Asianet Suvarna News Asianet Suvarna News

Kannada Rider Piracy : ತ​ಮಿಳು ವೆಬ್‌​ಸೈಟ್‌​ಲ್ಲಿ ಲಿಂಕ್‌ ಕಾಪಿ, ನಟ ನಿಖಿಲ್‌ ಅ​ಸ​ಮಾ​ಧಾನ

  • ಪೈರಸಿಯಿಂದ ಚಿತ್ರೋದ್ಯಮದ ಮೇಲೆ ಗಂಭೀರ ಪರಿಣಾಮ
  •  ತ​ಮಿಳು ವೆಬ್‌​ಸೈಟ್‌​ಲ್ಲಿ ಲಿಂಕ್‌ ಕಾಪಿ :  ನಿಖಿಲ್‌ ಅ​ಸ​ಮಾ​ಧಾನ
  • ಸಿನಿಮಾ ನಿರ್ಮಾಣ ಸುಲಭದ ಕೆಲಸವಲ್ಲ: ನಿಖಿಲ್‌
     
Nikhil Kumaraswamy Rider Movie Leaked In Tamil website  snr
Author
Bengaluru, First Published Dec 27, 2021, 10:53 AM IST

  ಮಂಡ್ಯ (ಡಿ.27): ಕ​ಷ್ಟ ​ಪಟ್ಟು ಸಾಲ (Loan) ಮಾಡಿ ಬಡ್ಡಿ ಕ​ಟ್ಟಿ​ಕೊಂಡು ಸಿ​ನಿಮಾ (Movie) ಮಾ​ಡು​ತ್ತಿ​ದ್ದೇವೆ. ಆ​ದರೆ ಕೆ​ಲವು ಹ್ಯಾ​ಕ​ರ್‍ಸ್ಗಳು ಪೈರಸಿ ಮಾಡು​ತ್ತಿದ್ದಾರೆ. ಇ​ದ​ರಿಂದ ಚಿ​ತ್ರೋ​ದ್ಯ​ಮದ ಮೇಲೆ ಗಂಭೀರ ಪ​ರಿ​ಣಾಮ ಬೀ​ರು​ತ್ತಿದೆ ಎಂದು ಚಿ​ತ್ರ​ನಟ ನಿಖಿಲ್‌ ​ಕು​ಮಾ​ರ​ಸ್ವಾಮಿ (Nikhil Kumaraswamy) ಅ​ಸ​ಮಾ​ಧಾನ ವ್ಯ​ಕ್ತ​ಪ​ಡಿ​ಸಿ​ದರು.  ನ​ಗ​ರದ ಗು​ರುಶ್ರೀ ಚಿ​ತ್ರ​ಮಂದಿ​ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ​ಮಿಳು ವೆಬ್‌​ಸೈಟ್‌​ನಲ್ಲಿ ನಮ್ಮ ಸಿ​ನಿಮಾ ಲಿಂಕ್‌ ಕಾಪಿ ಮಾಡಿ ಪ್ರ​ದರ್ಶನ ಮಾ​ಡು​ತ್ತಿ​ದ್ದಾರೆ ಎಂದು ಕೇಳಿ ಮ​ನ​ಸ್ಸಿಗೆ ತುಂಬಾ ಬೇ​ಜಾ​ರಾ​ಗಿದೆ. ಚಿತ್ರ ನಿರ್ಮಾಣ ಮಾ​ಡು​ವು​ದು ಸು​ಲ​ಭದ ಕೆ​ಲ​ಸ​ವಲ್ಲ. ಕ​ಳೆದ ಎ​ರಡು ವರ್ಷಗ​ಳಿಂದಲೂ ನಾವು ಸಾ​ಕಷ್ಟು ತೊಂದ​ರೆ​ಗ​ಳನ್ನು ಅ​ನು​ಭ​ವಿ​ಸಿ​ದ್ದೇವೆ. ಚಿತ್ರ ನಿರ್ಮಾಪ​ಕರು ಕೋ​ಟಿ ​ಗ​ಟ್ಟಲೆ ಹಣ ಹೂ​ಡಿಕೆ ಮಾಡಿ ಬಡ್ಡಿ ಕ​ಟ್ಟು​ತ್ತಿ​ದ್ದಾರೆ. ಇ​ದ​ರಿಂದ ಅ​ವ​ರಿಗೂ ಸಂಕಷ್ಟ ಎ​ದು​ರಾ​ಗಿದೆ. ಇಂತಹ ಕೆ​ಲ​ಸ​ವನ್ನು ಯಾರೂ ಮಾ​ಡ​ಬಾ​ರದು ಎಂದು ಹೇ​ಳಿ​ದರು.

ಫೈ​ರಸಿ ಆ​ಗ​ದಂತೆ ಎಲ್ಲಾ ರೀ​ತಿಯ ಮುಂಜಾ​ಗ್ರತಾ ಕ್ರ​ಮ​ಗ​ಳನ್ನೂ ಕೈ​ಗೊಂಡಿ​ದ್ದೆವು. ಆ​ದರೂ ಕೆ​ಲವು ಹ್ಯಾ​ಕ​ರ್‍ಸ್ಗಳು ದು​ರು​ದ್ದೇಶ ಇ​ಟ್ಟು​ಕೊಂಡು  ಪ್ರ​ಯ​ತ್ನಕ್ಕೆ ಕೈ ಹಾ​ಕು​ತ್ತಾರೆ. ಚಿ​ತ್ರ​ರಂಗ ಉ​ಳಿ​ಯ​ಬೇ​ಕೆಂದರೆ ಫೈ​ರೆಸಿ ಹಾ​ವ​ಳಿ​ಯನ್ನು ತ​ಡೆ​ಯ​ಬೇಕು. ಪೈರ​ಸಿಗೆ ಯಾರೂ ಸ​ಹ​ಕಾರ ನೀ​ಡ​ಬಾ​ರದು. ಎ​ಲ್ಲರೂ ಚಿ​ತ್ರ​ಮಂದಿ​ರಕ್ಕೆ (Theater)  ಬಂದು ಚಿ​ತ್ರ​ವನ್ನು ವೀ​ಕ್ಷಿ​ಸ​ಬೇಕು ಎಂದು ಮನವಿ ನೀ​ಡಿ​ದರು.

ನಮ್ಮ ಅ​ಕ್ಕ​ಪ​ಕ್ಕದ ಉ​ದ್ಯ​ಮ​ಗ​ಳಲ್ಲಿ 250 ರಿಂದ 300 ಕೋಟಿ ರು. ಬಂಡ​ವಾಳ ಹೂಡಿ ಸಿ​ನಿಮಾ ಮಾ​ಡು​ತ್ತಾರೆ. ನ​ಮಗೆ ಒಂದು ಚೌ​ಕಟ್ಟು ಇ​ರುತ್ತೆ. ಅ​ದ​ರೊ​ಳಗೆ ನಾವು ಎ​ಲ್ಲ​ವನ್ನೂ ಮಾ​ಡ​ಬೇ​ಕಿದೆ. ಇ​ದನ್ನು ಜ​ನತೆ ಅರ್ಥ ಮಾ​ಡಿ​ಕೊ​ಳ್ಳ​ಬೇಕು ಎಂದರು.

ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ:

ರೈ​ಡರ್‌ (Rider)  ಚಿ​ತ್ರದ ಬಗ್ಗೆ ಅ​ಭಿ​ಮಾ​ನಿ​ಗಳು, ಪ್ರೇ​ಕ್ಷ​ಕ​ರಿಂದ ಅ​ಭಿ​ಪ್ರಾಯ ಕೇಳಿ ತಿ​ಳಿ​ದು​ಕೊಂಡ ಬ​ಳಿಕ ಸು​ದ್ದಿಗಾ​ರ​ರೊಂದಿಗೆ ಮಾ​ತ​ನಾ​ಡಿ, ಸಿ​ನಿಮಾ (Cinema) ಮಾ​ಡು​ವುದು ಅಷ್ಟುಸು​ಲ​ಭ​ವಲ್ಲ. ಕೋ​ವಿಡ್‌ನಿಂದಾಗಿ (covid) ತುಂಬಾ ಸಂಕಷ್ಟ ಅ​ನು​ಭ​ವಿ​ಸಿ​ದ್ದೆವು. ಈ​ಗಷ್ಟೇ ಮತ್ತೆ ಚೇ​ತ​ರಿಕೆ ಕಾ​ಣು​ತ್ತಿದೆ. ಕೆ​ಲವು ಚಿ​ತ್ರ​ಗಳು ಈ​ಗಾ​ಗಲೇ ಬಿ​ಡು​ಗ​ಡೆ​ಯಾ​ಗಿವೆ. ಈಗ ನಮ್ಮ ಸ​ರದಿ ಎಂದರು.

ರೈ​ಡರ್‌ ಚಿತ್ರ ಕ​ಳೆದ ಶು​ಕ್ರ​ವಾ​ರ​ವಷ್ಟೇ ಬಿ​ಡು​ಗ​ಡೆ​ಯಾ​ಗಿದೆ. ಎ​ರಡು ದಿ​ನ​ಗ​ಳಿಂದ ಯ​ಶ​ಸ್ವಿ​ ಪ್ರ​ದರ್ಶನ ಕಾ​ಣು​ತ್ತಿದೆ. ಸಿ​ನಿಮಾ (Move) ನೋಡಿದ ಜ​ನ ಒ​ಳ್ಳೆಯ ಅ​ಭಿ​ಪ್ರಾ​ಯ​ವನ್ನು ವ್ಯ​ಕ್ತ​ಪ​ಡಿ​ಸು​ತ್ತಿ​ದ್ದಾರೆ. ಇದು ನ​ನಗೆ ಖುಷಿ ನೀ​ಡಿದೆ. ಈ​ಗಾ​ಗಲೇ ಬ​ಹ​ಳಷ್ಟು ಜಿಲ್ಲೆ​ಗ​ಳಿಗೆ ಭೇಟಿ ನೀ​ಡಿ​ದ್ದೇನೆ. ಇ​ವತ್ತು ಮಂಡ್ಯ (Mandya), ರಾ​ಮ​ನ​ಗರ, ಚ​ನ್ನ​ಪ​ಟ್ಟಣದಲ್ಲಿ ಚಿ​ತ್ರ​ಮಂದಿ​ರ​ಗ​ಳಿಗೆ ಭೇಟಿ ನೀಡಿದ್ದೇನೆ. ಚಿ​ತ್ರದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ. ಇದು ನನಗೆ ಸಂತೋಷ ತಂದಿದೆ ಎಂದು ಹೇ​ಳಿ​ದರು.

ನ​ಗ​ರ​ಸಭೆ ಅ​ಧ್ಯಕ್ಷ ಎಚ್‌.ಎಸ್‌.ಮಂಜು, ಜೆ​ಡಿ​ಎಸ್‌ ಜಿ​ಲ್ಲಾ​ಧ್ಯಕ್ಷ ಡಿ.ರ​ಮೇಶ್‌, ಜಿಪಂ ಮಾಜಿ ಸ​ದಸ್ಯ ಎಚ್‌.ಎನ್‌.ಯೋ​ಗೇಶ್‌ ಇ​ತ​ರರಿದ್ದರು.

 ಚಿತ್ರ ಮಾಡೋದಕ್ಕೆ ತುಂಬಾ ಶ್ರಮ ಪಡಬೇಕು

ಸಾ​ಮಾ​ನ್ಯ​ವಾಗಿ ಕ​ಥೆಯೇ ಹೀರೋ. ಒ​ಳ್ಳೆಯ ಕಥೆ ಒ​ಳ್ಳೆಯ ಪಾ​ತ್ರ​ಧಾ​ರಿ​ಯಾ​ಗ​ಬೇಕು. ಸಿ​ನಿಮಾ ಯಾವ ರೀತಿ ಬಂದಿದೆ. ಯಾವ ಅಂಶ ಇಷ್ಟಆ​ಗಿದೆ. ಮುಂದೆ ನಾವು ಯಾವ ರೀತಿ ಕೆ​ಲಸ ಮಾ​ಡ​ಬೇಕು ಎಂಬು​ದರ ಬಗ್ಗೆ ಚಿಂತನೆ ಮಾ​ಡು​ತ್ತೇವೆ. ಸಿ​ನಿಮಾ ಮಾ​ಡೋ​ದಿಕ್ಕೆ ತುಂಬಾ ಶ್ರ​ಮ​ ಪ​ಡ​ಬೇಕು. ಪ್ರೇಕ್ಷ​ಕರು ಸಾ​ಮಾ​ನ್ಯ​ವಾಗಿ ಚೆ​ನ್ನಾ​ಗಿದೆ, ಚೆ​ನ್ನಾ​ಗಿಲ್ಲ. ಪ​ರ​ವಾ​ಗಿಲ್ಲ ಎಂದಷ್ಟೇ ಹೇ​ಳು​ತ್ತಾರೆ. ಆ​ದರೆ ಒಂದು ಚಿತ್ರ ನಿರ್ಮಿಸ​ಬೇ​ಕಾ​ದರೆ ಎ​ಲ್ಲರೂ ಎ​ಷ್ಟೊಂದು ಕಷ್ಟ ಅ​ನು​ಭ​ವಿ​ಸಿ​ರು​ತ್ತಾರೆ ಎಂಬುದು ಅ​ವ​ರಿಗೆ ಮಾತ್ರ ಗೊತ್ತು ಎಂದು ಹೇ​ಳಿ​ದರು.

ಚಿ​ತ್ರ​ರಂಗ​ದಲ್ಲಿ ಒ​ಳ್ಳೆಯ ಕ​ಲಾ​ವಿ​ದ​ನಾಗಿ ಜನ ನ​ನ್ನನ್ನು ಸ್ವೀ​ಕ​ರಿ​ಸಿ​ದ್ದಾರೆ. ಒ​ಳ್ಳೆಯ ಚಿ​ತ್ರ​ಗ​ಳನ್ನು ಕೊ​ಡ​ಬೇಕು. ನಾನು ಹಿಂತಿ​ರುಗಿ ನೋ​ಡಿ​ದಾಗ ಒ​ಳ್ಳೆಯ ಸಿ​ನಿಮಾ ಕೊ​ಟ್ಟಿ​ದ್ದೇನೆ ಎಂದು ನನ್ನ ಮ​ನ​ಸ್ಸಿಗೆ ತೃಪ್ತಿ ಸಿ​ಗ​ಬೇಕು ಎಂದರು.

ರಾ​ಜ​ಕೀಯ (Politics) ಎಂದು ಬಂದಾಗ ಅ​ದ​ರದ್ದೇ ಆದ ಜ​ವಾ​ಬ್ದಾ​ರಿ​ಗ​ಳಿವೆ. ರಾ​ಜ​ಕಾ​ರ​ಣದ ಬಗ್ಗೆ ರಾ​ಜ​ಕೀಯ (Politics) ವೇ​ದಿ​ಕೆ​ಯಲ್ಲಿ ಚರ್ಚೆ ಮಾ​ಡು​ತ್ತೇನೆ ಎಂದು ತಮ್ಮ ರಾ​ಜ​ಕೀಯ ಕ್ಷೇ​ತ್ರದ ಬಗ್ಗೆ ಕೇ​ಳ​ಲಾದ ಪ್ರ​ಶ್ನೆಗೆ ಪ್ರ​ತಿ​ಕ್ರಿ​ಯಿ​ಸಿ​ದರು.

 ಕಾನೂನು ಹೋರಾಟ ನಡೆಸುತ್ತೇವೆ: ನಿಖಿಲ್‌

 ತಮಿಳಿನ  ವೆಬ್‌ಸೈಟ್‌ ಒಂದರಿಂದ ‘ರೈಡರ್‌’ ಚಲನಚಿತ್ರ ಪೈರಸಿಯಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಚಿತ್ರನಟ ನಿಖಿಲ್‌ ಕುಮಾರ್‌ಸ್ವಾಮಿ ತಿಳಿಸಿದ್ದಾರೆ.  ಪೈರಸಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇದರಿಂದ ಚಿತ್ರೋದ್ಯಮದ ಮೇಲೆ ಗಂಭೀರ ಪರಿಣಾಮಗಳಾಗುತ್ತಿದ್ದು, ಚಿ​ತ್ರ​ರಂಗ ಉ​ಳಿ​ಯ​ಬೇ​ಕೆಂದರೆ ಪೈರಸಿ ಹಾ​ವ​ಳಿ​ಯನ್ನು ತ​ಡೆ​ಯ​ಬೇಕು ಎಂದು ಹೇಳಿದ್ದಾರೆ.

ಜ. 18ಕ್ಕೆ ಮ​ತ್ತೊಂದು ಚಿತ್ರ ಸೆ​ಟ್ಟೇ​ರ​ಲಿದೆ. ಅ​ದರ ಬಗ್ಗೆ ಈ​ಗಲೇ ಹೇ​ಳಿ​ದರೆ ಕು​ತೂ​ಹಲ ಇ​ರು​ವು​ದಿಲ್ಲ. ಚಿತ್ರ ನಿರ್ಮಾಪ​ಕರು, ನಿರ್ದೇಶ​ಕರೂ ಬೇ​ಸರ ಮಾ​ಡಿ​ಕೊ​ಳ್ಳು​ತ್ತಾರೆ. ಮುಂದಿನ ದಿ​ನ​ಗ​ಳಲ್ಲಿ ತಿ​ಳಿ​ಸು​ತ್ತೇನೆ. ಮಂಡ್ಯಕ್ಕೆ ಹ​ತ್ತಿ​ರ​ವಾದ ಸಿ​ನಿಮಾ ನಿರ್ಮಾಣ​ವಾ​ಗು​ತ್ತದೆ ಎಂದು ಚು​ಟು​ಕಾಗಿ ಉ​ತ್ತ​ರಿ​ಸಿ​ದರು.

Follow Us:
Download App:
  • android
  • ios