ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತೀರಾ ಅಪರೂಪ ಎನ್ನುವಂತೆ ರಾಜಕೀಯದ ವಿಚಾರವಾಗಿ ಮಾತನಾಡಿದ್ದು, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ರಾಜಕೀಯಕ್ಕೆ ಬಹುಪರಾಕ್‌ ಹೇಳಿದ್ದಾರೆ. 

ಮುಂಬೈ (ಮೇ.15): ಕರ್ನಾಟಕದ ನಟಿ, ಪ್ರಸ್ತುತ ಟಾಲಿವುಡ್‌-ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷದ ಅಭಿವೃದ್ಧಿ ರಾಜಕೀಯಕ್ಕೆ ಬಹುಪರಾಕ್‌ ಎಂದಿದ್ದಾರೆ. ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಗೊಂಡಿದ್ದ ಅಟಲ್‌ ಬಿಹಾರಿ ವಾಜಪೇಯಿ ಸೇವ್ರಿ-ನಹಾ ಶೇವಾ ಅಟಲ್‌ ಸೇತು ಕುರಿತಾಗಿ ಮಾತನಾಡುವ ವೇಳೆ, ಈ ಎಕ್ಸ್‌ಪ್ರೆಸ್‌ವೇ ಮುಂಬೈನ ಸಾರಿಗೆ ನೆಟ್‌ವರ್ಕ್‌ನಲ್ಲಿ ಗೇಮ್‌ ಚೇಂಜರ್‌ ಆಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಶ್ಲಾಘಿಸಿದ ನಟಿ, ಇವರ ಇಟಿಯಲ್ಲಿ ಭಾರತ ಎಲ್ಲೂ ನಿಲ್ಲುತ್ತಿಲ್ಲ ಎಂದು ಹೇಳಿದ್ದಾರೆ.

'ಭಾರತ ಈಗ ಸ್ಮಾರ್ಟೆಸ್ಟ್‌ ದೇಶ: ಅಟಲ್ ಸೇತು ಬಗ್ಗೆ ಮಾತನಾಡುವ ವೇಳೆ "ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಈಗ ಮಾಡಬಹುದು. ನೀವಿದನ್ನು ನಂಬೋಕು ಸಾಧ್ಯವಿಲ್ಲ. ಈ ರೀತಿಯಲ್ಲಿ ಏನಾದರೂ ಸಾಧ್ಯವಾಗಬಹುದು ಎಂದು ಯಾರೂ ಭಾವಿಸಿರಲಿಲ್ಲ. ಇಂದು ನವಿ ಮುಂಬೈನಿಂದ ಮುಂಬೈಗೆ ಮತ್ತು ಗೋವಾದಿಂದ ಮುಂಬೈಗೆ ಮತ್ತು ಬೆಂಗಳೂರಿನಿಂದ ಮುಂಬೈಗೆ.. ಎಲ್ಲಾ ಪ್ರಯಾಣಗಳು ತುಂಬಾ ಸುಲಭವಾಗಿ ಮತ್ತು ಅಂತಹ ಅದ್ಭುತ ಮೂಲಸೌಕರ್ಯಗಳೊಂದಿಗೆ ನಡೆದಾಗ ನಿಜಕ್ಕೂ ನನಗೆ ಹೆಮ್ಮೆ ಅನಿಸುತ್ತದೆ' ಎಂದು ರಶ್ಮಿಕಾ ಹೇಳಿದ್ದಾರೆ.

ಬಹುಶಃ ನಾನೀಗ ಕನಿಷ್ಠ ಯೋಚನೆ ಮಾಡೋದು ಏನೆಂದರೆ, ಭಾರತ ಈಗ ಎಲ್ಲಿಯೂ ನಿಲ್ಲುತ್ತಿಲ್ಲ. ಈಗ ದೇಶದ ಬೆಳವಣಿಗೆಯನ್ನು ನೋಡಿ. ಕಳೆದ 10 ವರ್ಷಗಳಲ್ಲಿ ದೇಶವು ಹೇಗೆ ಬೆಳೆದಿದೆ ಎನ್ನುವುದನ್ನು ನೋಡಿದರೆ, ಅದ್ಭುತ ಎನಿಸುತ್ತದೆ. ನಮ್ಮ ದೇಶದಲ್ಲಿ ಮೂಲಸೌಕರ್ಯ, ಯೋಜನೆ, ರಸ್ತೆ ಯೋಜನೆ , ಬಹಳ ಅದ್ಭುತವಾಗಿ ನಡೆದಿದೆ. ಇದು ನಮ್ಮ ಸಮಯ ಎಂದು ನಾನು ಭಾವಿಸುತ್ತೇನೆ. ಈ 20 ಕಿಲೋಮೀಟರ್‌ ದೂರವನ್ನು ಕೇವಲ ಏಳೇ ವರ್ಷಗಳಲ್ಲಿ ನಿರ್ಮಾಣ ಮಾಡಲಾಗಿದೆ ಅನ್ನೋದನ್ನು ಕೇಳಿ ಅದ್ಭುತ ಎನಿಸಿತು. ಈ ಸೇತುವೆಯನ್ನೊಮ್ಮೆ ನೋಡಿ. ಇದನ್ನು ಮೊದಲ ಬಾರಿಗೆ ನೋಡಿದಾಗ ನಾನು ಮೂಕವಿಸ್ಮಿತಳಾಗಿದ್ದೆ. ಭಾರತ ಈಗ ಸ್ಮಾರ್ಟೆಸ್ಟ್‌ ದೇಶ ಎಂದು ಹೇಳಲು ಬಯಸುತ್ತೇನೆ' ಎಂದು ಅವರು ತಿಳಿಸಿದ್ದಾರೆ.

ಭಾರತ ಸರಿಯಾದ ಹಾದಿಯಲ್ಲಿದೆ: ಯುವ ಭಾರತ ಎಂಥಾ ವೇಗದಲ್ಲಿ ಬೆಳೆಯುತ್ತಿದೆ ನೋಡಿ ಎಂದು ರಶ್ಮಿಕಾ ಹೇಳಿದ್ದಾರೆ. ಇಂದಿನ ಯುವಕರು ಬಹಳ ಜವಾಬ್ದಾರಿಯುತರಾಗಿದ್ದಾರೆ. ನೀವು ಏನು ಹೇಳಿದರೂ ಅದರಿಂದ ಪ್ರಭಾವಿತರಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಬದಲಾವಣೆಗಳನ್ನು ಜನರು ನಿಜವಾಗಿಯೂ ನೋಡುತ್ತಿದ್ದಾರೆ. ಇದರಿಂದಾಗಿಯೇ ಜನರು ತುಂಬಾ ಜವಾಬ್ದಾರಿಯುತರಾಗಿದ್ದಾರೆ ಮತ್ತು ದೇಶವು 'ಸರಿಯಾದ ದಾರಿಯಲ್ಲಿ ಸಾಗುತ್ತಿದೆ' ಎಂದು ಹೇಳಿದ್ದಾರೆ.

ಭಾರತದ ಪ್ರಧಾನಿಗೆ ಕಾರಿಲ್ಲ, ಮನೆ ಇಲ್ಲ, 3 ಕೋಟಿ ಆಸ್ತಿ!

ಅಲ್ಲು ಅರ್ಜುನ್ ಜೊತೆಯಾಗಿ ನಟಿಸಿರುವ ಪುಷ್ಪ 2: ದಿ ರೂಲ್ ಬಿಡುಗಡೆಗೆ ರಶ್ಮಿಕಾ ಸಜ್ಜಾಗುತ್ತಿದ್ದಾರೆ. ಅವರು 2023 ರ ಬ್ಲಾಕ್ಬಸ್ಟರ್ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಕಾಣಿಸಿಕೊಂಡಿದ್ದರು.

'ಒಬ್ಳೇ ಇರೋಕೆ ನಂಗಾಗಲ್ಲ, ಮತ್ತೊಬ್ಬ ಸಂಗಾತಿ ಬೇಕು' ಕನ್ನಡ ನಟಿಯ ಶಾಕಿಂಗ್‌ ಹೇಳಿಕೆ!

Scroll to load tweet…