ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಭಾರೀ ಟ್ರೋಲ್‌ಗೊಳಗಾಗುತ್ತಿರುವ ನಟಿ ಆಲಿಯಾ ಭಟ್ ಅಭಿನಯದ ಸಡಕ್ 2 ಸಿನಿಮಾ ಟ್ರೈಲರ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ RRR ಸಿನಿಮಾಗೆ ಭಯ ಶುರುವಾಗಿದೆ.

350-400 ಕೋಟಿ ಬಜೆಟ್‌ನ ಬಾಹುಬಲಿ ನಿರ್ದೇಶಕ ಎಸ್ಎಸ್‌ ರಾಜಮೌಳಿ ನಿರ್ದೇಶನದ RRR ಸಿನಿಮಾದಲ್ಲಿ ಆಲಿಯಾ ಅಭಿನಯಿಸಿದ್ದಾರೆ. ಇದೀಗ ಈ ಸಿನಿಮಾವೂ ಫ್ಲಾಪ್ ಆಗುವ ಭಯ ಚಿತ್ರತಂಡದಲ್ಲಿದೆ.

ಅಮಿತಾಬ್ - ಆಮೀರ್ ಖಾನ್ ಇವರಾರೂ ಮಾಂಸ ಮುಟ್ಟೋಲ್ಲ ಗೊತ್ತಾ?

ಸುಶಾಂತ್ ಸಾವಿಗೆ ಸಂಬಂಧಿಸಿ ಆಲಿಯಾ ಏನೂ ಮಾಡದಿದ್ದರೂ, ಟಾಕ್‌ ಶೋ ಒಂದರಲ್ಲಿ ಸುಶಾಂತ್‌ನ್ನು ಕೀಳಾಗಿ ಕಂಡಿದ್ದರು. ಇದಕ್ಕೇ ಸುಶಾಂತ್ ಅಭಿಮಾನಿಗಳು ಆಲಿಯಾಳನ್ನು ವಿರೋಧಿಸುತ್ತಿದ್ದಾರೆ.

ಮಹೇಶ್ ಭಟ್, ಆಲಿಯಾ ಚಿತ್ರ ಸಡಕ್-2ಗೆ ವಿರೋಧ, ಟ್ರೇಲರ್‌ಗೆ ನೆಟ್ಟಿಗರ ಡಿಸ್‌ಲೈಕ್

ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿಗೆ ಮಹೇಶ್ ಭಟ್ ಬೆಂಬಲವಿರುವುದು ಕೂಡಾ ಫ್ಯಾನ್ಸ್ ಕೋಪಕ್ಕೆ ಕಾರಣ. ಇವೆಲ್ಲದ ಪರಿಣಾಮ ಆಲಿಯಾ ಭಟ್‌ಗೆ ವಿರೋಧಿಗಳ ಸಂಖ್ಯೆ ಹೆಚ್ಚುತ್ತಿದೆ.

ಸಲ್ಮಾನ್- ಆಲಿಯಾ.. ಬಾಲಿವುಡ್ ಸೆಲೆಬ್ರಿಟಿಗಳಿಗೆ ನಿರ್ದೇಶಕರ ದುಬಾರಿ ಉಡುಗೊರೆ

ಫ್ಯಾನ್ಸ್‌ಗಳ ಕೋಪ ಯಾವ ಮಟ್ಟಿಗಿದೆ ಎಂದರೆ ಆಲಿಯಾ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಕಮೆಂಟ್ ಸೆಕ್ಷನ್ ಡಿಸೇಬಲ್ ಮಾಡುತ್ತಿದ್ದಾರೆ. ಈ ಮೂಲಕ ಯಾರೂ ತಮ್ಮ ಬಗ್ಗೆ ಕಮೆಂಟ್ ಮಾಡದಂತೆ ಜಾಗೃತೆ ವಹಿಸಿದ್ದಾರೆ. ಇನ್ನು ಬಹು ನಿರೀಕ್ಷಿತ ಸಡಕ್ 2 ಸಿನಿಮಾ ಲೈಕ್‌ಗಳಿಗಿಂತ ಡಿಸ್‌ಲೈಕ್‌ ಜಾಸ್ತಿ ಪಡೆಯುತ್ತಿದೆ. ಸಾವಿರಗಳಲ್ಲಿ ಲೈಕ್ಸ್ ಇದ್ದರೆ, ಡಿಸ್‌ಲೈಕ್‌ ಲಕ್ಷಗಳಲ್ಲಿದೆ.

ಆಲಿಯಾ ಭಟ್ ಆಯ್ತು ಈಗ ಪೂಜಾಭಟ್; ಸಡಕ್-2 ಲುಕ್‌ನಿಂದ ಸಹೋದರಿಯರು ಟ್ರೋಲ್!

ಸಡಕ್ 2 ಸಿನಿಮಾ ಟ್ರೈಲರ್ ಸುಮಾರು 4 ಮಿಲಿಯನ್‌ನಷ್ಟು ಡಿಸ್‌ಲೈಕ್‌ಗಳನ್ನು ಪಡೆದಿದೆ. ಇನ್ನು ಕೆಲವೇ ಸಾವಿರ ಲೈಕ್ಸ್ ಬಂದಿದೆ. ಸಾಮಾನ್ಯ ಜ್ಞಾನಕ್ಕಾಗಿ ಆಲಿಯಾ ಟ್ರೋಲ್‌ಗೊಳಗಾಗಿದ್ದರೂ, ಯಾವುತ್ತೂ ಈ ರೀತಿ ವಿರೋಧ ಅನುಭವಿಸಿರಲಿಲ್ಲ.

ಸುಶಾಂತ್‌ ಸಾವಿನ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಆಲಿಯಾ ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಅನುಭವಿಸಲಿದ್ದಾರೆ ಎನ್ನಲಾಗುತ್ತಿದೆ. ಆಕೆಯ ಮುಂದಿನ ಸಿನಿಮಾಗಳಿಗೂ ಇದೇ ವಿರೋಧದ ಭೀತಿ ಎದುರಾಗಿದೆ.

ಬ್ಯಾಡ್ ಕಮೆಂಟ್ ಸುರಿಮಳೆ, ಸೋಶಿಯಲ್ ಮೀಡಿಯಾದಿಂದ ಕಾಲ್ಕಿತ್ತ ಆಲಿಯಾ ಅಮ್ಮ

ರಾಜಮೌಳಿ ನಿರ್ದೇಶನದ RRR ಸಿನಿಮಾ ತಂಡಕ್ಕೆ ಈಗ ಆತಂಕ ಎದುರಾಗಿದೆ. ಕಾರಣ ಆಲಿಯಾ ಇದರಲ್ಲಿ ನಟಿಸಿದ್ದಾರೆ. ಆಲಿಯಾಳಿಗೆ ದೇಶಾದ್ಯಂತ ಅಭಿಮಾನಿಗಳಿದ್ದು, ವಿಶೇಷವಾಗಿ ಬಾಲಿವುಡ್ ಸಿನಿಪ್ರೇಮಿಗಳನ್ನು ಸೆಳೆಯಬಹುದು ಎಂಬ ಉದ್ದೇಶದಲ್ಲಿ ಆಲಿಯಾಳನ್ನು ಸಿನಿಮಾ ತಂಡ ಆಯ್ಕೆ ಮಾಡಿತ್ತು. ಆದರೆ ಪ್ರಸ್ತು ಬೆಳವಣಿಗೆ RRR ಸಿನಿಮಾ ತಂಡದ ಎಲ್ಲ ಪ್ಲಾನ್ ತಲೆಗೆಳಗೆ ಮಾಡುವಂತಿದೆ.