ಅಪ್ಪು ಅವ್ರು ಬಿಗ್ ಸ್ಟಾರ್, ಇಲ್ಲಿ ಇಷ್ಟು ಜನ ಕಾಯ್ತಾ ಇದೀವಿ; ಹೀಗಂದಿದ್ಯಾಕೆ 'ಕೋಟಿ' ಪರಮ್..?

ಹೀಗೆಲ್ಲಾ ನಾನು ಅವ್ರನ್ನ ನೋಡ್ತಾ ಇದ್ದೆ.. ಅಥವಾ, ಪ್ರತಿ ಸಾರಿ ಅವ್ರು ಸ್ಟುಡಿಯೋ ಒಳಗೆ ಬರುವಾಗ ಅದ್ರ ಬಾಗಿಲಿಗೆ ನಮಸ್ಕಾರ ಮಾಡದೇ ಬರ್ತಾ ಇರ್ಲಿಲ್ಲ. ನನಗೆ ಬಹಳ ಆಶ್ಚರ್ಯ ಆಗೋದು..

Kotee Movie director Param talks about sandalwood actor power star puneeth Rajkumar srb

ಕಲರ್ಸ್ ಕನ್ನಡ ಹಾಗು ಝೀ ಕನ್ನಡ ಸೇರಿದಂತೆ ಮನರಂಜನಾ ವಾಹಿನಿಗಳನ್ನು ದಶಕಗಳ ಕಾಲ ಆಳಿದ್ದ ಪರಮ್, ಅಂದ್ರೆ ಪರಮೇಶ್ವರ್ ಗುಂಡ್ಕಲ್ (Parameshwar Gundkal) ಬಹುತೇಕರಿಗೆ ಗೊತ್ತಿದೆ. ಸದ್ಯ ಪರಮ್ (Param) ನಿರ್ದೇಶನದ ಕೋಟಿ ಕನ್ನಡ ಸಿನಿಮಾ ನಿನ್ನೆ (14 June 2024) ರಾಜ್ಯಾದ್ಯಂತ ತೆರೆ ಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಡಾಲಿ ಧನಂಜಯ್ ಮುಖ್ಯ ಭೂಮಿಕೆಯ 'ಕೋಟಿ' ಚಿತ್ರದ ಮೂಲಕ ಪರಮೇಶ್ವರ್ ಗುಂಡ್ಕಲ್ ಅವರು 'ಪರಮ್' ಎನ್ನುವ ಶಾರ್ಟ್ ಹೆಸರಿನ ಮೂಲಕ ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಹೊಸ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿದ್ದಾರೆ.

ಇಂಥ ಪರಮ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ, ನಮ್ಮಿಂದ ದೂರಾಗಿರುವ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಬಗ್ಗೆ ಅಪರೂಪ ಎನಿಸುವ ಕೆಲವು ಮಾತುಗಳನ್ನು ಆಡಿದ್ದಾರೆ. ಪರಮ್ ಆಡಿರುವ ಮಾತುಗಳನ್ನೊಳಗೊಂಡ ಆ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗತೊಡಗಿವೆ. ಕೋಟಿ ಚಿತ್ರದ ಮೂಲಕ ಪರಮ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ಈ ಘಳಿಗೆಯಲ್ಲೇ ಅವರು ಅಪ್ಪು ಬಗ್ಗೆ ಮಾತನಾಡಿದ್ದು ವೈರಲ್ ಆಗಿದೆ. ಹಾಗಿದ್ದರೆ ಪರಮ್ ಅವರು ಅಪ್ಪು ಬಗ್ಗೆ ಅದೇನು ಹೇಳಿದ್ದಾರೆ?

ರೆಡ್ ಕಾರ್ಪೆಟ್ ಸ್ಟುಡಿಯೋ 777 ನಡೆಸುತ್ತಿದ್ರು ಪವಿತ್ರಾ ಗೌಡ; ವಿಜಯಲಕ್ಷ್ಮೀಗೆ ಟಾಂಗ್ ಕೊಡೋಕಾ?

'ಅಪ್ಪು ಅಂದ್ರೆ, ಅವ್ರು ತಗೊಂಡಿರುವ ಸ್ಥಾನವನ್ನು ಯಾರೂ ತಗಳ್ಳೋಕೆ ಸಾಧ್ಯವಿಲ್ಲ ಈ ರಾಜ್ಯದಲ್ಲಿ.. ನಾನ್ಯಾಕೆ ಹೀಗೆ ಹೇಳೋಕೆ ಬಂದೆ ಅಂದ್ರೆ, ನಂಗೆ ತುಂಬಾ ಕುತೂಹಲ ಆಗಿದ್ದು ಅಪ್ಪು ಅವ್ರು ಸಣ್ಣ ಸಣ್ಣ ವಿಷಯಗಳನ್ನು ಹೇಗೆ ಮಾಡ್ತಾರೆ ಅಂತ. ಅವ್ರು ಸ್ಟೇಜ್‌ ಮೇಲೆ ಏನ್ ಮಾಡ್ತಾರೆ ಅನ್ನೋದು ನನಗೆ ಮುಖ್ಯವೇ ಆಗ್ಲಿಲ್ಲ.. ಅಪ್ಪು ಅವ್ರನ್ನ ನಾನು ಅರ್ಥ ಮಾಡ್ಕೊಂಡಿದ್ದು ಅವ್ರ ಸಣ್ಣ ಸಣ್ಣ ನಡವಳಿಕೆಗಳಿಂದ. ಅವ್ರು ಮೇಕಪ್ ಹಾಕೋವಾಗ ಇಟ್ಕೊಂಡಿದ್ದ ಶ್ರದ್ಧೆಯಿಂದ.. ಅವ್ರು ಸ್ಟೇಜ್‌ಗೆ ಬರುವಾಗ ಮಾಡ್ತಾ ಇದ್ದ ನಮಸ್ಕಾರಗಳಿಂದ.. 

ಮುಂಗಾರು ಮಳೆ ಜೋಡಿ ಹೊಸ ಸಿನಿಮಾಗೆ ಆಯ್ಕೆಯಾದ 'ಆ ಬಿಗ್ ಸ್ಟಾರ್' ನಟ ಯಾರು?

ಹೀಗೆಲ್ಲಾ ನಾನು ಅವ್ರನ್ನ ನೋಡ್ತಾ ಇದ್ದೆ.. ಅಥವಾ, ಪ್ರತಿ ಸಾರಿ ಅವ್ರು ಸ್ಟುಡಿಯೋ ಒಳಗೆ ಬರುವಾಗ ಅದ್ರ ಬಾಗಿಲಿಗೆ ನಮಸ್ಕಾರ ಮಾಡದೇ ಬರ್ತಾ ಇರ್ಲಿಲ್ಲ. ನನಗೆ ಬಹಳ ಆಶ್ಚರ್ಯ ಆಗೋದು.. ಓಕೆ, ಅವ್ರು ಸ್ಟಾರ್, ಇಲ್ಲಿ ಇಷ್ಟು ಜನ ಕಾಯ್ತಾ ಇದೀವಿ, ಅವ್ರು ಅಷ್ಟು ವಿನಯದಿಂದ ನಡ್ಕೊಳ್ಳಬೇಕಾದ ಅವಶ್ಯಕತೆ ಇರ್ಲಿಲ್ಲ ಅವ್ರಿಗೆ.. ಅದ್ರೆ, ಅವ್ರು ಹಾಗೇ ಬರೋರು.. ಆದ್ರೆ ಕ್ಯಾಮೆರಾಗಾಗಿ, ಅಥವಾ ಜಗತ್ತಿನ ಮುಂದೆ ತೋರಿಸಿಕೊಳ್ಳಲು ಕ್ಯಾಮೆರಾ ಮುಂದೆ ಅವ್ರು ಹಾಗೆ ಮಾಡ್ತಾನೂ ಇರ್ಲಿಲ್ಲ. 

ದರ್ಶನ್-ಪವಿತ್ರಾ ಪರಿಚಯ ಆಗಿದ್ದೆಲ್ಲಿ? ಸಂಜಯ್ ಸಿಂಗ್ ಜತೆ ಡಿವೋರ್ಸ್‌ಗೆ ನಟಿ ಕೊಟ್ಟ ಕಾರಣವೇನು?

ಕಾರಣ, ಅಲ್ಲಿ ಯಾವುದೇ ಕ್ಯಾಮೆರಾ ಇರ್ತಾ ಇರ್ತಿರ್ಲಿಲ್ಲ, ಮೋಸ್ಟ್ ಆಫ್‌ ದ ಟೈಮ್ ಕತ್ತಲೇನೇ ಇರ್ತಾ ಇತ್ತು. ಬಟ್ ಅದನ್ನೇ ಮಾಡೋರು..ಎಂದಿದ್ದಾರೆ ಪರಮ್. ಅದೇ ರೀತಿ ಹಲವರು ಕೂಡ ಆ ಬಗ್ಗೆ ಹೇಳಿದ್ದಾರೆ. ಅಪ್ಪು ಅವ್ರಿಗೆ ಚಿಕ್ಕಚಿಕ್ಕ ಸಂಗತಿಗಳಲ್ಲಿಯೂ ಇರುವ ಅಪಾರ ಶ್ರದ್ಧೆ ಅವರು ಮಾಡುವ ಪ್ರತಿ ಕೆಲಸದಲ್ಲಿಯೂ ಎದ್ದು ಕಾಣುತ್ತಿತ್ತು. ಅದು ಅವರಪ್ಪ ಡಾ ರಾಜ್‌ಕುಮಾರ್ ಅವರಿಂದ ಬಂದ ಬಳುವಳಿಯೋ ಅಥವಾ ಅಷ್ಟು ಚಿಕ್ಕ ವಯಸ್ಸಿಗೇ ಬಂದ ಅನುಭವದ ಆಧಾರದಲ್ಲಿ ನಡೆದುಕೊಳ್ಳುತ್ತಿದ್ದ ರೀತಿಯೋ ಎಂಬುದು ಅವರಿಗೇ ಗೊತ್ತು. 

ರಾಕಿಂಗ್ ಸ್ಟಾರ್ ಯಶ್: ಹೀಯಾಳಿಸಿದವರ ಮುಂದೆ ಬೆಳೀಬೇಕು, ಹೊಗಳಿಸಿಕೊಳ್ಳಬೇಕು!

ಆದರೆ, ಅಪ್ಪು ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದವರಿಗೆ, ಇಂಥ ಅನೇಕ ಚಿಕ್ಕಪುಟ್ಟ ಸಂಗತಿಗಳು ನಟ ಪುನೀತ್ ರಾಜ್‌ಕುಮಾರ್ ಅವರಲ್ಲಿ ಇತ್ತು ಎಂಬುದು ಹಲವರಿಗೆ ತಿಳಿದಿದೆ. ಆಯುಷ್ಯ ಕಮ್ಮಿ ಇದ್ದರೂ ಆಧ್ಯಾತ್ಮಿಕ ಅಂಶಗಳು ನಟ ಅಪ್ಪು ಅವರಲ್ಲಿ ಇತ್ತು ಎಂಬುದನ್ನು ಹಲವರು ಗಮನಿಸಿದ್ದಾರೆ ಎನ್ನಬಹುದು.

Latest Videos
Follow Us:
Download App:
  • android
  • ios