800 ರೂ. ಕುರ್ತಾ ಬುಕ್ ಮಾಡಿ 79 ಸಾವಿರ ಕಳ್ಕೊಂಡ ಯುವತಿ, ನಡೆದಿದ್ದೇನು..?

ಆನ್‌ಲೈನ್ ಶಾಪಿಂಗ್ ಈಗಿನ ಟ್ರೆಂಡ್. ವಿಭಿನ್ನ ಶೈಲಿ, ವಿನ್ಯಾಸದ ಬಟ್ಟೆ ನೋಡಿ ಕೂಡಲೇ ಬುಕ್ ಮಾಡ್ತಾರೆ ಜನ. ಇದೇ ರೀತಿ ಆನ್‌ಲೈನ್‌ನಲ್ಲಿ ಕುರ್ತಾ ನೋಡಿ ಅದನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ 79 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 

lady lost 79 thousand in online fraud after booking 800 rupees kurtha

ಬೆಂಗಳೂರು(ನ.26): ಆನ್‌ಲೈನ್ ಶಾಪಿಂಗ್ ಈಗಿನ ಟ್ರೆಂಡ್. ವಿಭಿನ್ನ ಶೈಲಿ, ವಿನ್ಯಾಸದ ಬಟ್ಟೆ ನೋಡಿ ಕೂಡಲೇ ಬುಕ್ ಮಾಡ್ತಾರೆ ಜನ. ಇದೇ ರೀತಿ ಆನ್‌ಲೈನ್‌ನಲ್ಲಿ ಕುರ್ತಾ ನೋಡಿ ಅದನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ 79 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆನ್‌ಲೈನ್‌ನಲ್ಲಿ ಸಹಾಯ ಮಾಡುವ ರೀತಿ 79600 ರೂಪಾಯಿ ದೋಖಾ ಮಾಡಲಾಗಿದ್ದು. 800 ರೂಪಾಯಿ ಕುರ್ತಾ ಖರೀದಿಸಲು ಹೊರಟ ಮಹಿಳೆ 79 ಸಾವಿರ ಕಳೆದುಕೊಂಡಿದ್ದಾರೆ.

ಮಂಗಳೂರು: ಯೋಧರ ಐಡೆಂಟಿಟಿ ಕಾರ್ಡ್ ಬಳಸಿ ಆನ್‌ಲೈನ್‌ ವಂಚನೆ..!

ಆನ್ ಲೈನ್ ವಂಚಕರು ಶ್ರವಣ ಎಂಬ ಮಹಿಳೆಗೆ ಮೋಸ ಮಾಡಿದ್ದು, ಶ್ರವಣ ಈ ಕಾಮರ್ಸ್ ಆ್ಯಪ್ ಮೂಲಕ ಕುರ್ತಾ ಬುಕ್ ಮಾಡಿದ್ದಾರೆ. 800 ರೂಪಾಯಿ ಬೆಲೆ ಬಾಳುವ ಕುರ್ತಾ ಬುಕ್ ಮಾಡಿದ್ದ ಶ್ರವಣ ಅಕೌಂಟ್‌ನಿಂದ ಸಾವಿರ ಸಾವಿರ ಹಣ ಮಾಯವಾಗಿದೆ.

ಆಕೆಯ ಆರ್ಡರ್ ಸೈಟ್‌ ರಿಸೀವ್ ಮಾಡದ ಕಾರಣ ಆನ್‌ಲೈನ್‌ನಲ್ಲಿ ತೋರಿಸಿದ ಕಸ್ಟಮರ್ ಸರ್ವೀಸ್‌ಗೆ ಮಹಿಳೆ ಕರೆ ಮಾಡಿದ್ದಾರೆ. ಈ ವೇಳೆ ಆಕೆಗೆ ಅಪ್ಲಿಕೇಶನ್ ಕಳಿಸಿ ಲ್ ಮಾಡಲು ತಿಳಿಸಲಾಗಿದೆ. ಆಕೆ ಅಪ್ಲಿಕೇಶನ್‌ನಲ್ಲಿರುವ ಬ್ಯಾಂಕ್ ಡೀಟೇಲ್ಸ್ ಫಿಲ್ ಮಾಡಿದ್ದಾಳೆ. ಫಿಲ್ ಮಾಡಿದ ಕೆಲ ನಿಮಿಷದಲ್ಲಿ ಮಹಿಳೆಗೆ ಓಟಿಪಿ ಬಂದಿದೆ. ಕಸ್ಟಮರ್ ಕೇರ್ ವ್ಯಕ್ತಿ ಓಟಿಪಿ ಕಳುಹಿಸಲು ತಿಳಿಸಿದ್ದಾನೆ. ನಿಜ ಇರಬಹುದು ಎಂದು ನಂಬಿ ಓಟಿಪಿ ಕಳುಹಿಸಿದ್ದ ಮಹಿಳೆಗೆ ತನ್ನ ಅಕೌಂಟ್‌ನಿಂದ ನಗದು ಖಾಲಿಯಾಗಿರುವುದು ಅರಿವಿಗೆ ಬಂದಿದೆ.

ಹೆಣ್ಣಿನ ಮಧುರ ಧ್ವನಿಗೆ ಮರುಳಾದ್ರೆ ನಿಮಗೂ ಇದೇ ಗತಿ..!

ತಕ್ಷಣ ಮಹಿಳೆ ಅಕೌಂಟ್ ನಿಂದ 79,600 ರೂಪಾಯಿ ಕಟ್ ಆಗಿದೆ. ತದನಂತರ ಇದು ಆನ್ ಲೈನ್ ಫ್ರಾಡರ್ಸ್ ಎಂದು ತಿಳಿದ ಮಹಿಳೆ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Latest Videos
Follow Us:
Download App:
  • android
  • ios