Asianet Suvarna News Asianet Suvarna News

ಕೋಮಲ್ ಮೇಲೆ ಹಲ್ಲೆ, ಜಗ್ಗೇಶ್ ಹೇಳಿದ ಇನ್‌ ’ಸೈಡ್’ ವಿಚಾರ

ನಟ ಕೋಮಲ್ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗುತ್ತಿದ್ದಂತೆ ಕೋಮಲ್ ಅವರ ಅಣ್ಣ ನವರಸ ನಾಯಕ ಜಗ್ಗೇಶ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

miscreants-assaults-on-sandalwood-actor-komal-kumar Brother Jaggesh Reaction
Author
Bengaluru, First Published Aug 13, 2019, 7:19 PM IST
  • Facebook
  • Twitter
  • Whatsapp

ಬೆಂಗಳೂರು[ಆ. 13]  ಸಹೋದರ ನಟ ಕೋಮಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ತಮ್ಮ ಮಗುವನ್ನು ಟ್ಯೂಶನ್ ಗೆ ಬಿಡಲಿಕ್ಕೆ ಹೋಗ್ತಾ ಇದ್ದರು. ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಬಳಿ ಘಟನೆ ನಡೆದಿದೆ. ನಾಲ್ಕು ಜನ ಬೈಕ್ ಸವಾರರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ.

ಮೂರು ಜನ ಕೋಮಲ್ ನನ್ನು ಹಿಡಿದುಕೊಂಡಿದ್ದಾರೆ. ಇನ್ನೊಬ್ಬ ಕೋಮಲ್ ಮೇಲೆ ಹಲ್ಲೆ ಮಾಡಿದ್ದಾನೆ. ನಾಲ್ಕು ಜನ ಕುಡಿದು ಹೊಡೆದಿದ್ದಾರೆ. ಈ ರೀತಿಯ ಘಟನೆ ಬೆಂಗಳೂರಿನಲ್ಲಿ ಆಗಬಾರದು ಎಂದು ಜಗ್ಗೇಶ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಟ ಕೋಮಲ್ ಮೇಲೆ ಹಲ್ಲೆ, ಬಾಯಲ್ಲಿ ರಕ್ತ

ನನ್ನ ತಮ್ಮ ಅಥವಾ ನಟ ಅಂತ ಅಲ್ಲ, ಯಾವ ಜನರಿಗೂ ಕೂಡ ಹೀಗೆ ಆಗಬಾರದು. ಕುಡಿದು, ಗಾಂಜಾ ಹೊಡೆದು ಈ ರೀತಿ ಬೆಂಗಳೂರು ನಗರದಲ್ಲಿ ನಡೆದಿದೆ ಅಂದರೆ ಏನು ಅರ್ಥ? ಯಾರು ಏನ್ ಮಾಡಿದ್ದಾರೆ ಅಂತ ಗೊತ್ತಾಗುತ್ತೆ? ಇಂಡಸ್ಟ್ರಿಯವರು ಮಾಡಿದ್ದಾರಾ? ಅಥವಾ ಬೇರೆಯವರು ಮಾಡಿದ್ದಾರ ಗೊತ್ತಿಲ್ಲ.. ಎಂದು ಜಗ್ಗೇಶ್ ಹೇಳಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂಡಸ್ಟ್ರಿಯವರು ಮಾಡಿದ್ರೆ ಖಂಡಿತಾ ನಾನು ಬಿಡಲ್ಲ. ನಾನು ಮೂವತ್ತು ವರ್ಷದಿಂದ ಇಂಡಸ್ಟ್ರಿಯಲ್ಲೇ ಇರೋದು. ನಾನಾದ್ರೆ ಬ್ಯಾಡ್ ವರ್ಡ್ಸ್ ನಲ್ಲಿ ಬೈಯೋದು ಗೊತ್ತು. ಕೋಮಲ್ ಪಾಪದವನು,  ಅವನಿಗೆ ಇವೆಲ್ಲಾ ಗೊತ್ತಾಗಲ್ಲ  ಎಂದು ಹೇಳಿದ್ದಾರೆ.

ಇದೇ ಸುದ್ದಿಯನ್ನು ಇಂಗ್ಲಿಷ್ ನಲ್ಲಿ ಓದಲು ಕ್ಲಿಕ್ ಮಾಡಿ

 

Follow Us:
Download App:
  • android
  • ios