Asianet Suvarna News Asianet Suvarna News

ತಮಿಳುನಾಡಿನಲ್ಲಿ ದಳಪತಿ ವಿಜಯ್‌ ವಿರುದ್ಧ ಸ್ಪರ್ಧೆ ಮಾಡೋಕೆ ರೆಡಿ ಎಂದ ಕ್ರೇಜಿಸ್ಟಾರ್‌ ಹೀರೋಯಿನ್‌!


ನಟ ನಟಿಯರು ರಾಜಕೀಯಕ್ಕೆ ಇಳಿಯೋದು ಸಾಮಾನ್ಯ. ಅದರಲ್ಲೂ  ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಈ ಸಂಪ್ರದಾಯ ಹೆಚ್ಚು. ಇತ್ತೀಚೆಗೆ ನಟ ದಳಪತಿ ವಿಜಯ್‌ ತಮ್ಮ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದರು.
 

Popular Heroine Namitha  Dares to Contest Against Vijay Thalapathy in Elections san
Author
First Published Apr 13, 2024, 4:15 PM IST

ನವದೆಹಲಿ (ಏ.13): ಅಚ್ಚರಿಯ ಬೆಳವಣಿಗೆಯಲ್ಲಿ ಜನಪ್ರಿಯ ತಮಿಳು ನಟಿ ನಮಿತಾ ಅವರು 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ದಳಪತಿ ವಿಜಯ್ ವಿರುದ್ಧ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.  ಪ್ರಸ್ತುತ ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯೆಯಾಗಿರುವ ನಮಿತಾ ಅವರು ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ವಿಶೇಷವಾಗಿ ನೀಲಗಿರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಮುರುಗನ್ ಅವರನ್ನು ಬೆಂಬಲಿಸುವತ್ತ ಗಮನಹರಿಸಿದ್ದಾರೆ.ನಮಿತಾ ಮತ್ತು ವಿಜಯ್ ನಡುವಿನ ಸಂಭಾವ್ಯ ರಾಜಕೀಯ ಹಣಾಹಣಿ  ತಮಿಳುನಾಡು ರಾಜ್ಯದ ರಾಜಕೀಯ ವಲಯಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ವಿಜಯ್ ಇತ್ತೀಚೆಗೆ ತಮ್ಮ ರಾಜಕೀಯ ಪಕ್ಷವಾದ 'ತಮಿಳಗ ವೆಟ್ರಿಕ್ ಕಳಗಂ' ಅನ್ನು ಪ್ರಾರಂಭಿಸಿದರು ಮತ್ತು ಪಕ್ಷವು 2026 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ಘೋಷಣೆ ಮಾಡಿದ್ದಾರೆ.

ರಾಜಕೀಯದಲ್ಲಿ "ಬುದ್ಧಿವಂತ ಎದುರಾಳಿಯ" ವಿರುದ್ಧ ಸ್ಪರ್ಧಿಸಬೇಕು ಎನ್ನುವ ವಿಚಾರವನ್ನು ನಾನು ನಂಬುತ್ತೇನೆ ಎಂದು ನಮಿತಾ ಹೇಳಿದ್ದಾರೆ.  ತಾವು ದಳಪತಿ ವಿಜಯ್‌ ಅವರನ್ನು ಬಲಿಷ್ಠ ಸ್ಪರ್ಧಿಯಾಗಿಯೇ ನೋಡುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ತಮಿಳುನಾಡು ಸಿನಿಮಾರಂಗದ ಇಬ್ಬರು ಪ್ರಮುಖ ತಾರೆಯರ ನಡುವಿನ ಸಂಭಾವ್ಯ ಹೋರಾಟದ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ.

ಜನಪ್ರಿಯ ನಟ-ರಾಜಕಾರಣಿಯ ವಿರುದ್ಧ ನಮಿತಾ ಅವರ ಯಶಸ್ಸಿನ ಸಾಧ್ಯತೆಗಳ ಬಗ್ಗೆ ಕೆಲವು ಅಭಿಮಾನಿಗಳು ಸಂದೇಹ ವ್ಯಕ್ತಪಡಿಸಿದ್ದರೆ, ತಮಿಳುನಾಡಿನಲ್ಲಿ ನಟಿಯ ಬಲವಾದ ಅಭಿಮಾನಿಗಳು ಮತ್ತು ಪ್ರಸ್ತುತ ಚುನಾವಣಾ ಪ್ರಚಾರದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ನಮಿತಾ ಅವರ ವರ್ಚಸ್ಸು ಇನ್ನಷ್ಟು ವೃದ್ಧಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮಿಳುನಾಡು ರಾಜಕೀಯ ನೋಡೋದಾದರೆ, ಈಗಾಗಲೇ ಕಮಲ್‌ ಹಾಸನ್‌ ಹಾಗೂ ಉದಯನಿಧಿ ಸ್ಟ್ಯಾಲಿನ್‌ ರಾಜಕೀಯದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇದೇ ದಾರಿಯಲ್ಲಿ ಹೋಗಿರುವ ವಿಜಯ್‌, ಈಗಾಗಲೇ ತಮ್ಮ ರಾಜಕೀಯ ಪಕ್ಷ ಘೋಷಣೆ ಮಾಡಿದ್ದು, ಲೋಕಸಭೆಯಲ್ಲಿ ತಾವು ಸ್ಪರ್ಧೆ ಮಾಡುತ್ತಿಲ್ಲ ಎಂದಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ತಿಳಿಸಿದ್ದರು.

Thalapathy Vijay: ದಳಪತಿ ವಿಜಯ್‌ ಕೊನೆ ಸಿನಿಮಾ ಸಂಭಾವನೆ ಎಷ್ಟು ಗೊತ್ತಾ ? ರಜನಿಯನ್ನೇ ಹಿಂದಿಕ್ಕಿದ ದಳಪತಿ!

ಇನ್ನು ನಟ ವಿಜಯ್‌ ಅವರ ಅಭಿಮಾನಿಗಳು ನಮಿತಾ ಅವರು ದಳಪತಿ  ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡಿದರೆ, ಠೇವಣಿಯೇ ಸಿಗೋದಿಲ್ಲ. ಚುನಾವಣೆಗೂ ಮುನ್ನವೇ ಸೋಲು ನಿಮಗೆ ಕಟ್ಟಿಟ್ಟ ಬುತ್ತಿ ಎಂದು ಕಾಮೆಂಟ್‌ ಮಾಡಿದ್ದಾರೆ.

Breaking: ರಾಜಕೀಯಕ್ಕೆ ಇಳಿದ ದಳಪತಿ ವಿಜಯ್‌, 'ತಮಿಳಗ ವೆಟ್ರಿ ಕಳಗಂ' ಪಕ್ಷ ಘೋಷಣೆ!

Follow Us:
Download App:
  • android
  • ios