Asianet Suvarna News Asianet Suvarna News

ಡಾಬರ್‌ ಉತ್ಪನ್ನದಲ್ಲಿ ಕ್ಯಾನ್ಸರ್ ಕಾರಕ ಅಂಶ: ಅಮೆರಿಕಾ ಕೆನಡಾದಲ್ಲಿ ಕೇಸ್

ಡಾಬರ್‌ ಇಂಡಿಯಾದ ಉತ್ಪನ್ನದಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂದು ಅಮೆರಿಕಾ ಹಾಗೂ ಕೆನಡಾದಲ್ಲಿ ಗ್ರಾಹಕರು ದೂರು ದಾಖಲಿಸಿದ್ದಾರೆ ಎಂದು ಸ್ವತಃ ಡಾಬರ್ ಇಂಡಿಯಾ ಸಂಸ್ಥೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

Carcinogenicity in a Dabur product 5,400 cases filed in US and Canada akb
Author
First Published Oct 19, 2023, 1:21 PM IST

ನವದೆಹಲಿ: ಡಾಬರ್‌ ಇಂಡಿಯಾದ ಉತ್ಪನ್ನದಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂದು ಅಮೆರಿಕಾ ಹಾಗೂ ಕೆನಡಾದಲ್ಲಿ ಗ್ರಾಹಕರು ದೂರು ದಾಖಲಿಸಿದ್ದಾರೆ ಎಂದು ಸ್ವತಃ ಡಾಬರ್ ಇಂಡಿಯಾ ಸಂಸ್ಥೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಕೂದಲು ಪೋಷಣೆಗೆಂದು ಹೆಸರಾದ ಕೆಲ ಉತ್ಪನ್ನಗಳ ಬಳಕೆಯಿಂದ ಅಂಡಾಶಯದ ಕ್ಯಾನ್ಸರ್‌, ಗರ್ಭಾಶಯದ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಿವೆ ಎಂದು ಅಮೆರಿಕಾ ಹಾಗೂ ಕೆನಡಾದಲ್ಲಿ ಜನ ಹಲವು ಪ್ರಮುಖ ಸಂಸ್ಥೆಗಳವ ವಿರುದ್ಧ ಕೇಸು ದಾಖಲಿಸಿದ್ದಾರೆ. ಕೇಸು ದಾಖಲಾಗಿರುವ ಸಂಸ್ಥೆಗಳ ಪಟ್ಟಿಯಲ್ಲಿ ನಮ್ಮ ಕೆಲ ಅಂಗಸಂಸ್ಥೆಗಳು ಕೂಡ ಸೇರಿವೆ ಎಂದು ಡಾಬರ್ ಇಂಡಿಯಾ ಹೇಳಿದೆ. 

ಪ್ರಸ್ತುತ ಮೊಕದ್ದಮೆ ದಾಖಲಾದ ಪ್ರಕರಣಗಳಲ್ಲಿ ಈ ಆರೋಪದ ಬಗ್ಗೆ ಪತ್ತೆ ಮಾಡುವ ಆರಂಭಿಕ ಹಂತದಲ್ಲಿವೆ.  ಈ ಆರೋಪಗಳು ಸಾಮನ್ಯವಲ್ಲದ ಅಪೂರ್ಣ ಅಧ್ಯಯನವನ್ನು ಆಧರಿಸಿವೆ ಎಂದು ಸಂಸ್ಥೆ ಹೇಳಿದೆ.  ಗ್ರಾಹಕ ಸರಕುಗಳ ಸಂಸ್ಥೆಯು ತನ್ನ ಅಂಗಸಂಸ್ಥೆಗಳಾದ ನಮಸ್ತೆ ಲ್ಯಾಬೊರೇಟರೀಸ್, ಡರ್ಮೊವಿವಾ ಸ್ಕಿನ್ ಎಸೆನ್ಷಿಯಲ್ಸ್ ಮತ್ತು ಡಾಬರ್ ಇಂಟರ್‌ನ್ಯಾಶನಲ್ (Dabur International) ಸೇರಿದಂತೆ ಹಲವಾರು ಕಂಪನಿಗಳ ವಿರುದ್ಧ ಸುಮಾರು 5,400 ಪ್ರಕರಣಗಳು ದಾಖಲಾಗಿವೆ. ಅಮೆರಿಕಾದ ಇಲಿನಾಯ್ಸ್‌ನಲ್ಲಿರುವ ಯುಎಸ್ ಜಿಲ್ಲಾ ನ್ಯಾಯಾಲಯದ ಮುಂದೆ ಈ ಎಲ್ಲಾ ಪ್ರಕರಣಗಳಿವೆ ಎಂದು ಡಾಬರ್ ಇಂಡಿಯಾ ಪ್ರಕಟಣೆಯಲ್ಲಿ ಹೇಳಿದೆ. 

ರೈಲಿನ ಕಿಚನ್‌ನಲ್ಲಿ ಇಲಿಗಳ ಬಿಂದಾಸ್ ಆಟ: ಆಹಾರದ ಮೇಲೆಲ್ಲಾ ಓಡಾಟ: ವೀಡಿಯೋ

ಡಾಬರ್ ಇಂಡಿಯಾವೂ ವಾಟಿಕಾ ಶಾಂಪೂ,  ಹೋನಿಟಸ್ ಎಂಬ ಕೆಮ್ಮಿನ ಸಿರಪ್‌ನ್ನು(Cough Syrup) ಮಾರಾಟ ಮಾಡುತ್ತದೆ. ಈ ಹಂತದಲ್ಲಿ ಪ್ರಕರಣದ ಇತ್ಯರ್ಥ ಅಥವಾ ತೀರ್ಪಿನ ಫಲಿತಾಂಶದಿಂದ ಸಂಸ್ಥೆಗೆ ಆಗುವ ಹಣಕಾಸಿನ ಪರಿಣಾಮಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದು ರಕ್ಷಣಾ ವೆಚ್ಚದ ಮಿತಿಯನ್ನು ಮೀರುವ ಸಾಧ್ಯತೆ ಇದೆ ಎಂದು ಹೇಳಿದೆ. 

ವಿದ್ಯಾರ್ಥಿನಿಯರಿಗೆ ಸ್ಕೂಟರ್‌, SCSTಗೆ 12 ಲಕ್ಷ: ಮತ್ತಷ್ಟು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

Follow Us:
Download App:
  • android
  • ios