“ನಿಜವಾದ ಧೈರ್ಯ ಮತ್ತು ಸಾಹಸ ಎಂದರೆ ಇದೇ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಗುಂಡಿನ ದಾಳಿಯ ಬಳಿಕವೂ ಗಾಬರಿಯಾಗದೆ ಚಾಲಕನ ಸೀಟ್‌ಗೆ ಬಂದು ಕಾರು ಚಲಾಯಿಸಿದ ಟೈಗರ್ ಶ್ರಾಫ್ ಅವರ ಸಮಯಪ್ರಜ್ಞೆ ಅದ್ಭುತ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನೆಲ್ಲಾ ಆಯ್ತು ನೋಡಿ ಈ ಸ್ಟೋರಿಯಲ್ಲಿ..

ಗುಂಡಿನ ದಾಳಿ ಬಳಿಕ ಡ್ರೈವಿಂಗ್ ಮಾಡಿ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದ ಟೈಗರ್ ಶ್ರಾಫ್. Tiger Shroff for moving to driver seat and taking him to Nanavati hospital after gun fire incident. 

ಗುಂಡಿನ ದಾಳಿ ಬಳಿಕ ಚಾಲಕನ ಜೀವ ಉಳಿಸಲು ಮುಂದಾದ ಟೈಗರ್ ಶ್ರಾಫ್; ‘ನಿಜವಾದ ಧೈರ್ಯ ಅಂದ್ರೆ ಇದೇ’ ಎಂದ ನೆಟ್ಟಿಗರು!

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮುಂಬೈನಲ್ಲಿ ನಡೆದ ಗುಂಡಿನ ದಾಳಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ, ಈ ಘಟನೆಯ ಬಳಿಕ ನಟ ತೋರಿದ ಸಮಯಪ್ರಜ್ಞೆ ಮತ್ತು ಮಾನವೀಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡ ತಮ್ಮ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಟೈಗರ್ ಸ್ವತಃ ಡ್ರೈವರ್ ಸೀಟ್‌ಗೆ ತೆರಳಿ ಕಾರು ಚಲಾಯಿಸಿದ್ದಾರೆ ಎನ್ನಲಾದ ವಿಡಿಯೋ ಇದೀಗ ಗಮನ ಸೆಳೆಯುತ್ತಿದೆ.

ಭಾನುವಾರ ಸಂಜೆ ಜುಹೂ ಪ್ರದೇಶದ ಫುಟ್‌ಬಾಲ್ ಕ್ಲಬ್‌ನಿಂದ ಮನೆಗೆ ಮರಳುತ್ತಿದ್ದ ವೇಳೆ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ಕಾರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾರಿನಲ್ಲಿದ್ದ ಚಾಲಕ ಫಿರ್ದೌಸ್ ಗಾಯಗೊಂಡಿದ್ದು, ಟೈಗರ್ ಶ್ರಾಫ್ ಯಾವುದೇ ಗುಂಡೇಟಿನ ಗಾಯಗಳಿಲ್ಲದೆ ಪಾರಾಗಿದ್ದಾರೆ. ಗನ್‌ಪೌಡರ್ ಮತ್ತು ಒಡೆದ ಗಾಜಿನ ಚೂರುಗಳಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.

ಚಾಲಕನಿಗಾಗಿ ತಾವೇ ಕಾರು ಚಲಾಯಿಸಿದ ನಟ!

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಚಾಲಕ ಗಾಯಗೊಂಡ ಬಳಿಕ ಟೈಗರ್ ಶ್ರಾಫ್ ಡ್ರೈವರ್ ಸೀಟ್‌ಗೆ ಬಂದು ಕಾರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯವಿದೆ ಎನ್ನಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ನೆರವಿಗಾಗಿ ಕಾಯದೆ ಗಾಯಾಳು ಚಾಲಕನಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮಾಡಿದ ಅವರ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿಯೊಂದರ ಪ್ರಕಾರ, ಚಾಲಕ ಫಿರ್ದೌಸ್ ಅವರ ಎಡಗೈನಲ್ಲಿ ಗುಂಡಿನ ಗಾಯದಿಂದಾಗಿ ವಿದೇಶಿ ವಸ್ತುವೊಂದು ಸಿಲುಕಿರುವುದು ಪ್ರಾಥಮಿಕ ಸ್ಕ್ಯಾನ್‌ನಲ್ಲಿ ಕಂಡುಬಂದಿದೆ. ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ನಿಜವಾದ ಹೀರೋ ಅಂದ್ರೆ ಇವರೇ!’

ವಿಡಿಯೋ ನೋಡಿದ ನೆಟ್ಟಿಗರು ಟೈಗರ್ ಅವರ ಸಮಯಪ್ರಜ್ಞೆಯನ್ನು ಕೊಂಡಾಡುತ್ತಿದ್ದಾರೆ. “ನಿಜವಾದ ಧೈರ್ಯ ಮತ್ತು ಸಾಹಸ ಎಂದರೆ ಇದೇ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಗುಂಡಿನ ದಾಳಿಯ ಬಳಿಕವೂ ಗಾಬರಿಯಾಗದೆ ಚಾಲಕನ ಸೀಟ್‌ಗೆ ಬಂದು ಕಾರು ಚಲಾಯಿಸಿದ ಟೈಗರ್ ಶ್ರಾಫ್ ಅವರ ಸಮಯಪ್ರಜ್ಞೆ ಅದ್ಭುತ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಗುಂಡಿನ ದಾಳಿಯ ಹಿಂದಿನ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂಬೈ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಚಾಲಕನ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಟೈಗರ್ ಶ್ರಾಫ್ ಅವರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದು, ಅಭಿಮಾನಿಗಳು ಅವರನ್ನು ನಿಜ ಜೀವನದ ಹೀರೋ ಎಂದು ಬಣ್ಣಿಸುತ್ತಿದ್ದಾರೆ.