Asianet Suvarna News Asianet Suvarna News

ಹುಡುಗನೋರ್ವನ ಬಿಂದಾಸ್ ಬೆಲ್ಲಿ ಡಾನ್ಸ್‌ಗೆ ಮನಸೋತ ನೆಟ್ಟಿಗರು: ವೀಡಿಯೋ

ಇಲ್ಲೊಬ್ಬ ಹೆಣ್ಣು ಮಕ್ಕಳೇ ಹೆಚ್ಚಾಗಿ ಮಾಡುವ ಬೆಲ್ಲಿ ಡಾನ್ಸ್‌ನ್ನು ಹೆಣ್ಣು ಮಕ್ಕಳೂ ನಾಚುವಂತೆ ಮಾಡಿದ್ದು, ಆತನ ಡಾನ್ಸ್‌ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ವೆರೈಟಿ ಕಾಮೆಂಟ್ ಮಾಡಿದ್ದು, ಬಾಲಿವುಡ್ ನಟಿ ಡಾನ್ಸರ್‌ ನೂರ್ ಫತೇಹಿಗಿಂತಲೂ ನೀನೆ ಚೆಂದ ಡಾನ್ಸ್‌ ಮಾಡಿದ್ದೀಯಾ ಎಂದು ಕಾಮೆಂಟ್ ಮಾಡಿದ್ದಾರೆ. 

Mans belly dance create storms in Internet watch this viral video akb
Author
First Published Oct 19, 2023, 2:56 PM IST

ನೃತ್ಯಕ್ಕೆ ಲಿಂಗ ಬೇಧವಿಲ್ಲ, ಸಂಗೀತಾದ ಸದ್ದಿಗೆ ತಮಟೆ ಬೀಟ್‌ಗೆ ದೇಶ ಭಾಷೆ, ಪ್ರದೇಶವೆಂಬ ಇತಿಮಿತಿಗಳಿಲ್ಲದೇ ಎಲ್ಲರೂ ಹೆಜ್ಜೆ ಹಾಕುತ್ತಾರೆ. ಅದೇ ರೀತಿ ಇಲ್ಲೊಬ್ಬ ಹೆಣ್ಣು ಮಕ್ಕಳೇ ಹೆಚ್ಚಾಗಿ ಮಾಡುವ ಬೆಲ್ಲಿ ಡಾನ್ಸ್‌ನ್ನು ಹೆಣ್ಣು ಮಕ್ಕಳೂ ನಾಚುವಂತೆ ಮಾಡಿದ್ದು, ಆತನ ಡಾನ್ಸ್‌ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ವೆರೈಟಿ ಕಾಮೆಂಟ್ ಮಾಡಿದ್ದು, ಬಾಲಿವುಡ್ ನಟಿ ಡಾನ್ಸರ್‌ ನೂರ್ ಫತೇಹಿಗಿಂತಲೂ ನೀನೆ ಚೆಂದ ಡಾನ್ಸ್‌ ಮಾಡಿದ್ದೀಯಾ ಎಂದು ಕಾಮೆಂಟ್ ಮಾಡಿದ್ದಾರೆ. 

ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಭೆ ಇದು ಅವಕಾಶ ಸಿಕ್ಕಿಲ್ಲ ಎಂದು ಅಳಬೇಕಾದ ಅಗತ್ಯವಿಲ್ಲ, ಪ್ರತಿಭೆ ಇರುವ ಪ್ರತಿಯೊಬ್ಬರು ತಮಗೆ ತಾವೇ ಆನ್‌ಲೈನ್ ವೇದಿಕೆ ಸಿದ್ದಪಡಿಸಿಕೊಂಡು ತಮ್ಮ ಟ್ಯಾಲೆಂಟ್ ಹೊರ ಹಾಕುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಸಾವಿರಾರು ಜನ ವೀಕ್ಷಿಸಿ ಕಾಮೆಂಟ್ ಮಾಡುವುದರ ಜೊತೆ ಜೊತೆಗೆ ಮೆಚ್ಚುಗೆ ಸೂಚಿಸುತ್ತಾರೆ. ಅದೇ ರೀತಿ ಇಲ್ಲಿ ಈ ಯುವಕನ ಸಖತ್ ಆಗಿ ಬೆಲ್ಲಿ ಡಾನ್ಸ್ ಮಾಡಿದ್ದು, ಯುವಕನ ನೃತ್ಯಕ್ಕೆ ಜನ ಶಬಾಷ್ ಎಂದಿದ್ದಾರೆ. 

ರೈಲಿನ ಕಿಚನ್‌ನಲ್ಲಿ ಇಲಿಗಳ ಬಿಂದಾಸ್ ಆಟ: ಆಹಾರದ ಮೇಲೆಲ್ಲಾ ಓಡಾಟ: ವೀಡಿಯೋ

@desimojito ಎಂಬ ಟ್ವಿಟ್ಟರ್ ಪೇಜ್‌ನಿಂದ ಈ 42 ಸೆಕೆಂಡ್‌ಗಳ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  ಓರ್ವ ಯುವಕ ಯಾವ ಹೆಣ್ಣು ಮಕ್ಕಳಿಗೂ ಕಡಿಮೆ ಇಲ್ಲದಂತೆ ಸೊಂಟ ಬಳುಕಿಸಿದ್ದಾನೆ. ಪ್ರತಿಯೊಂದು ಚಲನೆಯನ್ನು ಕೂಡ ಅಷ್ಟೇ ಸೊಬಗಿನಿಂದ ಯುವಕ ಮಾಡಿದ್ದು, ಜನ ಕಣ್ಣು ಕಣ್ಣ್ರೆಪ್ಪೆ ಬಡಿಯದೇ ಈ ಡಾನ್ಸ್‌ನ್ನು ನೋಡಿದ್ದಾರೆ.  ಪರಿಣಾಮ ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಪ್ರತಿಭೆಗೆ ಲಿಂಗಭೇದವಿಲ್ಲ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಈತ ನೋರಾ ಫತ್ಹೇಹಿಯ ಅವಳಿ ಸೋದರನಾಗಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಡಾಬರ್‌ ಉತ್ಪನ್ನದಲ್ಲಿ ಕ್ಯಾನ್ಸರ್ ಕಾರಕ ಅಂಶ: ಅಮೆರಿಕಾ ಕೆನಡಾದಲ್ಲಿ ಕೇಸ್

 

Follow Us:
Download App:
  • android
  • ios