ್ಲಿ ಕನ್ನಡದಲ್ಲಿ ವರದನಾಯಕ ಸಿನಿಮಾ ಬಳಿಕ ಹೆಚ್ಚೆಲ್ಲೂ ಕಾಣಿಸಿಕೊಳ್ಳದ ಸಮೀರಾ ರೆಡ್ಡಿ ತಮ್ಮ ಮಂಡೇ ಮೋಟಿವೇಷನ್ ವಿಡಿಯೋದಲ್ಲಿ ವೇಟ್‌ಲಾಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ವೈಟ್ ಟ್ಯಾಂಕ್ ಟಾಪ್, ಬಿಳಿ ಬಣ್ಣದ ಬ್ಲೇಜರ್ ಹಾಗೂ ನೇರಳೆ ಬಣ್ಣದ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡ ಸಮೀರಾ ಬಹಳ ವಿಶ್ವಾಸದಿಂದ ಕಾಣುತ್ತಿದ್ದರು. ವ್ಯಾಯಾಮದ ಮೂಲಕ ಸ್ನಾಯುಗಳನ್ನು ನಿರ್ಮಿಸುವಾಗ, ನಿಮ್ಮ ತೂಕವು ತೀವ್ರವಾಗಿ ಬದಲಾಗದಿರಬಹುದು, ಆದರೆ ನಿಮ್ಮ ದೇಹದ ಸಂಯೋಜನೆಯು ಹೇಗೆ ಬದಲಾಗುತ್ತದೆ ಎಂಬುದನ್ನು ಅವರು ಹಂಚಿಕೊಂಡಿದ್ದರು.

ಈ ವರ್ಷದ ಆರಂಭದಲ್ಲಿ ತಾವು 90 ಕೆಜಿ ಇದ್ದಿದ್ದಾಗಿ ಹೇಳಿರುವ ಸಮೀರಾ ತಮ್ಮ ಬಾಡಿಶೇಪ್, 43-37.5-44 ಆಗಿತ್ತು ಎಂದಿದ್ದಾರೆ. ಈ ವರ್ಷದ ಮೊದಲಿನ ಬೆಳಗ್ಗೆಯನ್ನು ನಾನು ಎದ್ದಾಗ ನನ್ನ ದೇಹ ಕಸದ ಡಬ್ಬಿ ರೀತಿ ಆಗಿದೆ ಎಂದನಿಸಿತು. ಕಳೆದ ವರ್ಷ ನಾನು ಏನು ಮಾಡಿದ್ದೆ ಅನ್ನೋದೇ ನೆನಪಾಗುತ್ತಿರಲಿಲ್ಲ. ಈ ವರ್ಷ ನನ್ನ ಲೈಫ್‌ಸ್ಟೈಲ್ ಚೇಂಜ್ ಮಾಡಬೇಲು ಎಂದು ನಿರ್ಧಾರ ಮಾಡಿದ್ದೆ. 2025 ಒಂದು ಸವಾಲಿನಿಂದ ಕೂಡಿರುತ್ತದೆ ಆದರೆ ದೃಢನಿಶ್ಚಯ, ಪೋಷಣೆ, ತೂಕ ತರಬೇತಿ, ಯೋಗ ಮತ್ತು ನಂಬಿಕೆಯೊಂದಿಗೆ ನಾನು ಅದನ್ನು ತಲುಪುತ್ತೇನೆ" ಎಂದು ರೆಡ್ಡಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.
ಅದರಂತೆ ಅವರೀಗ ಸಖತ್ ಸ್ಲಿಮ್ ಆಗಿದ್ದಾರೆ. ಅದಕ್ಕೆ ಅವರ ಇತ್ತೀಚಿನ ಫೋಟೋಶೂಟ್‌ಗಳೇ ಸಾಕ್ಷಿಯಾಗಿವೆ. 2000ದ ದಶಕದಲ್ಲಿ ತೆಲುಗು ತಾರೆಯರಾದ ಮೆಗಾಸ್ಟಾರ್ ಚಿರಂಜೀವಿ ಮತ್ತು ಜೂನಿಯರ್ ಎನ್ಟಿಆರ್, ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ತಮಿಳು ನಟ ಸೂರ್ಯ ಅವರೊಂದಿಗೆ ಚಿತ್ರರಂಗವನ್ನು ಆಳಿದ ನಟಿ, 46ನೇ ವಯಸ್ಸಿನಲ್ಲಿ ಗ್ಲಾಮರ್ ಗೊಂಬೆಯಾಗಿದ್ದಾರೆ. ಚಿನ್ನದ ಬಣ್ಣದ ತೋಳಿಲ್ಲದ ಬ್ಲೌಸ್ ಮತ್ತು ಸ್ಟೇಟ್ಮೆಂಟ್ ಕಿವಿಯೋಲೆ ಇರುವ, ರಾಜಮನೆತನದ ನೀಲಿ ಸೀರೆಯಲ್ಲಿ ತನ್ನ ಇತ್ತೀಚಿನ ಗ್ಲಾಮ್ ಅವತಾರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು.
2013 ರ ಕನ್ನಡದ ವರದನಾಯಕ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಸಮೀರಾ, ಸಿನಿಮಾಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡಿರಬಹುದು. ಆದರೆ, ಗ್ಲಾಮರ್ ಲೋಕದಿಂದ ಅವರು ವಿರಾಮ ತೆಗೆದುಕೊಂಡಿಲ್ಲ.
ತಡವಾದ್ರೆ ರಾತ್ರಿ ಅಕ್ಷಯ್ ಮನೆಯಲ್ಲೇ ಮಲಗ್ತಿದ್ದೆ: ಮದುವೆಗೂ ಮುನ್ನ ಅತ್ತೆ ಮನೆಯಲ್ಲಿ ಸಮೀರಾ ರೆಡ್ಡಿ!
