ಇತ್ತೀಚಿನ ದಿನದದಲ್ಲಿ ಅತಿ ಹೆಚ್ಚಿನ ಟ್ರೋಲ್ ಗೆ ಗುರಿಯಾಗುತ್ತಿರುವ  ಸೆಲೆಬ್ರಿಟಿ ಯಾರಾದರೂ ಇದ್ದರೆ ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಮೊದಲನೇ ಸ್ಥಾನ. ಅವರು ಧರಿಸುವ ವೇಷ ಭೂಷಣಗಳು ಟ್ರೋಲ್ ಗೆ ಆಹಾರವಾಗುತ್ತಲೇ ಇವೆ. ಈ ಬಾರಿ ಸೀರೆ ಸರದಿ.

ಗೆಳೆಯ ನಿಕ್ ಅವರನ್ನು ಮದುವೆಯಾದ ಮೇಲೆ ಪ್ರಿಯಾಂಕಾ ಅಂತಾರಾಷ್ಟ್ರೀಯ ಸಿನಿಮಾ ಸಮಾರಂಭಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ತಮ್ಮ ಇಸ್ಟಾಗ್ರ್ಯಾಮ್ ಪೇಜ್ ನಲ್ಲಿ ಹಂಚಿಕೊಂಡಿರುವ ಪೋಟೋ ಒಂದಕ್ಕೆ ಟ್ರೋಲ್ ಗೆ ಗುರಿಯಾಗಿದ್ದಲ್ಲದೆ ಬಗೆ ಬಗೆಯ ಕಮೆಂಟ್ ಎದುರಿಸಬೇಕಾಗಿ ಬಂದಿದೆ.

ಕೈ ಎತ್ತಿ ಪೋಸ್ ಕೊಟ್ಟ ಮಲೈಕಾಗೆ ಕಾಟ ಶುರುವಾಯ್ತು!

ನಾನು ನನ್ನ ಡಿಸೈನರ್ ಗೆ ಮೊದಲು ಧನ್ಯವಾದ ಹೇಳುತ್ತೇನೆ. ಇಡೀ ವಿಶ್ವಕ್ಕೆ ಸೀರೆಯ ಸೌಂದರ್ಯ ಬರುವ ಜುಲೈನಲ್ಲಿ ಗೊತ್ತಾಗಲಿದೆ. ಎಂದು ಬರೆದುಕೊಂಡು ಹಂಚಿಕೊಂಡಿರುವ ಪೋಟೋ ಸಖತ್ ಟ್ರೋಲ್ ಆಗುತ್ತಿದ್ದು ಈ ಪೋಟೋದಲ್ಲಿ ಸೀರೆ ಎಲ್ಲಿದೆ? ನೀವು ಭಾರತೀಯ ಸಂಸ್ಕೃತಿಗೆ ಅಪಮಾನ ಮಾಡಿದ್ದೀರಾ ಎಂದು ಕಮೆಂಟಿಗರು ಆಕ್ರೋಶ ವ್ರಕ್ತಪಡಿಸಿದ್ದಾರೆ.

View post on Instagram
View post on Instagram