ಮಲಯಾಳಂನ ಮಮ್ಮುಟ್ಟಿ, ಮೋಹನ್ ಲಾಲ್, ಕಾವ್ಯಾ ಮಾಧವನ್, ತಮಿಳಿನ ವಿಜಯ್, ಸೂರ್ಯ, ಕಾಜಲ್‌ ಸೇರಿ ಪ್ರಮುಖ ಸೌತ್‌ ಇಂಡಿಯನ್ ತಾರೆಗಳ ಜೊತೆ ಕೆಲಸ ಮಾಡಿದ್ದ, ಬಾಡಿಗಾರ್ಡ್ ಮರನಲ್ಲೂರ್ ದಾಸ್(47) ಮೃತಪಟ್ಟಿದ್ದಾರೆ. ತಿರುವನಂತಪುರದ ವೈದ್ಯಕೀಯ ಕಾಲೇಜಿನಲ್ಲಿ ಜಾಂಡೀಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಅಗಲಿಕೆಗೆ ಸಿನಿ ತಾರೆಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ಸಿನಿಮಾ ಲೋಕದಲ್ಲಿ ಸೆಲೆಬ್ರಿಟಿಗಳಿಗೆ ಸೆಕ್ಯುರಿಟಿ ಕಾನ್ಸೆಪ್ಟ್ ಆರಂಭಿಸಿದವರೇ ದಾಸ್. ಪ್ರಮುಖ ನಟ ನಟಿಯರಿಗೆ ಭದ್ರತೆ ಒದಗಿಸಿದ ದಾಸ್ ಸೆಕ್ಯರಿಟಿ ವಿಭಾಗದಲ್ಲಿ ಗುರುತಿಸಿಕೊಂಡವರಾಗಿದ್ದರು.

ನದಿಯೊಳಗಿಂದ ಅಚಾನಕ್ಕಾಗಿ ಪ್ರತ್ಯಕ್ಷವಾಯ್ತು 500 ವರ್ಷ ಹಳೆಯ ವಿಷ್ಣು ದೇವಸ್ಥಾನ!

ನಂತರದಲ್ಲಿ ಗಲ್ಫ್‌ಗೆ ಹೋದರೂ, ಇಂಡಿಯನ್ ಸಿನಿಮಾ ಲೋಕದ ಜೊತೆಗೇ ತಮ್ಮ ನಂಟು ಎಂದು ಮನವರಿಕೆ ಮಾಡಿಕೊಂಡ ಅವರು ಹಿಂತಿರುಗಿ ಸಿನಿಮಾ ಕ್ಷೇತ್ರಕ್ಕೇ ಬಂದಿದ್ದರು. ಮೋಹನ್‌ ಲಾಲ್ ಸಿನಿಮಾದ ಸೆಟ್‌ನಲ್ಲಿ ಕೆಲಸ ಆರಂಭಿಸಿದ ಅವರು ನಂತರ ಪಾಲುಂಕು ಸಿನಿಮಾದಲ್ಲಿ ಮಮ್ಮುಟ್ಟಿಗೆ ಗಾರ್ಡ್ ಆಗಿದ್ದರು. ನಂತರದಲ್ಲಿ ಅವರು ತಿರುಗಿ ನೋಡಲೇ ಇಲ್ಲ. ಕಳೆದ 25 ವರ್ಷವೂ ದಾಸ್‌ ಟೀಮ್ ದಕ್ಷಿಣ ಭಾರತದ ಸಿನಿಮಾ ಲೋಕದ ಜೊತೆಗೇ ಇತ್ತು.

ಹಲವು ಸಲ ಸ್ಟಾರ್‌ಗಳ ಮೇಲೆ ಎರಗಿ ಬರುವ ಅತೀರೇಕವಾಗಿ ಆಡುವ ಫ್ಯಾನ್ಸ್‌ಗಳಿಂದ ಸೆಲೆಬ್ರಿಟಗಳನ್ನು ರಕ್ಷಿಸುತ್ತಾ ಬಂದಿರುವ ದಾಸ್ ಕ್ರೌಡ್ ದಾಸನ್ ಎಂದೇ ಗುರುತಿಸಲ್ಪಟ್ಟಿದ್ದಾರೆ. ತನ್ನ ಸಂಗಡಿಗರೊಂದಿಗೆ ಇಂಡಸ್ಟ್ರಿಗೆ ಬಂದಾಗ ದಾಸ್‌ಗೆ 15 ವರ್ಷ. ನಂತರದಲ್ಲಿ 25 ಮಂದಿ ಸದಸ್ಯರ ಭದ್ರತಾ ತಂಡವನ್ನೇ ಅವರು ರಚಿಸಿದ್ದರು.

ಕೊನೆಗೂ ಚಿರಂಜೀವಿ ಬಗ್ಗೆ ಬಾಯಿಬಿಟ್ಟ ಧ್ರುವ; ಅಣ್ಣನೇ 'My world'!

ಕಿರೀಡಂ ಉಣ್ಣಿ ಸಿನಿಮಾದ ಪ್ರೊಡ್ಯೂಸರ್‌ಗೆ ಭದ್ರತೆ ಒದಗಿಸಿ ಕೆಲಸ ಮಾಡಿದ ಅವರು ನಂತರ ಪ್ರಜಾ ಸಿನಿಮಾದಲ್ಲಿ ಮೋಹನ್‌ಲಾಲ್‌ಗೆ ಸೆಕ್ಯುರಿಟಿ ಒದಗಿಸಿದ್ದರು. ನಂತರದಲ್ಲಿ ದಿಲೀಪ್ ಮಮ್ಮುಟ್ಟಿ, ವಿಜಯ್‌ ಸೆಟ್‌ಗಳಲ್ಲಿಯೂ ಸೆಕ್ಯುರಿಟಿ ಒದಗಿಸಿದ್ದರು.ಹಿಂದಿಯ ಬಿಲ್ಲು ಬಾರ್ಬರ್ ಹಾಗೂ ಖಟ್ಟಾ ಮೀಟಾ ಸಿನಿಮಾ ಸೆಲೆಬ್ರಿಟಿಗಳಿಗೂ ಗಾರ್ಡ್‌ ಆಗಿದ್ದರು.