ಮುಂಬೈ(ಆ.15): ಇತ್ತೀಚೆಗಷ್ಟೇ ಶ್ವಾಸಕೋಶದ ಕ್ಯಾನ್ಸರ್‌ ಪತ್ತೆಯಾಗಿ ಹೆಚ್ಚಿನ ಚಿಕಿತ್ಸೆಗೆ ಅಮೆರಿಕಕ್ಕೆ ತೆರಳಲು ಸಜ್ಜಾಗಿರುವ ನಟ ಸಂಜಯ್‌ ದತ್‌ ಮೇಲೆ ಕನ್ನಡ, ಹಿಂದಿ ಚಿತ್ರರಂಗ ಸುಮಾರು 735 ಕೋಟಿ ರು. ಹೂಡಿಕೆ ಮಾಡಿದೆ.

ನಟ ಸಂಜಯ್‌ ದತ್‌ಗೆ ಶ್ವಾಸಕೋಶ ಕ್ಯಾನ್ಸರ್‌!

ಕನ್ನಡದ ಕೆಜಿಎಫ್‌- 2 ಸೇರಿದಂತೆ ಹಿಂದಿಯ ಹಲವು ಚಿತ್ರಗಳಲ್ಲಿ ದತ್‌ ಅಭಿನಯಿಸುತ್ತಿದ್ದು, ಅವುಗಳೆಲ್ಲಾ ಚಿತ್ರೀಕರಣದ ವಿವಿಧ ಹಂತಗಳಲ್ಲಿವೆ. ಸದ್ಯ ದತ್‌ ಯಾವುದೇ ಚಿತ್ರದಲ್ಲಿ ಅಭಿನಯಿಸುವ ಸ್ಥಿತಿಯಲ್ಲಿಲ್ಲ. ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡು ಮರಳಿದ ಬಳಿಕವಷ್ಟೇ ಚಿತ್ರೀಕರಣ ಮತ್ತು ಬಿಡುಗಡೆ ಸಾಧ್ಯ. ಹೀಗಾಗಿ ಕೆಲ ಚಿತ್ರಗಳು ತಕ್ಷಣಕ್ಕೆ ಬಿಡುಗಡೆಯಾಗುವ ಸಾಧ್ಯತೆ ದೂರವಾಗಿದೆ.

ಸಡಕ್ 2 ಟ್ರೈಲರ್‌ಗೆ ಲೈಕ್ಸ್‌ಗಿಂತ ಡಿಸ್‌ಲೈಕ್‌ ಜಾಸ್ತಿ, ಆಲಿಯಾ ಅಭಿನಯದ ರಾಜಮೌಳಿಯ RRR ಗತಿ ಏನು..?

ಈ ಪೈಕಿ ಕನ್ನಡದ ಕೆಜಿಎಫ್‌ ಭಾಗ 2ರಲ್ಲಿ ದತ್‌ ಅಭಿನಯದ 3 ದಿನದ ಚಿತ್ರೀಕರಣ ಬಾಕಿ ಇದೆ. ಶಂಶೇರ್‌ ಹಿಂದಿ ಚಿತ್ರದ 6 ದಿನ ಚಿತ್ರೀಕರಣ ಬಾಕಿ ಉಳಿದಿದೆ. ಪೃಥ್ವಿರಾಜ್‌ ಚಿತ್ರದ ಬಹುತೇಕ ಭಾಗ ಬಾಕಿ ಉಳಿದಿದೆ. ಉಳಿದಂತೆ ಸಡಕ್‌ 2, ಭುಜ್‌: ದ ಪ್ರೈಡ್‌ ಆಫ್‌ ಇಂಡಿಯಾ, ತೋರ್‌ಬಾಜ್‌ ಬಿಡುಗಡೆಗೆ ಸಜ್ಜಾಗಿದೆ. ಚಿಕಿತ್ಸೆಗೆ ಹೋಗುವ ಮುನ್ನ ‘ಸಡಕ್‌ 2’ ಡಬ್ಬಿಂಗ್‌ ಪೂರ್ಣಗೊಳಿಸಿಕೊಡುವುದಾಗಿ ದತ್‌ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.