ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ‘ವೈ ದಿಸ್ ಕೊಲವೆರಿ ಡಿ’ ಸೇರಿದಂತೆ ಹಲವು ಜನಪ್ರಿಯ ಹಾಡುಗಳ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ಅನಿರುದ್ಧ್, ತಮ್ಮ ಸಂಗೀತದ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ಮದುವೆಯ ವಿಚಾರ ಅಭಿಮಾನಿಗಳ ಗಮನ ಸೆಳೆದಿದೆ. ಜೊತೆಗೆ, ಹಳೆಯ ಲವ್ ಸ್ಟೋರಿಗಳೂ ಸೌಂಡ್ ಮಾಡ್ತಿವೆ!
ಕಾವ್ಯ ಮಾರನ್ ಜೊತೆ ಅನಿರುದ್ಧ್ ಮದುವೆ? ಗ್ರೀಸ್ನಲ್ಲಿ ಅದ್ಧೂರಿ ವಿವಾಹದ ಸುದ್ದಿ ವೈರಲ್!
ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ (Anirudh Ravichander and Kaviya Maran) ಅವರ ಮದುವೆಯ ವಿಚಾರ ಈಗ ಸಿನಿಮಾ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸನ್ ನೆಟ್ವರ್ಕ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯ ಮಾರನ್ ಜೊತೆ ಅನಿರುದ್ಧ್ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆ ಇವರಿಬ್ಬರ ನಡುವೆ ಪ್ರೀತಿಯಿದೆ ಎಂಬ ಮಾತುಗಳು ಕೇಳಿಬಂದಿದ್ದರೂ, ಇದೀಗ ಮದುವೆಯ ಆಹ್ವಾನ ಪತ್ರಿಕೆಗಳ ಫೋಟೋಗಳು ವೈರಲ್ ಆಗಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಗ್ರೀಸ್ನಲ್ಲಿ ಅದ್ಧೂರಿ ವಿವಾಹ?
ಮೂಲಗಳ ಪ್ರಕಾರ, ಅನಿರುದ್ಧ್ ಮತ್ತು ಕಾವ್ಯ ಮಾರನ್ ಅವರ ವಿವಾಹ ಮುಂದಿನ ತಿಂಗಳು ಗ್ರೀಸ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎನ್ನಲಾಗಿದೆ. ನವೆಂಬರ್ 21ರಂದು ಚೆನ್ನೈನಲ್ಲಿ ಗಣ್ಯರಿಗಾಗಿ ವಿಶೇಷ ವಿವಾಹ ಆರತಕ್ಷತೆ ಆಯೋಜಿಸಲಾಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಈ ಮದುವೆಯ ಕುರಿತು ಅಧಿಕೃತ ದೃಢೀಕರಣ ಲಭ್ಯವಾಗುವವರೆಗೆ ಇದನ್ನು ವರದಿಯಾಗಿರುವ ಮಾಹಿತಿಯಾಗಿಯೇ ಪರಿಗಣಿಸಬೇಕಿದೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬಿಆರ್ಎಸ್ ನಾಯಕ ಕೆಟಿಆರ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಸಚಿವ ನಾರಾ ಲೋಕೇಶ್ ಅವರಿಗೆ ಆಹ್ವಾನ ನೀಡಲಾಗಿದೆ ಎನ್ನಲಾದ ಫೋಟೋಗಳು ವೈರಲ್ ಆಗಿವೆ. ಕಲಾನಿಧಿ ಮಾರನ್ ಅವರ ಕುಟುಂಬದ ಅಪಾರ ಉದ್ಯಮ ಸಾಮ್ರಾಜ್ಯ ಮತ್ತು ಕಾವ್ಯ ಮಾರನ್ ಅವರ ಹಿನ್ನೆಲೆಯಿಂದಾಗಿ ಈ ಮದುವೆಯ ಸುದ್ದಿ ಮತ್ತಷ್ಟು ಗಮನ ಸೆಳೆಯುತ್ತಿದೆ.
ಅನಿರುದ್ಧ್ ಹಳೆಯ ಪ್ರೇಮದ ಸುದ್ದಿಗಳೂ ಮುನ್ನೆಲೆಗೆ!
ಮದುವೆಯ ವದಂತಿಗಳ ಬೆನ್ನಲ್ಲೇ ಅನಿರುದ್ಧ್ ಅವರ ಹಿಂದಿನ ವೈಯಕ್ತಿಕ ಜೀವನದ ಕುರಿತ ಚರ್ಚೆಗಳೂ ಆರಂಭವಾಗಿವೆ. ನಟಿ ಆಂಡ್ರಿಯಾ ಜೆರೆಮಿಯಾ ಜೊತೆ ಅನಿರುದ್ಧ್ ಹೆಸರು ಹಿಂದೆ ತಳುಕುಹಾಕಿಕೊಂಡಿತ್ತು. ಇಬ್ಬರೂ ಹಲವು ವರ್ಷಗಳ ಕಾಲ ಸಂಬಂಧದಲ್ಲಿದ್ದರು ಎಂಬ ವದಂತಿಗಳು ಆಗ ಸಿನಿಮಾ ವಲಯದಲ್ಲಿ ಸದ್ದು ಮಾಡಿದ್ದವು. ಆದರೆ ಅವರ ಸಂಬಂಧದ ಕುರಿತು ಕೇಳಿಬಂದ ಎಲ್ಲ ಮಾಹಿತಿಗಳೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಇದಲ್ಲದೆ, ನಟಿಯರಾದ ಪ್ರಿಯಾ ಆನಂದ್ ಮತ್ತು ಕೀರ್ತಿ ಸುರೇಶ್ ಹಾಗೂ ಗಾಯಕಿ ಜೋನಿತಾ ಗಾಂಧಿ ಜೊತೆಗೂ ಅನಿರುದ್ಧ್ ಹೆಸರು ಕೇಳಿಬಂದಿತ್ತು. ಈ ವಿಚಾರಗಳೂ ಹೆಚ್ಚಾಗಿ ವದಂತಿಗಳ ರೂಪದಲ್ಲೇ ಚರ್ಚೆಯಾಗಿದ್ದವು.
ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ
‘ವೈ ದಿಸ್ ಕೊಲವೆರಿ ಡಿ’ ಸೇರಿದಂತೆ ಹಲವು ಜನಪ್ರಿಯ ಹಾಡುಗಳ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ಅನಿರುದ್ಧ್, ತಮ್ಮ ಸಂಗೀತದ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ಮದುವೆಯ ವಿಚಾರ ಅಭಿಮಾನಿಗಳ ಗಮನ ಸೆಳೆದಿದೆ. ಕಾವ್ಯ ಮಾರನ್ ಜೊತೆಗಿನ ವಿವಾಹದ ಸುದ್ದಿ ನಿಜವೇ ಎಂಬುದನ್ನು ತಿಳಿಯಲು ಅಭಿಮಾನಿಗಳು ಅಧಿಕೃತ ಪ್ರಕಟಣೆಯ ನಿರೀಕ್ಷೆಯಲ್ಲಿದ್ದಾರೆ.


