ಬೆಂಗಳೂರು[ಜೂ. 26]  ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಯಶ್ -ರಾಧಿಕಾ ದಂಪತಿ ತಮ್ಮ ಮಗುವಿನ ಮೂಲಕವೇ ಹೇಳಿಸಿದ್ದಾರೆ.  ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ ಎಂದು ಐರಾ ಮೂಲಕವೇ ಪೋಸ್ಟ್ ಮಾಡಿಸಿದ್ದಾರೆ.  ರಾಧಿಕಾ ಪಂಡಿತ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ರಾಕಿಂಗ್ ಸ್ಟಾರ್ ದಂಪತಿ ಎರಡನೇ ಮಗು ಹೊಂದಲಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮಗು ಐರಾ ಪೋಟೋಗಳನ್ನು ಒಳಗೊಂಡ ವಿಡಿಯೋ ಹಂಚಿಕೊಂಡಿದ್ದು ತಮ್ಮ/ತಂಗಿ ಆಗಮನವನ್ನು ಮಗುವಿನ ಹತ್ತಿರವೇ ಹೇಳಿಸಿದ್ದಾರೆ. ನಮ್ಮ ಕುಟುಂಬದ ಮೇಲೆ ಅಭಿಮಾನಿಗಳ ಹಾರೈಕೆ ಇರಲಿ, ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ.

ಯಶ್-ರಾಧಿಕಾ ಮಗಳ ನಾಮಕರಣ ಹೇಗಿತ್ತು? ಚಿತ್ರಲೋಕ

ಕಳೆದ ಭಾನುವಾರ ತಮ್ಮ ಮೊದಲ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದರು. ಮೊದಲನೆ ಮಗುವಿಗೆ 7 ತಿಂಗಳು ತುಂಬುತ್ತಿದ್ದು ಇನ್ನು 5 ತಿಂಗಳ ಅವಧಿಯಲ್ಲಿ ಮತ್ತೊಂದು ಮಗು ಯಶ್ ಕುಟುಂಬ ಸೇರಿಕೊಳ್ಳಲಿದೆ.

ರಾಧಿಕಾ-ಯಶ್ ಮಗಳು 'AYRA'; ಏನೀ ಹೆಸರಿನ ಅರ್ಥ?

 

 
 
 
 
 
 
 
 
 
 
 
 
 

Round 2.. 🤗 #radhikapandit #nimmaRP

A post shared by Radhika Pandit (@iamradhikapandit) on Jun 26, 2019 at 3:57am PDT