ಸದ್ಯ ಸಿಕಂದರ್ ಚಿತ್ರಕ್ಕಿಂತಲೂ ಹೆಚ್ಚಾಗಿ ನಟಿ ರಶ್ಮಿಕಾ ಮಂದಣ್ಣ ಅವರ ಸಂದರ್ಶನವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ನಟಿ ರಶ್ಮಿಕಾ ಅವರು 'ನಾನು ಹುಟ್ಟಿದ್ದು, ಬೆಳೆದಿದ್ದು ಕರ್ನಾಟಕದಲ್ಲಿ..
ಸದ್ಯ ಭಾರತ ಸೇರಿದಂತೆ, ಸಿನಿಮಾ ಜಗತ್ತಿನಲ್ಲಿ ನಟ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಚಿತ್ರದ ಬಗ್ಗೆಯೇ ಮಾತುಕತೆ ಆಗುತ್ತಿದೆ. ಇಂದು, ಅಂದರೆ 30 ಮಾರ್ಚ್ 2025ರ ರಂಜಾನ್ ಹಬ್ಬದಂದು ಬಿಡುಗಡೆ ಆಗಿರುವ ಸಿಕಂದರ್ ಚಿತ್ರವು ಉತ್ತಮ ವಿಮರ್ಶೆ ಪಡೆದುಕೊಂಡಿಲ್ಲ. ನಿರ್ದೇಶಕ ಎಆರ್ ಮುರುಗದಾಸ್ ಸಿನಿಮಾಜೀವನದಲ್ಲೇ ಇದು ಅತ್ಯಂತ ಕಳಪೆ ಚಿತ್ರ ಎನ್ನಲಾಗುತ್ತಿದೆ. ಸಿನಿಮಾ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಎಲ್ಲವೂ ಸಲ್ಲೂರ ಮೊದಲಿನ ಸಿನಿಮಾಗಳಿಗೆ ಹೋಲಿಸಿದರೆ ಸಾಕಷ್ಟು ಕೆಳಮಟ್ಟದಲ್ಲಿ ಇದೆ ಎಂಬ ಮಾತು ಕೇಳಿ ಬರುತ್ತಿದೆ. ನಿಖರವಾಗಿ ಈ ಸಿನಿಮಾ ಫಲಿತಾಂಶ ತಿಳಿಯಲು ಕನಿಷ್ಠ 3 ದಿನಗಳು ಕಳೆಯಬೇಕು.
ಆದರೆ, ಸದ್ಯ ಸಿಕಂದರ್ ಚಿತ್ರಕ್ಕಿಂತಲೂ ಹೆಚ್ಚಾಗಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಸಂದರ್ಶನವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ನಟಿ ರಶ್ಮಿಕಾ ಅವರು 'ನಾನು ಹುಟ್ಟಿದ್ದು, ಬೆಳೆದಿದ್ದು ಕರ್ನಾಟಕದಲ್ಲಿ ಎಂದಿದ್ದಾರೆ' ಇದೇ ಈಗ ದೊಡ್ಡ ಸುದ್ದಿಯಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಏಕೆಂದರೆ, ಇಷ್ಟೂ ದಿನ, ಕನ್ನಡತಿ ನಟಿ ರಶ್ಮಿಕಾ ಎಲ್ಲೂ ಕೂಡ ತಾವು ಕರ್ನಾಟಕದವರು, ಕನ್ನಡತಿ ಎಂದು ಹೇಳುತ್ತಿಲ್ಲ ಎಂದು ಆರೋಪ ಮಾಡಲಾಗುತ್ತಿತ್ತು. ಆದರೆ ಈಗ ಹೇಳಿದ್ದಾರೆ ನೋಡಿ.. ! ಹಾಗಿದ್ದರೆ ರಶ್ಮಿಕಾ ಹೇಳಿದ್ದೇನು, ನೋಡಿ..
ಸಲ್ಮಾನ್ ಖಾನ್ ಪರಿಸ್ಥಿತಿ ಡಾ ರಾಜ್‌ಕುಮಾರ್‌ಗೂ ಬಂದಿತ್ತು; ಆದ್ರೆ ಅಣ್ಣಾವ್ರು ಕೊಟ್ಟ ಪ್ರತಿಕ್ರಿಯೆ ಹೇಗಿತ್ತು?
ನನ್ನ ಅಭಿಪ್ರಾಯದಲ್ಲಿ, ನಾವು ಎಲ್ಲಿ ಬದುಕುತ್ತೇವೆಯೋ ಅಲ್ಲಿನ ಭಾಷೆಯನ್ನು ಕಲಿಯುವುದು ತುಂಬಾ ಸುಲಭ.. ಅದು ಬಹಳಷ್ಟು ಸಾರಿ ಅಗತ್ಯ ಕೂಡ ಹೌದು. ನಾವು ಬೇರೆ ಭಾಷೆಯ ಜನರು ಇರುವ ನಗರದಲ್ಲಿ ಇದ್ದಾಗ, ನಮ್ಮ ಸುತ್ತಲಿನವರು ಯಾವ ಭಾಷೆಯನ್ನು ಮಾತನಾಡುತ್ತಾರೆಯೋ ಆ ಭಾಷೆಯನ್ನು ಬೇಗ ಕಲಿತು ಮಾತನಾಡಬಹುದು, ಅದು ಸುಲಭ ಆಗುತ್ತದೆ ಕೂಡ. ನಾನು ಕರ್ನಾಟಕದಲ್ಲಿ ಹುಟ್ಟಿದವಳು, ಅಲ್ಲೇ ಬೆಳೆದವಳು. ನನಗೆ ಗೊತ್ತಿದ್ದ ಎರಡೇ ಎರಡು ಭಾಷೆ ಅಂದ್ರೆ ಕನ್ನಡ ಹಾಗೂ ಇಂಗ್ಲಿಷ್, ನಾನು ಐಸಿಎಸ್‌ಸಿನಲ್ಲಿ ಓದಿದವಳು.
ಈಗ, ಸದ್ಯ ನಾನು ಹೈದ್ರಾಬಾದ್‌ನಲ್ಲಿ ಇದ್ಧೇನೆ. ನನ್ನ ಅಸಿಸ್ಟಂಟ್ಸ್, ಸೆಕ್ಯೂರಿಟಿಸ್, ಮತ್ತು ಇಡೀ ತಂಡ ತೆಲುಗು ಭಾಷೆ ಮಾತನ್ನಾಡುತ್ತಾರೆ. ನನ್ನ ಟೀಮ್ ಜೊತೆ ಮಾತನಾಡಬೇಕು, ಅವರ ಜೊತೆ ಕಮ್ಯುನಿಕೇಟ್ ಮಾಡಬೇಕು ಎಂದರೆ, ನಾನು ತೆಲುಗು ಭಾಷೆಯನ್ನು ಕಲಿಯಲೇಬೇಕು ಹಾಗೂ ಅದರಲ್ಲಿ ಪ್ರಾವಿಣ್ಯತೆ ಪಡೆಯಲೇಬೇಕು. ಹೀಗಾಗಿ ನಾನು ಹೆಚ್ಚಾಗಿ ತೆಲುಗು ಮಾತನಾಡುತ್ತೇನೆ. ಇನ್ನು, ಈಗ ನಾನು ಕೆಲಸಕ್ಕಾಗಿ (ಸಿಕಂದರ್ ಸಿನಿಮಾ) ಮುಂಬೈಗೆ ಬಂದಿದ್ದೇನೆ. ನೀವು ನನಗೆ ಹಿಂದಿ ಭಾಷೆಯ ಡೈಲಾಗ್‌ಗಳನ್ನು ಕೊಟ್ಟರೆ ನಾನು ಅದರಲ್ಲಿ ತೊಡಗಿಸಿಕೊಂಡು ಪಕ್ಕಾ ಮಾತನ್ನಾಡಬಲ್ಲೆ' ಎಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಮೇರು ನಟ ಡಾ ರಾಜ್‌ಕುಮಾರ್ ಬಗ್ಗೆ ಹೇಳಿರೋ ಮಾತು.. ಹೀಗಾ...!?
ಜೊತೆಗೆ, 'ಒಮ್ಮೆ ನಾನು ಹಿಂದಿಯಲ್ಲೇ ಮಾತನಾಡಬೇಕು ಎಂದು ನೀವು ಬಯಸಿದರೆ ನಾನು ತಪ್ಪುತಪ್ಪಾಗಿ ಮಾತನಾಡಬಲ್ಲೆ. ಏಕೆಂದರೆ, ನಾನು ಆಗ ನಾನು ಆಡುವ ಮಾತುಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸತೊಡಗುತ್ತೇನೆ. ಆಗ ಸಹಜವಾಗಿಯೇ ಹೆಚ್ಚುಹೆಚ್ಚು ಮಿಸ್ಟೇಕ್‌ಗಳು ಆಗುತ್ತವೆ. ಒಮ್ಮೆ ನಾನು ಇಲ್ಲಿ ಮುಂಬೈನಲ್ಲೇ ಉಳಿಯಲು ನಿರ್ಧರಿಸಿದರೆ, ಆಗ ನಾನು ಹಿಂದಿಯಲ್ಲಿ ಸಂಪೂರ್ಣವಾಗಿ, ಪರ್ಫೆಕ್ಟ್ ಆಗಿ ಮಾತನಾಡಬಲ್ಲೆ' ಎಂದಿದ್ದಾರೆ.
ಅದಕ್ಕೆ ಅಲ್ಲೇ ರಶ್ಮಿಕಾ ಪಕ್ಕದಲ್ಲಿರುವ ನಟ ಸಲ್ಮಾನ್ ಖಾನ್ ಅವರು 'ನೋ, ಅದು ಸಾಧ್ಯ ಆಗೋದಿಲ್ಲ, ಯಾಕಂದ್ರೆ, ಇಲ್ಲಿ ನಿಮ್ಮ ಅಕ್ಕಪಕ್ಕ ಇರೋ ಸ್ಟಾರ್ ಎಲ್ರೂ ಇಂಗ್ಲಿಷ್ ಮಾತನಾಡೋರೇ ಇರೋದು..' ಎಂದಿದ್ದಾರೆ, ನಟ ಸಲ್ಮಾನ್ ಕಾನ್ ಮಾತನ್ನು ಒಪ್ಪಿದ ನಟಿ ರಶ್ಮಿಕಾ ಮಂದಣ್ಣ ಅವರು, 'ಹೌದು, ನೀವು ಹೇಳೋದು ಕೂಡ ಸರಿಯಾಗಿದೆ, ಇಲ್ಲಿ ನನ್ನ ಸುತ್ತಮುತ್ತ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ ಎಂದಿದ್ದಾರೆ. ಒಟ್ಟಿನಲ್ಲಿ ಇದೀಗ ಮುಂಬೈನಲ್ಲಿ ಕುಳಿತು ನಟಿ ರಶ್ಮಿಕಾ ಅವರು 'ನಾನು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದು, ನನಗೆ ಮಾತನಾಡಲು ಕನ್ನಡ ಹಾಗೂ ಇಂಗ್ಲಿಷ್ ಎರಡೇ ಭಾಷೆ ಬರುತ್ತಿತ್ತು' ಎಂದು ಹೇಳಿರುವುದು ಸುಂಟರಗಾಳಿಯಂತೆ ಸುದ್ದಿ ಆಗಬೇಕಿದೆ!
ಭಾರತದಲ್ಲೇ ಇಲ್ಲ ಚಂದನ್ ಶೆಟ್ಟಿ, ಎಲ್ಲಿಗೆ ಹೋಗಿದಾರೆ, ಹೋಗಿ ಅಲ್ಲೇನ್ ಮಾಡ್ತಿದಾರೆ?
